1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ ಕೆಂಪಕ್ಷರಗಳಲ್ಲಿ ಬರೆದಿಡುವ ದಿನ)ಎಂದು!! ಅಂದರೆ ಮೀಸಲಾತಿ ರದ್ದುಗೊಳಿಸಿದ್ದು ಇವರಿಗೆ "ರೆಡ್ ಲೆಟರ್ ಡೇ"!
ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ಈ ಹೆಡ್ ಲೈನ್ ಗಳನ್ನು ಅಂಬೇಡ್ಕರರ ಜೊತೆ ಇದ್ದ ಅವರ ಸಹಾಯಕ ಶಂಕರನಾಂದ ಶಾಸ್ತ್ರಿಯವರು ಅಂಬೇಡ್ಕರರಿಗೆ ಹೇಳುತ್ತಿದ್ದಂತೆ ಬಾಬಾಸಾಹೇಬರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ? This would not be a Red Letter Day, but would be a Dead Letter Day (ಈ ದಿನ ಕೆಂಪು ಅಕ್ಷರಗಳಲ್ಲಿ ಬರೆದಿಡುವ ದಿನವಲ್ಲ, ಬದಲಿಗೆ ಸತ್ತ ಅಕ್ಷರಗಳಲ್ಲಿ ಬರೆದಿಡುವ ದಿನ")! ಈ ಹಿನ್ನೆಲೆಯಲ್ಲಿ ಅರಿವಾಗುವುದು ತನ್ನ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಯಾವ ಪರಿಯ ತುಡಿತವಿತ್ತು ಮತ್ತು ಅವರ ಹಕ್ಕುಗಳಿಗೆ ಧಜ್ಕೆಯಾದಾಗ ಅವರ ಆಕ್ರೋಶ ಯಾವ ಪರಿ ಇರುತ್ತಿತ್ತು ಎಂಬುದು.
***
(ಆಧಾರ: My memories and Experiences of Babasaheb Ambedkar by Shankarananda shastri, Pp.134)
Comments
Post a Comment