- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ. ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***