Skip to main content

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

 


      - ರಘೋತ್ತಮ ಹೊಬ

 ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!

   ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನಿರಂತರ ನೀರು ಸರಬರಾಜು ಮಾಡಲು ಶಿವನಸಮುದ್ರದ ಹತ್ತಿರ ತೋರೆಕಾಡನಹಳ್ಳಿ ಎಂಬಲ್ಲಿ ಚೆಕ್‍ಡ್ಯಾಂ ನಿರ್ಮಿಸಲು  ಕೂಡ ಒಡೆಯರ್‍ರವರು ಆಲೋಚಿಸಿದರು.  ಹಾಗೆಯೇ ಅದರ ನಿರ್ಮಾಣ ಕೂಡ ಆಯಿತು ಆದರೆ ಕೆಲವೇ ಅಡಿಗಳಷ್ಟಿದ್ದ ಚೆಕ್‍ಡ್ಯಾಂ ನೀರು ಏನೇನಕ್ಕು ಸಾಲುತ್ತಿರಲಿಲ್ಲ. ಕಡೆಗೆ ಚಿನ್ನದ ಗಣಿಗೆ ವಿದ್ಯುತ್ ಪೂರೈಕೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ ಅವರು  1904 ರಲ್ಲಿ ಜೋಗ್ ಬಳಿ ವಿದ್ಯುತ್ ಉತ್ಪಾದನೆ ಮಾಡಲು ಅನುಮತಿ  ಕೋರಿ ಅಂದಿನ ಬ್ರೀಟಿಷ್ ವೈಸ್ ರಾಯ್ ಲಾರ್ಡ ಕರ್ಜನ್‍ರವರಿಗೆ ಪತ್ರ ಕೂಡ ಬರೆದರು. ಆದರೆ ಪರಿಸರದ ನೆಪ ಒಡ್ಡಿ ಕರ್ಜನ್ ಅದಕ್ಕೆ ಅನುಮತಿ  ನೀಡಲಿಲ್ಲ. ಕಡೆಗೆ ಬೇರಾವ ದಾರಿ ಕಾಣದೆ ಒಡೆಯರ್‍ರವರು ಜೋಗ್‍ನಲ್ಲಿ ವಿದ್ಯುತ್ ಉತ್ಪತ್ತಿ ಮಾಡುವ ಆಲೋಚನೆ  ಕೈಬಿಟ್ಟು ಶಿವನಸಮುದ್ರಕ್ಕೆ ನಿರಂತರ ನೀರು ಒದಗಿಸುವ ದಿಕ್ಕಿನಲಿ ಮತ್ತೆ ಆಲೋಚನೆಗಿಳಿದರು.  ಈ ಸಂಧರ್ಭದಲ್ಲಿ ಅವರ ಆ ಆಲೋಚನೆಗೆ ಆಗ ಕೈ ಜೋಡಿಸಿದ್ದು  ಆಗಿನ ಮೈಸೂರು ಪ್ರಾಂತ್ಯದ ಮುಖ್ಯ ಇಂಜಿನಿಯರ್ ಆಗಿದ್ದ ಮ್ಯಾಕ್ ಹಚ್‍ರವರು.

   ಮಹಾರಾಜರ ಆ ಆಲೋಚನೆಗೆ ಇಂಬು ಕೊಡಲೆಂಬಂತೆ 120 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್  ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಎಂಬಲ್ಲಿ  ಅಣೆಕಟ್ಟೆ ನಿರ್ಮಿಸಲು ಯೋಜನೆ ರೂಪಿಸಿ ಶಂಕು ಸ್ಥಾಪನೆಗೈದಿರುವ ಹಳೆ ಕಡತವೊಂದು ಅವರ ಕಣ್ಣಿಗೆ ಬಿತ್ತು. ಈ ನಿಟ್ಟಿನಲ್ಲಿ ಶಿವನಸಮುದ್ರದ ವಿದ್ಯುತ್ ಕೇಂದ್ರಕ್ಕೆ ತಕ್ಷಣ ಮತ್ತು ಶಾಶ್ವತ ಪರಿಹಾರವಾಗಿ, ನಿರಂತರ ನೀರು ಒದಗಿಸಲು ಇದೇ ತಕ್ಕ ಯೋಜನೆ ಎಂದು ಪರಿಗಣಿಸಿದ ಅವರು ಟಿಪ್ಪು ಸುಲ್ತಾನನ  ಕನಸಿನ ಯೋಜನೆಗೆ  ಮರು ಜೀವ ನೀಡಲು ತಮ್ಮ ಇಂಜಿನಿಯರ್‍ರÀಗಳ ತಂಡಕ್ಕೆ  ಸೂಚಿಸಿದರು. ಅಂದಹಾಗೆ ಅಣೆಕಟ್ಟು ಕಟ್ಟಲು ಒಡೆಯರ್‍ರವರು ಸೂಚನೆ ನೀಡಿದ(1906) ಇಂಜಿನಿಯರ್‍ಗಳ ಆ ತಂಡದಲ್ಲಿ  ವಿಶ್ವೇಶ್ವರಯ್ಯನವರಿರಲಿಲ್ಲ! ಅಥವಾ ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯನವರ ಆಗಮನ ಇನ್ನು ಆಗೇ ಇರಲಿಲ್ಲ! 

  ಇರಲಿ, ಕನ್ನಂಬಾಡಿಯಲ್ಲಿ ಅಣೆಕಟ್ಟೆಯನ್ನೇನೊ ಕಟ್ಟಲು  ಮಹಾರಾಜರು ನಿರ್ಧರಿಸಿದರು. ಆದರೆ ಬ್ರಿಟಿಷ್ ರೆಸಿಡೆಂಟರಿಂದ ಅವರಿಗೆ ಸಿಕ್ಕಿದ್ದು ಕೇವಲ 70 ಅಡಿ ಎತ್ತರ ಕಟ್ಟಲು ಹಾಗೂ 60ಅಡಿ ನೀರು ಸಂಗ್ರಹಿಸಲು ಮಾತ್ರ. ಈ ನಿಟ್ಟಿನಲಿ ಬ್ರೀಟಿಷರ ನಿಲುವನ್ನು ಮಹಾರಾಜರು ಸುತಾರಾಂ ತಿರಸ್ಕರಿಸಿದರು. ಈ ನಡುವೆ ಬ್ರೀಟಿಷರು ಮತ್ತೊಂದು ಕಂಡೀಷನ್ ಹಾಕಿದರು. ಅದೇನೆಂದರೆ ಕೆ.ಆರ್.ಎಸ್ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬೇಕು, ಹಾಗೆಯೇ ಹಾಗೆ ಉತ್ಪತ್ತಿಯಾದ ವಿದ್ಯುತ್ತಿನಲ್ಲಿ ಚಿನ್ನದಗಣಿಗೆ ಸಾಗಿಸಿ ಉಳಿದ ವಿದ್ಯುತ್ತನ್ನು ತಮ್ಮ ನೇರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಮತ್ತು ಕೊಯಮತ್ತೂರಿಗೆ ಒದಗಿಸಬೇಕು ಎಂಬುದೇ ಆ ಕಂಡೀಷನ್. ಆದರೆ ಈ ಕಂಡೀಷನ್‍ಗೆ ಸಹ ಒಡೆಯರ್ ಜಗ್ಗಲಿಲ್ಲ. ಬದಲಿಗೆ  ಕೃಷಿಗೆ ವಿದ್ಯುತ್ ಮತ್ತು ನೀರು ಒದಗಿಸುವ ತಮ್ಮ ನಿಲುವಿಗೆ ಅವರು ಕಟಿಬದ್ಧರಾದರು. ಅಂತಿಮವಾಗಿ ಮಹಾರಾಜರ  ಈ ನಿಲುವಿಗೆ ಬ್ರಿಟೀಷರು ತಲೆಬಾಗಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಸಮ್ಮತಿಸಿದರು. 90ಅಡಿ ಎತ್ತರ ಮತ್ತು 80ಅಡಿ ನೀರು ಸಂಗ್ರಹಿಸಲು ಮತ್ತು ಮುಂದೆ ವಿಸ್ತರಿಸಬಹುದಾದ ಅವಕಾಶ ನೀಡಿ ಒಪ್ಪಿಗೆ ನೀಡಿದರು. ಈ ಸಂಧರ್ಭದಲ್ಲಿ ಬ್ರಿಟಿಷ್ ರೆಸಿಡೆಂಟರಿಂದ ಒಪ್ಪಿಗೆ ಸಿಕ್ಕಿದ್ದೆ ತಡ ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಮತ್ತವರ ತಂಡ  ಜಲಾಶಯದ ನಿರ್ಮಾಣಕ್ಕೆ ಕಾರ್ಯೋನ್ಮುಖವಾಯಿತು. ಅಂದಹಾಗೆ ಜಲಾಶಯ ನಿರ್ಮಾಣದ ಪ್ರಾಥಮಿಕ ತಯಾರಿ ನಡೆದ ಈ ಸಂಧರ್ಭದಲ್ಲಿಯೂ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ!

   ಇನ್ನು ಅದು 1908ರ ಅಂತ್ಯದ ಸಮಯ. ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಸೇವೆಯಿಂದ ನಿವೃತ್ತರಾದರು.  ಸ್ವಾಭಾವಿಕವಾಗಿ ತೆರವುಗೊಂಡ ಆ ಸ್ಥಾನಕ್ಕೆ ಕ್ಯಾಪ್ಟನ್ ಡೇವಿಸ್‍ರವರು ಮುಖ್ಯ ಇಂಜಿನಿಯರಾಗಿ ನೇಮಕಗೊಂಡರು ಹಾಗೆಯೆ ಕನ್ನಂಬಾಡಿ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನಿಟ್ಟು ಅದರ ಪಾತ್ರವನ್ನು ಬದಲಿಸುª  ಹಚ್‍ರವರ ಕಾಮಗಾರಿಯನ್ನು ಡೇವಿಸ್‍ರವರು  ಮುಂದುವರೆಸಿದರು. ದುರಂತವೆದಂರೆ 1909ರ ಮೇ-ಜೂನ್ ಮುಂಗಾರಿನ ತಿಂಗಳು. ನದಿಯ ಪ್ರವಾಹ ಉಕ್ಕಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಮರಳು ಮೂಟೆಗಳೆಲ್ಲವು ಪ್ರವಾಹಕ್ಕೆ ಕೊಚ್ಚಿ ಹೋದವು. ಇದನ್ನು ತಡೆಯುವ ನಿಟ್ಟಿನಲ್ಲಿ ರಾತ್ರೋರಾತ್ರಿ ತೆಪ್ಪಗಳೊಂದಿಗೆ ಕಾರ್ಮಿಕರ ಜೊತೆ ಕಾರ್ಯಾಚರಣೆಗೆ ಇಳಿದ ಕ್ಯಾ.ಡೇವಿಸ್ ತನ್ನ ಸಹಪಾಠಿ ಕಾರ್ಮಿಕನೋರ್ವನನ್ನು ಉಳಿಸಲು ಹೋಗಿ ನದಿಯ ಪ್ರವಾಹದಲ್ಲಿ ಕೋಚ್ಚಿಹೋದ.  ಘಟನೆಯಲ್ಲಿ ಕ್ಯಾ.ಡೇವಿಸ್ ಹಠಾತ್ ಸಾವಿಗೀಡಾದ. ಈ ಕಾರಣದಿಂದಾಗಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹುದ್ದೆ ಖಾಲಿಬಿದ್ದಿತು.

   ಇದೇ ಸಂಧರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ ಒಳಗೊಳಗೆ ಮತ್ತೊಂದು ಹೋರಾಟ ಪ್ರಾರಂಭವಾಗಿತ್ತು. ಅದು ಮೈಸೂರು  ಮೈಸೂರಿಗರಿಗೆ ಎಂಬ ಹೋರಾಟ. ಅಂದರೆ ಮೈಸೂರು ಪ್ರಾಂತ್ಯದಲ್ಲಿದ್ದ ಮದ್ರಾಸಿ ಅಧಿಕಾರಿಗಳನ್ನು ಓಡಿಸುವ  ಹೋರಾಟವದು. ಈ ಹೋರಾಟ ಕಾವು  ಪಡೆದುಕೊಳ್ಳುತ್ತಿದ್ದಂತೆ ಇದನ್ನು ಶಮನಮಾಡುವ ನಿಟ್ಟಿನಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು   ಚಿಂತನೆಗಿಳಿದರು ಹಾಗೆಯೇ ಅದೇ ಸಮಯದಲ್ಲಿ ಖಾಲಿಯಾದ ಮುಖ್ಯ ಇಂಜಿನಿಯರ್ ಹುದ್ದೆಗೆ ಬೇರೋಬ್ಬರನ್ನು ನೇಮಿಸಬೇಕಾದ ಅನಿವಾರ್ಯತೆ ಕೂಡ ಅವರಿಗೆ ಎದುರಾಯಿತು.   ಇಂಜಿನಿಯರ್ ನೇಮಕ ಮತ್ತು ಮೈಸೂರು ಮೈಸೂರಿಗರಿಗೆ ಎಂಬ ಎರಡೂ ಬೇಡಿಕೆಯ ಹಿನ್ನೆಲೆಯಲ್ಲಿ ಮಹಾರಾಜರು ದೂರದ ಮುಂಬಯಿಯಲ್ಲಿ ಕಾರ್ಯನಿರ್ªÀಹಿಸುತ್ತಿದ್ದ ಮೈಸೂರು ಸಂಸ್ಥಾನದವರೆ ಆದ ವಿಶ್ವೇಶ್ವರಯ್ಯರವರನ್ನು ಮುಖ್ಯ ಇಂಜಿನಿಯರ ಹುದ್ದೆಗೆ ನೇಮಿಸಿಕೊಂಡರು. ಈ ನಿಟ್ಟಿನಲಿ ಮಹಾರಾಜರ ಆದೇಶದ ಮೇರೆಗೆ 1909ರ ಅಂತ್ಯದಲ್ಲಿ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದುಕೊಂಡರು! ಅಂದಹಾಗೆ ಅವರು ಹಾಗೆ ಸಂಸ್ಥಾನಕ್ಕೆÀ ಸೇವೆಗೆ ಪ್ರವೇಶಪಡೆಯುತ್ತಿದ್ದಂತೆ ಇಂಜಿನಿಯರರಾದ ಅವರ ಹೆಗಲ ಮೇಲೆ ಸಂಸ್ಥಾ£ದÀ ಎಲ್ಲ ನಿರ್ಮಾಣದ ಕಾಮಗಾರಿಗಳ ಹೊರೆಯು ಬಿತ್ತು. ಹಾಗೆಯೆ ಕೆ.ಆರ್.ಎಸ್ ನಿರ್ಮಾಣ ಕಾಮಗಾರಿ  ಕೂಡ.  ಯಾಕೆಂದರೆ ಮೊದಲೇ ತಿಳಿಸಿದ ಹಾಗೆ ಅದಾಗಲೆ  ಜಲಾಶಯ ನಿರ್ಮಾಣದ ಪ್ರಾಥಮಿಕ ಕಾರ್ಯಗಳು ಜಾರಿಯಲ್ಲಿತ್ತು. ಈ ನಿಟ್ಟಿನಲಿ ಇದಕ್ಕೆ ಸಾಕ್ಷಿ ಬೇಕೆನ್ನುವವರು ಸ್ವತಃ ವಿಶ್ವೇಶ್ವರಯ್ಯನವರೆ ತಮ್ಮ ಆತ್ಮಕಥೆ “ನನ್ನ ವೃತ್ತಿ ಜೀವನದ ನೆನಪುಗಳು “ ಕೃತಿಯಲ್ಲಿ ನಾನು ಬರುವುದಕ್ಕೆ ಮೊದಲೆ ಶ್ರೀರಂಗಪಟ್ಟಣದಿಂದ 10 ಮೈಲು ದೂರದಲ್ಲಿ ಕಾವೇರಿ ನದಿಯ ಪಶ್ಚಿಮ ದಂಡೆ ಮೇಲೆ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣದ ಕಾಮಗಾರಿ ನೆಡೆದಿತ್ತು. ಎಂದು ಬರೆದಿರುವುದನ್ನು ಗಮನಿಸಬಹುದು. ಆ ಮೂಲಕ ಪ್ರಾಮಾಣಿಕವಾಗಿ ಸ್ವತಃ ಸರ್.ಎಂ.ವಿ.ರವರೆ ಜಲಾಶಯದ ನಿರ್ಮಾಣದ ಕಾಮಗಾರಿ ತನ್ನ ಆಗಮನಕ್ಕೂ ಮೊದಲೇ ಪ್ರಾರಂಭಗೊಂಡಿತ್ತೆಂಬುದನ್ನು ಸೂಚಿಸಿದ್ದಾರೆ. ಒಟ್ಟಾರೆ  ಈ ನಿಟ್ಟಿನಲಿ ಹೇಳುವುದಾದರೆ ಕೆ.ಆರ್.ಎಸ್ ವಿಶ್ವೇಶ್ವರಯ್ಯನವರ ಕನಸಿನ ಕೂಸಂತು ಅಲ್ಲ. ಟಿಪ್ಪು ಕನಸಿದ್ದÀನ್ನು ನಾಲ್ವಡಿರವರು  ಕಾರ್ಯರೂಪಕ್ಕೆ ತಂದ  ಸಂದರ್ಭದಲ್ಲಿ ಮಧ್ಯ ಇಂಜಿನಿಯರರಾಗಿ ನೇಮಕಗೊಂಡು ಅವರು ಕೆಲಸ ಮುಂದುವರೆಸಿದ್ದಾರೆ ಅಷ್ಟೆ! ಈ ನಿಟ್ಟಿನಲ್ಲಿ ಇಂಜಿನಿಯರ್  ಕ್ಯಾ.ಡೇವಿಸ್ ಏನಾದರು ಸಾಯದಿದ್ದರೆ ವಿಶ್ವೇಶ್ವರಯ್ಯನವರು ಮೈಸೂರು  ಸಂಸ್ಥಾನಕ್ಕೆ ಬರುತ್ತಿರಲೇ ಇರಲಿಲ್ಲ. ಹಾಗೆಯೇ ಕೆ.ಆರ್.ಎಸ್ ನಿರ್ಮಾಣದ ಶ್ರೇಯಸ್ಸು ಅವರ ಹೆಸರಿಗೆ ಹೈಜಾಕ್ ಆಗುವುದು ಕೂಡ ನೆಡೆಯುತ್ತಿರಲಿಲ್ಲ. ಕ್ಯಾ.ಡೇವಿಸ್ ಸದ್ದಿಲ್ಲದೆ ಸಂಬಳಪಡೆದು ಕಾಮಗಾರಿ ಮುಗಿಸುತ್ತಿದ್ದ! 

   ಈ ನಡುವೆ ಮಹಾರಾಜರ ವಿಶ್ವಾಸ ಸಂಪಾದಿಸಿದ ವಿಶ್ವೇಶ್ವರಯ್ಯನವರು ಮೈಸೂರು ಮೈಸೂರಿಗರಿಗೆ ಎಂಬ ತತ್ವದ ಅಡಿಯಲ್ಲಿ  ದಿವಾನ ಹುದ್ದೆಗೂ ಕೂಡ ನೇಮಿಸಲ್ಪಟ್ಟರು. ಅಂದಹಾಗೆ ಆಗ ತೆರವಾದ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಿಸಲ್ಪಟ್ಟವರು ಯಾರು? ಯಾರು ಯಾಕೆ ಅವರ ಹೆಸರು ಹೇಳುವುದಿಲ್ಲ? ಕೆ.ಆರ್.ಎಸ್ ಇತಿಹಾಸದ ದ್ವಂದ್ವವೆಂದರೆ ಇದೇ! ಇರಲಿ, 1911ರಲ್ಲಿ ನದಿ ಪ್ರವಾಹ ಬದಲಿಸುವ ಕಾರ್ಯ ಮುಗಿದು ಜಲಾಶಯದ ಕಟ್ಟಡ ಕಾಮಗಾರಿ ಪ್ರಾರಂಭ ವಾಯಿತು. ಈನಿಟ್ಟಿನಲ್ಲಿ 2ಕೋಟಿ 70ಲಕ್ಷ ಬಜೆಟ್ಟಿನ ಈ  ಯೋಜನೆ ಹಣದ ಕೊರತೆಯನ್ನೆದುರಿಸಿತು. ಯಾಕೆಂದರೆ ಮೈಸೂರು ರಾಜ್ಯದ ಅಂದಿನ ಒಟ್ಟು ಬಜೆಟ್ಟೆ 2ಕೋಟಿ 30ಲಕ್ಷ. ಹೀಗಿರುವಾಗ ಜಲಾಶಯಕ್ಕಾಗಿ  2ಕೋಟಿ 70ಲಕ್ಷ ತರುವುದು? ಅಂದಹಾಗೆ  ಈ ಸಂಧರ್ಭದಲ್ಲಿ ಧೃತಿಗೆಡದ  ಮಹಾರಾಜ ನಾಲ್ವಡಿಯವರು  ತಮ್ಮ ತಾಯಿ ಮತ್ತು ತಮ್ಮ ಧರ್ಮಪತ್ನಿಯವರಿಗೆ ಸೇರಿದ 4 ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಾಟ ಮಾಡಿ ಹಣ ಒದಗಿಸಿದರು. ಅಂದಹಾಗೆ ಅಣೆಕಟ್ಟು ನಿರ್ಮಾಣಕ್ಕೆ ಮಹಾರಾಜರು ಒದಗಿಸಿದ ಆ 2ಕೋಟಿ 70ಲಕ್ಷ ರೂಗಳಲ್ಲಿ ಮುಖ್ಯ ಇಂಜಿನಿಯರ್ ವಿಶ್ವೇಶ್ವರಯ್ಯನವರ ಸಂಬಳವೂ ಕೂಡ ಸೇರಿತ್ತು! 

   ಇರಲಿ, ಮೊದಲೆ ಹೇಳಿದಹಾಗೆ ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಬೇರೊಬ್ಬರು ಮುಖ್ಯ ಇಂಜಿನಿಯರರಾಗಿ ನೇಮಕಗೊಂಡರು. ಬಳಿಕ ಆ ಹೊಸ ಇಂಜಿನಿಯರ್ ಕೆ.ಆರ್. ಎಸ್ ನಿರ್ಮಾಣದ ಕಾಮಗಾರಿ ಮುಂದುವರೆಸಿದರು. ಅಂದಹಾಗೆ   ಜಲಾಶಯದಲ್ಲಿ ಈಗಲೂ ಕೆ.ಆರ್.ಎಸ್. ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ 50ಕ್ಕೂ ಹೆಚ್ಚು ಇಂಜಿನಿಯರ್‍ಗಳ ಹೆಸರನ್ನೊಳಗೊಂಡ ನಾಮಫಲಕವಿದೆ. ಅದರಲ್ಲಿ ವಿಶ್ವೇಶ್ವರಯ್ಯ ಒಬ್ಬರಷ್ಟೆ. ಬರೀ ವಿಶ್ವೇರಯ್ಯರವರೊಬ್ಬರೇ ಅಲ್ಲ! 

ಕೆಆರ್‍ಎಸ್‍ನ ಕಾಮಗಾರಿ ಹೀಗೆ ಮುಂದುವರಿದಿರಬೇಕಾದರೆ  ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವುದನ್ನು ವಿರೋಧಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರು ಮಹಾರಾಜರ ಜೊತೆ ವಿಶ್ವಾಸಕೆಡಿಸಿಕೊಂಡರು. ಯಾಕೆಂದರೆ ಮೀಸಲಾತಿ ನೀಡುವುದರಿಂದ ಪ್ರತಿಭೆಗಳಿಗೆ ಮೊಸವಾಗುತ್ತದೆ ಎಂಬ ತಮ್ಮನಿಲುವಿಗೆ ಅಂಟಿಕೊಂಡ ವಿಶ್ವೇಶ್ವರಯ್ಯನವರು ಒಬಿಸಿ ಮೀಸಲಾತಿಗೆ ಕಟಿಬದ್ಧರಾದ  ಮಹಾರಾಜರ ಕೆಂಗಣ್ಣಿಗೆ ಗುರಿಯಾದರು. ತತ್ಪರಿಣಾಮವಾಗಿ ಅವರು ದಿವಾನ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂತು ಮತ್ತು ಆಗ ಇಸವಿ 1918!

   ಹೌದು, ಕೆ.ಆರ್.ಎಸ್. ಕಟ್ಟಡ ಕಾಮಗಾರಿ ಪ್ರಾರಂಭ ವಾದದ್ದು 1911ರಲ್ಲಿ, ಮತ್ತೆ ಅದು ಹಾಗೆಯೇ ಮುಂದುವರೆದಿತ್ತು. ಪ್ರಶ್ನೆಯೇನೆಂದರೆ 1918ರಲ್ಲಿ ಸರ್.ಎಂ.ವಿ.ರವರು ರಾಜೀನಾಮೆ ಇತ್ತಾಕ್ಷಣ ಕಾಮಗಾರಿ ನಿಂತು ಹೋಯಿತೆ ಎಂಬುದು? ಖಂಡಿತ ಇಲ್ಲ! ಯಾಕೆಂದರೆ ಅದರ ನಿಜವಾದ ನಿರ್ಮಾತೃ ನಾಲ್ವಡಿಕೃಷ್ಣರಾಜ ಒಡೆಯರ್‍ರವರು ಅದಕ್ಕಾಗಿ ಉಸಿರು ಹಿಡಿದುಕೊಂಡು ಇದ್ದರಲ್ಲ! ಈ ಸಂಧರ್ಭದಲಿ ಮತ್ತೊಂದು ಆಕ್ಷೇಪಣೆ ಅದೇನೆಂದರೆ ಕೆ.ಆರ್.ಎಸ್ ನಿರ್ಮಾಣವೇ ವಿಶ್ವೇಶ್ವರಯ್ಯನ್ನವರ ಧ್ಯೇಯವಾಗಿದ್ದರೆ ಅವರು ರಾಜೀನಾಮೆ ನೀಡಬಾರದಿತ್ತು! ಕೆ.ಆರ್.ಎಸ್ ಕಟ್ಟಿಯೇ ನಾನು ಹೋಗುವುದು ಎಂದು ಅವರು ಹೇಳಬೇಕಿತ್ತು! ಊಹ್ಞೂಂ, ಅದ್ಯಾವುದೂ ನಡೆದಿಲ್ಲ! ವಿಶ್ವೇಶ್ವರಯ್ಯನವರು ರಾಜೀನಾಮೆ ಇತ್ತು ಹೋದರು ಜಲಾಶಯದ ಕಾಮಗಾರಿ ಅದರ ಪಾಡಿಗೆ ಅದು ನಡೆದಿತ್ತು!

  ಈ ನಿಟ್ಟಿನಲಿ ವಿಶ್ವೇಶ್ವರಯ್ಯನವರ ರಾಜೀನಾಮೆಯ ನಂತರ ಅವರು ನಂತರದ ದಿವಾನರುಗಳಿಗೆ ಸಹಾಯಕರಾದದ್ದಾಗಲಿ ಸಲಹೆಗಾರರಾದದ್ದಾಗಲಿ ಎಂಥದ್ದು ಇಲ್ಲ! ಕಡೆ ಪಕ್ಷ ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದವರಿಗೆ ಮೇಸ್ತ್ರಿಯಾಗಿಯಾದರೂ ಅವರಿದ್ದರೆ? ಉಹ್ಞೂಂ, ಅದೂ ಇಲ್ಲ! ಹಾಗಿದ್ದರೆ ಅದರ ನಿರ್ಮಾಣದ ಶ್ರೇಯಸ್ಸು ಅವರಿಗ್ಹೇಗೆ ಸಂದಿತು ಎಂಬುದು? ಯಾಕೆಂದರೆ ಅವರು ರಾಜೀನಾಮೆ ನೀಡಿದ 14 ವರ್ಷಗಳ ನಂತರ ಅಂದರೆ 1932 ರಲ್ಲಿ ಕಾಮಗಾರಿ ಮುಗಿದದ್ದು. ಅಂದಹಾಗೆ ಅಗಲೂ ಕೂಡ ನಾಲ್ವಡಿಯವರು ರಾಜರಾಗಿ ಮುಂದುವರಿದಿದ್ದರು ಮತ್ತು ತಾವು ಪ್ರಾರಂಭಿಸಿದ ಯೋಜನೆಯನ್ನು ತಾವೇ ತಮ್ಮ ಕೈಯಾರ ಉದ್ಘಾಟಿಸಿದರು. ದುರಂತವೆಂದರೆ ಅದರ ಶ್ರೇಯಸ್ಸು ಅವರಿಗೆ ಸಲ್ಲಲಿಲ್ಲ! ಅವರ ಕೈ ಕೆಳಗೆ ವೇತನಕ್ಕಾಗಿ ದುಡಿದವರೊಬ್ಬರಿಗೆ ಅದು ಸಂದಿತು! ಸತ್ಯ ಹೀಗಿರುವಾಗ, ಇತಿಹಾಸದಲ್ಲಿ ನಾಲ್ವಡಿಯವರಿಗೆ ಘಟಿಸಿರುವ ಇಂತಹ ಘೋರತೆಗೆ ಯಾರು ಹೊಣೆ? ನಮ್ಮ ಕಣ್ಣೆದುರೇ ಒಬ್ಬ ಶ್ರೇಷ್ಠ ರಾಜನಿಗೆ ಅವನ ಸಾಧನೆಯ ಶ್ರೇಷ್ಠತೆ ಧಕ್ಕಲಿಲ್ಲವೆಂದರೆ? ಹಾಗಿದ್ದರೆ  ತನ್ನ ತನು ಮನ ಧನವನ್ನೆಲ್ಲ ಧಾರೆ ಎರೆದು ಆತ ಮಾಡಿದ ತ್ಯಾಗಕ್ಕೆ ಬೆಲೆಯಾದರೂ ಎಲ್ಲಿದೆ? ನಾಲ್ವಡಿಯವರಿಗೆ ಯಾರು ಇಂಥ ದ್ರೋಹ ಎಸಗಿದ್ದು? ವಿಶ್ವೇಶ್ವರಯ್ಯನವರಂತು ಖಂಡಿತ ಅಲ್ಲ. ಕಪೋಲಕಲ್ಪಿತ ಕಥೆ ಕಟ್ಟಿದ ಅವರ ಅನುಯಾಯಿಗಳು. ಹಾಗೆ ಬಂಗಾರ ಮನುಷ್ಯ ಚಿತ್ರದಲ್ಲಿ “ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ..” ಎಂಬ ಅಂತಹದ್ದೊಂದು ಆಘಾತಕಾರಿ ಸಾಹಿತ್ಯ ಬರೆಸಿದ ಆ ನಿರ್ಮಾಪಕ ಹಾಗು ಬರೆದ ಆ ಕವಿ!

Comments

  1. ನಮಸ್ತೆ ಸರ್
    ಬಹಳ ಸೂಕ್ಷ್ಮ ವಿಚಾರಗಳನ್ನು ವಿವರಿಸಿರುವ ನಿಮ್ಮಗೆ ಧನ್ಯವಾದಗಳು ಸರ್..
    ಒಂದು ಸೀಮಿತ ಜಾತಿ ಹೇಗೆ ಆ ಕಾಲದಿಂದಲೂ ಪ್ರಬಳವಾಗಿತ್ತು ...

    ReplyDelete
  2. Thank you very much for the brief discription

    ReplyDelete

Post a Comment

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...