Skip to main content

ದಲಿತ ಸಮುದಾಯಗಳ ಪೋಷಕರು ತಮ್ಮ ಮಕ್ಕಳನ್ನು ಬೆಳೆಸಬೇಕಾದ ಬಗೆ -ರಘೋತ್ತಮ ಹೊ.ಬ


ಆಗಾಗ ನಾನು ಕೆಲವೊಮ್ಮೆ ದಲಿತ ಸಮುದಾಯಗಳ ಶಾಲಾಮಕ್ಕಳನ್ನು ಗಮನಿಸುತ್ತಿರುತ್ತೇನೆ. ವಿಶೇಷವಾಗಿ ಹಳ್ಳಿಗಳಲ್ಲಿ. ಹಳ್ಳಿಗಳಲ್ಲಿ ಮಕ್ಕಳು ಅನ್ಯಜಾತಿಯ ಮಕ್ಕಳ ಜೊತೆ ಬೆರೆಯುವಾಗ ಹಿಂಜರಿಕೆ ತೋರುತ್ತವೆ, ಕೀಳು ಮನೋಭಾವದಿಂದ ನರಳುತ್ತವೆ. ಇದಕ್ಕೆ ಕಾರಣ ಆ ಮಕ್ಕಳ ಪೋಷಕರು. ಯಾಕೆಂದರೆ ನಮಗೆ ತಿಳಿದಂತೆ ಮಕ್ಕಳ ಮಾತು, ಕೃತಿ, ನಡತೆ ಎಲ್ಲವೂ ಪೋಷಕರು ಹೇಗೆ ವರ್ತಿಸುತ್ತಾರೊ ಹಾಗೆಯೇ ಇರುತ್ತವೆ. ಈ ನಿಟ್ಟಿನಲ್ಲಿ ಇದರ ಅಪಾಯವನ್ನು ದಲಿತ ಸಮುದಾಯಗಳ ಪೋಷಕರು ಅರಿಯಬೇಕು‌. ಅಕಸ್ಮಾತ್ ಅರಿಯದಿದ್ದರೆ ಬೇಜವಾಬ್ದಾರಿತನದಿಂದ ವರ್ತಿಸಿದರೆ ಖಂಡಿತ ಇದು ದಲಿತ ಸಮುದಾಯಗಳ ಪೋಷಕರು ತಮ್ಮ ಮಕ್ಕಳಿಗೆ ಕೊಡುವ ಕೆಟ್ಟ ಉಡುಗೊರೆಯಾಗುತ್ತದೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಕೊಡುಗೆಯಾಗುತ್ತದೆ.

ಉದಾಹರಣೆಗೆ ಹಳ್ಳಿಗಳಲ್ಲಿ ದಲಿತ ಸಮುದಾಯಗಳ ಪೋಷಕರು ಅನ್ಯ ಜಾತಿಯ ಜನರನ್ನು "ಸ್ವಾಮಿ, ಬುದ್ಧಿ, ಗೌಡ್ರೆ, ಯಜಮಾನ್ರೆ, ಅಪ್ಪೋ, ಅಮ್ಮೋ, ಅವ್ವಾರೆ, ಅಪ್ಪಾರೆ..." ಹೀಗೆ ಕರೆಯುತ್ತಾರೆ. ಅಂದಹಾಗೆ ಸಹಜವಾಗಿ ಇದನ್ನು ಅನುಕರಿಸುವ ಮಕ್ಕಳುಗಳು ಅನ್ಯ ಜಾತಿಗಳ ಮಕ್ಕಳುಗಳನ್ನು ಕೂಡ ಹಾಗೆಯೇ ಕರೆಯುತ್ತವೆ! ಅಥವಾ ಕರೆಯದಿದ್ದರೂ ಸದಾ ಹೆದರಿ ಸಂಭೋಧಿಸುತ್ತವೆ. ಇದು ಆ ಮಗುವಿನಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಬೆಳವಣಿಗೆಯ ಹಂತದಲ್ಲೇ ನಿರಂತರ ಕೀಳು ಮನೋಭಾವವನ್ನು ಹುಟ್ಟುಹಾಕುತ್ತಾ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಯಾವ ಮಟ್ಟಿಗೆಂದರೆ ಮುಂದೆ ಆತ ಓದಿ ದೊಡ್ಡ ಅಧಿಕಾರಿಯಾದರೂ ಆತನಲ್ಲಿ ಬೆಳೆದುಬಿಡುವ ಕೀಳು ಮನೋಭಾವ ಆತನಿಗೆ ತನ್ನ ಅಧಿಕಾರ ಚಲಾಯಿಸಲು ಬಿಡುವುದಿಲ್ಲ ಅಥವಾ ತಡೆಯಾಗುತ್ತದೆ. ಬರೀ ಅಷ್ಟೇ ಅಲ್ಲ, ದಲಿತ ಸಮುದಾಯದ ಮಗು ವಿದ್ಯಾರ್ಥಿ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳ ಮೇಲೂ ಇಂತಹ ಮನೋಭಾವ ದೊಡ್ಡ ಗೋಡೆಯಾಗಿ ಎದುರು ನಿಲ್ಲುತ್ತದೆ. ಖಂಡಿತ ಇದು ಅಪಾಯಕಾರಿ. ದಲಿತ ಸಮುದಾಯಗಳ ಪೋಷಕರು ನಿರಂತರವಾಗಿ ಬಹಳ ಗಂಭೀರವಾಗಿ ಗಮನಿಸಬೇಕಾದ ಅಂಶವಿದು.

ಯಾಕೆಂದರೆ ಒಮ್ಮೆ ಕೀಳು ಎಂಬ ಮನೋಭಾವವನ್ನು ಹೀಗೆ ಇಂತಹ ನಿರಂತರ ಪ್ರಕ್ರಿಯೆಗಳ ಮೂಲಕ ಹುಟ್ಟುಹಾಕಿದರೆ ಆ ಮನೋಭಾವ ಶಾಶ್ವತವಾಗಿ ಉಳಿದುಬಿಡುತ್ತದೆ. ಅಸ್ಪೃಶ್ಯತೆಯನ್ನು ಕಾನೂನು ನಿಷೇಧಿಸಿದರೂ ಹಾಗೆ ಉಳಿದುಬಿಡುವ ಶಾಶ್ವತ ಕೀಳು ಮನೋಭಾವ ನಿಷೇಧಿಸುವುದಿಲ್ಲ ಅಥವಾ ಅಸ್ಪೃಶ್ಯತೆಯಿಂದ ಹೊರಗಡೆ ಬರುವ ಮನೋಭಾವವನ್ನು ಅದು ದಲಿತ ಸಮುದಾಯದ ವ್ಯಕ್ತಿಗಳಲ್ಲಿ ಸೃಜಿಸುವುದಿಲ್ಲ. ಬದಲಿಗೆ ಗುಲಾಮನಿಗೆ ಗುಲಾಮಗಿರಿಯನ್ನು ಎಂಜಾಯ್ ಮಾಡುವಂತೆ ಅದು ಕಟ್ಟಿಹಾಕುತ್ತದೆ.

ಇದಕ್ಕೆ ಪರಿಹಾರ? ದಲಿತ ಸಮುದಾಯದ ಪೋಷಕರು ತಮಗಲ್ಲದಿದ್ದರೂ ಮಕ್ಕಳಿಗೋಸ್ಕರ ಅನ್ಯಜಾತಿಯ ಜನರನ್ನು "ಸ್ವಾಮಿ, ಬುದ್ಧಿ, ಯಜಮಾನ್ರೆ, ಗೌಡ್ರೆ, ಅಮ್ಮೋ, ಅಪ್ಪೋ, ಅವ್ವಾರೆ, ಅಪ್ಪಾರೆ..." ಹೀಗೆ ಸಂಬೋಧಿಸುವುದನ್ನು ಬಿಡಬೇಕು. ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ಮುಂದೆ ಅನ್ಯಜಾತಿ ಜನರೆದುರು ಕೀಳು ಜನರ ರೀತಿ ನಡೆದುಕೊಳ್ಳಬಾರದು ಅಥವಾ ನಡೆದುಕೊಳ್ಳುವುದರಿಂದ ದೂರ ಸರಿಯಬೇಕು. ಸಾಧ್ಯವಾದರೆ ದೌರ್ಜನ್ಯ ಬಯಸುವ, ದೌರ್ಜನ್ಯ ಮಾಡುವ ಅಂತಹ ಅನ್ಯಜಾತಿಯ ಜನರಿಂದ ಎಷ್ಟು ಸಾಧ್ಯವೋ ಅಷ್ಟು ಅಂತರ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಅಂತಹ ವಾತಾವರಣವೇ ಪರಿಚಯವಾಗದ ಹಾಗೆ ಬದುಕಬೇಕು. ಅಕಸ್ಮಾತ್ ಹಳ್ಳಿಗಳಲ್ಲಿ ಅಸ್ಪೃಶ್ಯತೆಯ ವಾತಾವರಣ ಇದೆ ಎಂದರೆ ಅವರನ್ನು ಪಟ್ಟಣಗಳಿಗೆ ಹಾಸ್ಟೆಲ್ಗಳಿಗೆ ಸೇರಿಸಬೇಕು. ಹಾಗೆ ಅವರಿಗೆ ಬಾಲ್ಯದಲ್ಲಿಯೇ ಅಂಬೇಡ್ಕರ್, ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ಪೆರಿಯಾರ್... ಹೀಗೆ ವಿಚಾರಗಳನ್ನು ತಿಳಿಸಿಕೊಡಬೇಕು. ಪರ್ಯಾಯ ಪೂಜೆ- ಪುನಸ್ಕಾರ, ಆಚರಣೆ-ನಂಬಿಕೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ದೌರ್ಜನ್ಯ ಕೋರರು ಯಾವುದನ್ನು ಪೂಜಿಸುತ್ತಾರೊ ಅದನ್ನು ತಮ್ಮ ಮಕ್ಕಳು ಪೂಜಿಸದ ಹಾಗೆ ನೋಡಿಕೊಳ್ಳಬೇಕು. ಅಂತಹ ಸ್ಥಳಗಳಿಗೆ ತಮ್ಮ ಮಕ್ಕಳು ಹೋಗದ ಹಾಗೆ ನೋಡಿಕೊಳ್ಳಬೇಕು, ತಾವು ಕೂಡ ಹೋಗಬಾರದು. ಆಗ ಮಕ್ಕಳಲ್ಲಿ ಹೊಸ ವಾತಾವರಣ ಮೂಡುತ್ತದೆ. ದೌರ್ಜನ್ಯ ಎಂಬುದೇನು ಎಂಬುದೇ ಅವರಿಗೆ ಗಮನಕ್ಕೆ ಬರುವುದಿಲ್ಲ. ಅದರ ಸೋಂಕು ಕೂಡ ಅವರಿಗೆ ತಗುಲುವುದಿಲ್ಲ. ಅಕಸ್ಮಾತ್ ಮುಂದೆ ಅವರ ಬದುಕಿನಲ್ಲಿ ಅಸ್ಪೃಶ್ಯತೆ ಬಂದರೆ ಈಗಾಗಲೇ ಅವರು ಆತ್ಮವಿಶ್ವಾಸವನ್ನು ಬೇರೆ ಮಾರ್ಗಗಳಲ್ಲಿ ಬುದ್ಧರ ಮಾರ್ಗಗಳಲ್ಲಿ ಅಂಬೇಡ್ಕರ್ ಚಿಂತನೆಗಳಲ್ಲಿ ಕಂಡು ಕೊಂಡಿರುವುದರಿಂದ ಖಂಡಿತ ಅವರು ಅದನ್ನು ಸಮರ್ಥವಾಗಿ ಎದುರಿಸುತ್ತಾರೆ.

ದಲಿತ ಸಮುದಾಯಗಳ ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು‌. ಅವರು ತಮ್ಮ ಮಕ್ಕಳಿಗೆ ವರ್ಷಕ್ಕೊಮ್ಮೆ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡದಿದ್ದರೂ ಪರವಾಗಿಲ್ಲ ಅಸ್ಪೃಶ್ಯತೆಯ ವಾತಾವರಣದಿಂದ ಅವರನ್ನು ಮುಕ್ತಗೊಳಿಸುತ್ತಿರಬೇಕು. ಅದರ ನೆರಳು ಕೂಡ ಅವರಿಗೆ ತಗುಲದ  ನೋಡಿಕೊಳ್ಳಬೇಕು. ವಿಶೇಷವಾಗಿ ಉತ್ತಮ ಇಂಗ್ಲಿಷ್ ಶಿಕ್ಷಣ, ಯಾವ ಶಾಲೆಯಲ್ಲಿ ಅಸ್ಪೃಶ್ಯತೆಯ ವಾತಾವರಣ ಇಲ್ಲವೋ ಅಂತಹ ಶಾಲೆಯಲ್ಲಿ ಶಿಕ್ಷಣ ಹೀಗೆ ಕೊಡಿಸಬೇಕು. ಅಂಬೇಡ್ಕರ್, ಬುದ್ಧ, ಪುಲೆ, ಪೆರಿಯಾರ್, ಬಸವಣ್ಣ ಪುಸ್ತಕಗಳನ್ನು ವಿಚಾರಗಳನ್ನು ಬಾಲ್ಯದಲ್ಲಿಯೇ ಓದಿಸಬೇಕು. ಜೊತೆಗೆ ದೌರ್ಜನ್ಯಕೋರರ ಚಿಂತನೆಗಳನ್ನು ಪುಸ್ತಕಗಳನ್ನು ಓದದಂತೆ ಎಚ್ಚರಿಕೆ ವಹಿಸಬೇಕು. ಆಗ ಖಂಡಿತ ಅಂತಹ ಸಂದರ್ಭದಲ್ಲಿ ದಲಿತ ಸಮುದಾಯಗಳ ಮಕ್ಕಳು ತಮ್ಮದೇ ಆತ್ಮವಿಶ್ವಾಸದಿಂದ, ಸ್ವಂತ ಚಿಂತನೆಗಳಿಂದ ಬೆಳೆಯುತ್ತಾರೆ. ಅಸ್ಪೃಶ್ಯತೆಯ ವಾತಾವರಣದಿಂದ ದೂರ ಇರುತ್ತಾರೆ, ದೂರ ಸಾಗುತ್ತಾರೆ. 

***

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...