Skip to main content

ಖೈರ್ಲಾಂಜಿ: ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ -ರಘೋತ್ತಮ ಹೊ.ಬ

 

ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈರ್ಲಾಂಜಿ ಗ್ರಾಮದ ಏಕೈಕ  ದಲಿತ ಕುಟುಂಬ ತನ್ನ ಪಾಡಿಗೆ ತಾನು  ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ  ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್  ಆ ಕುಟುಂಬದ ಸದಸ್ಯರು. ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾÀದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ  ಅಧ್ಯಾಯವನ್ನು ಎಂದು! ಏಕೆಂದರೆ  ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈರ್ಲಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು.  

ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ  ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ  ಅಲ್ಲಿ ನಡೆದ ದೌರ್ಜನ್ಯ ತನ್ನ ಮಿತಿಯನ್ನು ಮೀರಿತ್ತು. ದಾಳಿ ನಡೆದ ಆ ಪರಿ ಎಂತಹವರನ್ನು ಬೆಚ್ಚಿಬೀಳಿಸುವಂತ್ತಿತ್ತು.      

ಸತ್ಯ ಶೋಧನಾಸಮಿತಿಯ ವರದಿಯ ಪ್ರಕಾರವೇ ಹೇಳುವುದಾದರೆ, ಆ ಗುಂಪು ಭೂತ್‍ಮಾಂಗೆಯ  ಕುಟುಂಬದ ಅ ನಾಲ್ವರನ್ನು ಹೊಡೆಯಲು ಪ್ರಾರಂಭಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಹೊರಗೆ ಎಳೆದು ತಂದ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ನಗ್ನರನ್ನಾಗಿಸಿತು.  ಅಲ್ಲದೆ ರೋಷನ್‍ನನ್ನು ತನ್ನ ಅಕ್ಕ  ಪ್ರಿಯಾಂಕಳ ಜೊತೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿತು! ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮರ್ಮಾಂಗಕ್ಕೆ ತೀವ್ರವದ ಏಟುಗಳು ಬಿದ್ದವು. ಅಲ್ಲದೆ ಪ್ರಿಯಾಂಕಳನ್ನು ಬೆತ್ತಲೆಗೊಳಿಸಿದ ಗುಂಪು,  ಅವಳ ವಕ್ಷ ಸ್ಥಳಕ್ಕೆ ಮಚ್ಚಿನಿಂದ ಹೊಡೆಯಿತು. ಅವಳ ಮರ್ಮಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿತು. ಅದಕ್ಕೂ ಮೊದಲು 19 ವರ್ಷದ ಅವಳನ್ನು ಗುಂಪು ಬಹಿರಂಗವಾಗಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿತು. ದುರಂತವೆಂದರೆ ಇದನ್ನು ಅಲ್ಲಿ ನೆರೆದಿದ್ದ ,ಮೇಲ್ಜಾತಿ ಹೆಂಗಸರು ಬೆಂಬಲಿಸಿದರು! ಅಲ್ಲದೆ ಗಂಡಸರನ್ನು ಹಾಗೆ ಮಾಡುವಂತೆ ಜೋರಾಗಿ ಕೂಗುತ್ತಾ ಮತ್ತಷ್ಟು ಹಿರಿದುಂಬಿದಸಿದರು! ಅಂತಿಮವಾಗಿ ಶ್ರೀಮತಿ ಸುರೇಖಾರನ್ನು ಅವರ ಮೂವರು ಮಕ್ಕಳ ಎದುರಿನಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಗುಂಪು ತಾಯಿ, ಮಗಳು ಮತ್ತು ತಮ್ಮಂದಿರಿಬ್ಬರನ್ನು ಒಳಗೊಂಡಂತೆ ನಾಲ್ವರನ್ನು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿತು. ದೌರ್ಜನ್ಯದ ಮದ ಏರಿದ ಆ ಗುಂಪು ಆ ನಾಲ್ವರನ್ನು ಕೊಂದು ಹೆಣಗಳನ್ನು ಸಮೀಪದ ನಾಲೆಗೆ ಎಸೆಯಿತು. ತನ್ಮೂಲಕ ದಲಿತರ ಮೇ;ಲಿನ ದೌರ್ಜನ್ಯದ ಮತ್ತೊಂದು ರಕ್ತಸಿಕ್ತ ಪುಟ ಇತಿಹಾಸವನ್ನು ಸೇರಿತು.   

   ಹಾಗಿದ್ದರೆ ಈ ಭೀಕರ ಹತ್ಯೆ ನಡೆದದ್ದು ಏತಕ್ಕೆ? ಪ್ರಕರಣವೊಂದರಲ್ಲಿ ಸವರ್ಣೀಯ ವ್ಯಕ್ತಿಯೊಬ್ಬನ ವಿರುದ್ಧ ಭೂತ್‍ಮಾಂಗೆಯ ಕುಟುಂಬ ಸಾಕ್ಷಿ ಹೇಳಿದ್ದಕ್ಕೆ ನಡೆದ ಸೇಡಿನ ಹತ್ಯೆ ಇದು ಎಂದು ಪೋಲೀಸ್ ಮತ್ತು ಕೋರ್ಟು ಹೇಳುತ್ತವೆಯಾದರೂ ಇದರ ಹಿಂದೆ ಒಂದು ಭಯಾನಕ ಪಿತೂರಿ ಇರುವುದನ್ನು ಅವು ಗಮನಿಸಲು ಹೋಗಿಲ್ಲ . ಮಂಡಲ್ ವರದಿಯ ವಿರುದ್ಧ "ಕಮಂಡಲ ಚಳುವಳಿ"ಯನ್ನು  ಸಂಘಟಿಸಿ ಮಂಡಲ್ ವರದಿಯನ್ನು ದಿಕ್ಕು ತಪ್ಪಿಸಿದ್ದಂತದ್ದೆ ಮಾದರಿಯ ಪಿತೂರಿ ಇದು. ನಿಜ, ಮಂಡಲ್ ವರದಿಯ ವಿರುದ್ಧ ನಡೆದ  ಆ ಪಿತೂರಿಯ ಹಿಂದೆ ಇದ್ದದ್ದು ಸಂಘ ಪರಿವಾರ. ಖೈರ್ಲಾಂಜಿ ಹತ್ಯೆಯ  ಹಿಂದೆ ಇದ್ದದ್ದು ಕೂಡ ಅದೇ ಸಂಘ ಪರಿವಾರದ ಪಿತೂರಿ ಎನ್ನುತ್ತವೆ ಬಲ್ಲಮೂಲಗಳು! ಹಾಗಿದ್ದರೆ ಆ ಪಿತೂರಿಯಾದರೂ ಎಂತಹದ್ದು? 

 ಅದು ಘಟನೆ ನಡೆದ ಆ ವರ್ಷಕ್ಕೆ ಸಂಬಂದಿಸಿದ್ದು. 2006 ಬಾಬಾಸಾಹೇಬ್ ಅಂಬೇಡ್ಕರ್‍ರವರು ತಮ್ಮ ಲಕ್ಷ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ್ 14 ರಂದು ಬೌದ್ಧ ಧರ್ಮ ಸ್ವೀಕರಿಸಿದ ಘಟನೆಯ ಐವತ್ತನೆಯ ವರ್ಷ. ಅಂಬೇಡ್ಕರರು ಬೌದ್ದಧರ್ಮ ಸ್ವೀಕರಿಸಿದ ಸಂಭ್ರಮದ ಆ ಸುವರ್ಣ ಮಹೋತ್ಸವವನ್ನಾಚರಿಸಲು ಆ ವರ್ಷ ಸೆಪ್ಟೆಂಬರ್ ಅಕ್ಟೋಬರ್‍ನ ಆ ಸಮಯದಲ್ಲಿ ದೇಶಾದ್ಯಂತ ಸಂಭ್ರಮದ ಸಿದ್ಧತೆ ನಡೆದಿತ್ತು. ಸುವರ್ಣ ಮಹೋತ್ಸವದ ಈ ಸಂಧರ್ಬದಲ್ಲಿ ಮತ್ತೆ ಹತ್ತು ಲಕ್ಷ ಮಂದಿ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸುವ ಸಿದ್ಧತೆ ಕೂಡ ಭರದಿಂದ ಸಾಗಿತ್ತು. ಕ್ರೂರತನದ ಪರಮಾವಧಿಯೆಂದರೆ, ದಲಿತರು ಇತ್ತ ಸಿದ್ಧತೆಯಲ್ಲಿ ತೊಡಗಿದ್ದರೆ  ಸಂಘಪರಿವಾರ ಇವರನ್ನು ಡಿಸ್ಟರ್ಬ್ ಮಾಡುವುದು ಹೇಗೆ ಎಂದು ಸಂಚು ರೂಪಿಸತೊಡಗಿತ್ತು! ಅಂತಹ ವ್ಯವಸ್ಥಿತ ಸಂಚಿನ, ಪಿತೂರಿಯ ಭಾಗವಾಗಿ ನಡೆದ ಘಟನೆಯೇ ಖೈರ್ಲಾಂಜಿಯ ಭೀಕರ ಹತ್ಯೆ. ಯಾಕೆಂದರೆ ಆ ಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಆರೋಪಿ ಭಾಸ್ಕರ್ ಕಾವಡೆ ಸ್ಥಳೀಯ ಬಿಜೆಪಿ ಮುಖಂಡ. ಇನ್ನು ಆತ ಸಂಘಪರಿವಾರದ ಸದಸ್ಯ ಎಂದು ಬೇರೆ ಹೇಳಬೇಕಾಗಿಲ್ಲ! 

  ಹತ್ಯೆ ನಡೆಯುತ್ತಿದ್ದಂತೆ ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದವು. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಧರಣಿ ಹೋರಾಟ ನಡೆಸಿದವು. ಒಂದರ್ಥದಲಿ ಸಂಘಪರಿವಾರದ ಸಂಚು ಫಲಿಸಿತ್ತು. ಖೈರ್ಲಾಂಜಿ ಹತ್ಯೆಯ ಸೂತಕದ ಹಿಂದೆ ಬಾಬಾಸಾಹೇಬರು ಬೌದ್ದಧರ್ಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂಭ್ರಮ ಕರಗಿಹೋಯಿತು.

   ನಾಗಪುರದಲ್ಲಿ  ಸಂಘಪರಿವಾರದ ಈ ಸಂಚು ಇನ್ನೂ ನಿಂತಿಲ್ಲ. ಅದಕ್ಕೋಸ್ಕರ ಪ್ರತ್ಯಕ್ಷವಾಗಿ ಕಂಡ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕಾಗಿದೆ. 

  ನಾಗಪುರದ ದೀಕ್ಷಾಭೂಮಿ ದಲಿತರಿಗೆ ಪುಣ್ಯ ಭೂಮಿ. ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರೈಸ್ತರು ಮತ್ತು ಯಹೂದ್ಯರಿಗೆ ಜೆರೂಸಲೆಂ ಹೇಗೋ, ಹಿಂದೂಗಳಿಗೆ ಕಾಶಿ ಮತ್ತಿತರ ಸ್ಥಳಗಳು ಹೇಗೋ ಹಾಗೆ ದಲಿತರಿಗೆ ನಾಗಪುರದ ದೀಕ್ಷಾಭೂಮಿ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಬಾಬಾಸಾಹೇಬರ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಶುಭ್ರ ಬಿಳಿ ವಸ್ತ್ರ ಧರಿಸಿ ದೇಶದ  ಮೂಲೆಮೂಲೆಗಳಿಂದ ಒಂದೆಡೆ ಬಂದು ಸೇರುವ ದಲಿತರು ಬೌದ್ಧ ಧರ್ಮದ ದೀಕ್ಷೆ ಪಡೆಯುತ್ತಾರೆ. ಬುದ್ಧನ ಚಿಂತನೆಗಳೊಂದಿಗೆ ಮತ್ತೆ ತಮ್ಮ ಊರು ಸೇರುತ್ತಾರೆ. 

 ಇಂತಹದ್ದೆ ಒಂದು ಸಂಧರ್ಭ, ಅಂದರೆ 2008 ಅಕ್ಟೋಬರ್ 14 ರಂದು ನಾನು ಮತ್ತು ನನ್ನ ಐವರು ಸ್ನೇಹಿತರು ದೀಕ್ಷಾಭೂಮಿಗೆ ತೆರಳಿದ್ದೆವು. ಅಲ್ಲಿ ಕಳೆದ ಮೂರು ದಿನಗಳು ಬಹುಶಃ ನಮ್ಮ ಜೀವನದ ಪವಿತ್ರ ಕ್ಷಣಗಳು. ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಪವಿತ್ರ ಉಸಿರು ಮತ್ತು ಚಿಂತನೆ ತುಂಬಿರುತ್ತದೆ. ಗೌತಮ ಬುದ್ಧರ ಚೇತನ ತನ್ನ ನೈಜ ದರುಶನ ನೀಡುತ್ತದೆ ಎಂದರೂ ತಪ್ಪಾಗಲಾರದು. ಇಂತಹ ಖುಷಿಯಲ್ಲಿ ನಾವಿರಬೇಕಾದರೆ ಸಂಘಪರಿವಾರದ ಪಿತೂರಿಯ ಸಣ್ಣ ಝಲಕ್ ಒಂದು ನಮ್ಮ ಕಣ್ಣೆದುರೇ ನಡೆಯಿತು. ಆ ಪಿತೂರಿ ಇಂತಿದೆ. ಇತ್ತ ಲಕ್ಷಾಂತರ ಜನ ದಲಿತರ ಗುಂಪು ಬುದ್ಧ ಅಂಬೇಡ್ಕರ್ ಎಂದು ದೀಕ್ಷೆ ಸ್ವೀಕರಿಸುವುದು , ವಸ್ತು ಪ್ರದರ್ಸನ ವೀಕ್ಷಿಒಸುವುದು, ಬುದ್ಧರ ತತ್ವಗಳನ್ನು ಕೇಳುವ ಬಿಜಿಯಲ್ಲಿದ್ದರೆ ಅತ್ತ ಎಲ್ಲಿಂದಲೋ ಕೇಸರಿ ವಸ್ತ್ರ ಧರಿಸಿದ ಕೈಯಲ್ಲಿ ತ್ರಿಶೂಲ ಹಿಡಿದ ವ್ಯಕ್ತಿಯೊಬ್ಬ ದಿಢೀರನೆ ನುಗ್ಗಿದ! "ಜೈ ಶ್ರೀರಾಮ್" ಎಂಬ ಅವನ ಕೂಗು ಮೌನವಾಗಿ ಸಾಗುತ್ತಿದ್ದ ಆ ಜನರನ್ನು ಅವನೆಡೆ ತಿರುಗುವಂತೆ ಮಾಡಿತ್ತು. ತಕ್ಷಣ ಜಾಗೃತರಾದ ಅಲ್ಲೆ ಇದ್ದ ಸಮಾವೇಶದ ಸ್ವಯಂಸೇವಕರು ಆ ಕಾವಿಧಾರಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದರು. ಅಚ್ಚರಿಯ ವಿಷಯವೆನೆಂದರೆ ಒಬ್ಬನೇ ಒಬ್ಬ ದಲಿತನೂ ಕಿಂಚಿತ್ತು ಕದಲಿಲ್ಲ. ಯಾಕೆಂದರೆ ಅಲ್ಲೇನಾದರು ಗಲಿಬಿಲಿಯಾಗಿದ್ದರೆ ಕೇವಲ ಕಾಲ್ತುಳಿತದಿಂದಲೇ ಸಾವಿರಾರು ಜನ ಬಲಿಯಾಗುವ ಸಾಧ್ಯತೆಯಿತ್ತು. ಶಾಂತಚಿತ್ತದ ಸಮಭಾವದ ದಲಿತರು ಗಾಂಭೀರ್ಯತೆಯನ್ನು ಪ್ರದರ್ಶಿಸಿ ತಮ್ಮತನ ಮೆರೆದರು! ಆದರೆ ಆ ಸಂಧರ್ಭದಲ್ಲಿ ನಿಜಕ್ಕು ಆಕ್ರೋಶಕ್ಕೊಳಗಾದದ್ದು ನಾನು. ಆ ಕಾವಿಧಾರಿಯನ್ನು ಏನೂ ಮಾಡದೇ ಸುಮ್ಮನೆ ಪೋಲಿಸರಿಗೊಪ್ಪಿಸಿದರಲ್ಲಾ ಎಂದು ಕುಪಿತನಾದೆ. ಆದರೆ ನಂತರವೇ ತಿಳಿದದ್ದು ಸಂಘÀಪರಿವಾರದ ಇಂತಹ ಪಿತೂರಿಗಳು ಆಗಾಗ್ಗೆ ನಡೆಯುತ್ತಿರುತ್ತದೆ ಮತ್ತು ಖೈರ್ಲಂಜಿಯ ಹತ್ಯಾಕಾಂಡ ಅಂತಹ ಪಿತೂರಿಯ ಭೀಭತ್ಸ ಪ್ರದರ್ಶನ ಎಂದು.

   ಖೈರ್ಲಾಂಜಿಯ ಈ ಭೀಕರ ಹತ್ಯಾಕಾಂಡದ ಬಗ್ಗೆ ಈಗ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಜುಲೈ 12 ರಂದು ಬಾಂಬೆ ಹೈಕೊರ್ಟ್‍ನ ನಾಗಪುರ ಪೀಠವು ಖೈರ್ಲಾಂಜಿಯ ಆರೋಪಿಗಳಿಗೆ ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತನ್ಮೂಲಕ ಸ್ವತಂತ್ರ ಭಾರತದಲ್ಲಿ ದಲಿತರ ಭೀಕರ ಹತ್ಯಾಕಾಂಡದ ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯವೊಂದು ಪ್ರಥಮ ಬಾರಿಗೆ ಮರಣದಂಡನೆ ವಿಧಿಸಿದ್ದನ್ನು ಹೈಕೋರ್ಟ್ ರದ್ದು ಪಡಿಸಿದೆ. ಹೈಕೋರ್ಟ್‍ನ ಈ ತೀರ್ಪು ನಿಜಕ್ಕು ಆಘಾತಕಾರಿಯಾದದ್ದು. ಪ್ರಕರಣದ ಭೀಕರತೆಯು ಅಪರೂಪದಲ್ಲೆ ಅಪರೂಪ ಎನ್ನುವಂತಹದ್ದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಲಯ ನೀಡಿದ್ದ ಮರಣದಂಡನೆಯ ತೀರ್ಪು ಸರಿಯಾಗೆ ಇತ್ತು. ಆದರೆ ಹೈಕೋರ್ಟ್ ಈಗ ಇದಕ್ಕೆ ವ್ಯತಿರಿಕ್ತ ತೀರ್ಪು ನೀಡಿದೆ! 

    ಹೈಕೋರ್ಟ್‍ನ ಈ ತೀರ್ಪಿನ ವಿರುದ್ಧ ಸುಪ್ರೀಂ ಕೊರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವುದೊಂದೆ ಈಗ ಉಳೀದಿರುವ ದಾರಿ. ಈ ನಿಟ್ಟಿನಲಿ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.  ಸಿಬಿಐ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ದುರ್ಬಲ ವಾದ ಮಂಡಿಸಿರುವ ಆರೋಪ ಕೇಳೀ ಬಂದಿದೆ. ಈ ನಿಟ್ಟಿನಲಿ ಕೇಂದ್ರ ಸಕಾರ ಕೂಡ ಮಧ್ಯೆ ಪ್ರವೇಶಿಸಬೇಕಾಗಿದೆ. ದೌರ್ಜನ್ಯಕೋರರು ಮುಂದೆ ದೌರ್ಜನ್ಯ  ಮಾಡಲು ಹೆದರಬೇಕಾದರೆ ಖೈರ್ಲಂಜಿಯ ಆರೋಪಿಗಳಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಈ ನಿಟ್ಟಿನಲಿ ನ್ಯಾಯಲಯದ ಈ ತೀರ್ಪಿನ ವಿರುದ್ಧ ಶೋಷಿತ ಸಮುದಾಯ ದನಿಯೆತ್ತಬೇಕಿದೆ.

    ಖೈರ್ಲಾಂಜಿಯಂತಹ ಪ್ರಕರಣಗಳು ಈಗ ನಿಂತಿದೆ ಎಂದಲ್ಲ. ಮೊನ್ನೆ ತುಮಕೂರಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಳನ್ನು ಕಲ್ಲಿನಿಂದ ಜಜ್ಜಿ ಕೊಂದದ್ದು ಖೈರ್ಲಾಂಜಿಯ ಪುನರಾವರ್ತನೆಯಲ್ಲದೆ  ಬೇರೇನಲ್ಲ. ಚರಂಡಿಯಲ್ಲಿ ಅರೆಜೀವದಿಂದ ಬಿದ್ದಿದ್ದ ಹೊನ್ನಮ್ಮ 'ನೀರು, ನಿರು' ಎಂದು ಅಂಗಲಾಚಿದಾಗ ದೌರ್ಜನ್ಯಕೊರ ಮನಸ್ಸುಗಳು ಮತ್ತೊಂದು ಕಲ್ಲು ಎತ್ತಿಹಾಕಿದ್ದು, ಖೈರ್ಲಾಂಜಿಯಲ್ಲಿ ಪ್ರಿಯಾಂಕಳ ಮರ್ಮಾಂಗಕ್ಕೆ  ಚೂಪಾದ ದೊಣ್ಣೆಯಿಂದ ಚುಚ್ಚಿದ್ದು, ಬಹುಶಃ ಇಂತಹ ಭೀಬತ್ಸ ನೆನಪುಗಳಷ್ಟೆ ದಲಿತರಿಗೆ ಉಳಿಯುವುದು. ನ್ಯಾಯ? ಶುದ್ಧ ಮರೀಚಿಕೆಯಷ್ಟೆ.

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...