ನಾವು ಬೌದ್ಧ ಧರ್ಮವನ್ನು ಇನ್ನಷ್ಟು ವರ್ಷ ಹೀಗೆ neglect ಮಾಡ್ತ ಹೋದರೆ ಬಹುಶಃ ಕರ್ನಾಟಕದಲ್ಲಿ ಅದು ಇತಿಹಾಸದ ತಳ ಸೇರಲಿದೆ. ಯಾವ ಪರಮಪೂಜ್ಯ ಬಾಬಾಸಾಹೇಬರು ತಮ್ಮ ಜೀವನದ ಅಂತಿಮ ಘಳಿಗೆಯಲ್ಲಿ ಬೌದ್ಧ ಧರ್ಮಕ್ಕೆ ಮಿಡಿದರೊ ನನ್ನ ಜನ ಈ ಧರ್ಮವನ್ನು ಪುನರುಜ್ಜೀವನಗೊಳಿಸುವರು ಎಂದು ತುಡಿದರೊ ಅದನ್ನು ಶೋಷಿತ ಸಮುದಾಯ ಅರಿಯುತ್ತಿಲ್ಲ. ಬಾಬಾಸಾಹೇಬರು ಕೊಟ್ಟ ಹಕ್ಕು ಬೇಕು ಆದರೆ ಅವರು ನೀಡಿದ ಕರ್ತವ್ಯದ ಕಡೆ ಗಮನವಿಲ್ಲ.
ಇಷ್ಟೊತ್ತಿಗೆ ಮನಸ್ಸು ಮಾಡಿದ್ದರೆ ಶೋಷಿತರಿಗೆ ಬಾಬಾಸಾಹೇಬರು ನಿಧನರಾದ ಈ 62 ವರ್ಷಗಳಲ್ಲಿ ಧರ್ಮ ಪುನರುಜ್ಜೀವನಗೊಳಿಸಲು ಕೇವಲ 10 ವರ್ಷ ಸಾಕಿತ್ತು. ಆದರೆ ಬಾಬಾಸಾಹೇಬರ ಈ ಆಶಯ ಕೇವಲ ಅವರ "ಬುದ್ಧ ಅಂಡ್ ಹಿಸ್ ಧಮ್ಮ" ಕೃತಿಯಲ್ಲಿ ಅಡಗಿ ಕುಳಿತಿದೆ ಅಷ್ಟೇ.ಈ ನಿಟ್ಟಿನಲ್ಲಿ ಬುಡಕಟ್ಟು ಹಬ್ಬ ಆಚರಣೆಗಳನ್ನು ಈಗಲೂ ಅದ್ದೂರಿಯಾಗಿ ಆಚರಿಸುವವರು ಒಂದೆಡೆಯಾದರೆ ಅದಕ್ಕೆ ವೈದಿಕ touch ಕೊಟ್ಟು ಸ್ವಲ್ಪ standard ಆಗಿರುವವರು ಇನ್ನೊಂದೆಡೆ. ಮತ್ತೊಂದಷ್ಟು ಜನ ಬಾಬಾಸಾಹೇಬರ ಚಿಂತನೆ ತಿಳಿದೂ ತಿಳಿದೂ ಧರ್ಮದ ಬಗ್ಗೆ ಕಡೇಪಕ್ಷ ಕೇವಲ 10% ಗಮನಹರಿಸದ ಜಾಣಗುರುಡರು.
ಈ ದಿಸೆಯಲ್ಲಿ ಇಂತಹ ಧಾರ್ಮಿಕ ಉದಾಸೀನತೆ, ಬೌದ್ಧ ಧರ್ಮ ಕಟ್ಟುವಲ್ಲಿ ನಮ್ಮ ಜಾಣ ಕುರುಡು ಬುದ್ಧಿ ಎಷ್ಟು ದಿನ ಎಂಬುದು?
ಮೊನ್ನೆ ಮಗಳ ಹುಟ್ಟು ಹಬ್ಬದ ಪ್ರಯುಕ್ತ ವಿಹಾರವೊಂದಕ್ಕೆ ಹೋಗಿದ್ದೆ. ಸರ್ಕಾರದ ಮತ್ತು ದಾನಿಗಳ ನೆರವಿನಿಂದ ಕಟ್ಟಲಾದ ಆ ವಿಹಾರಕ್ಕೆ ಗೆಳೆಯರೊಬ್ಬರು ಹೇಳಿದಂತೆ ಉಪಾಸಕರ ಕೊರತೆ. ಅದೇ ಪಕ್ಕದಲ್ಲಿ ಗಣಪತಿ ದೇವಸ್ಥಾನ ಇದೆ ಅಲ್ಲಿಗೆ ನೂಕು ನುಗ್ಗಲು!
ಒಟ್ಟಾರೆ ನಮ್ಮ ಜನರಿಗೆ ಬಾಬಾಸಾಹೇಬರು ಕೊಟ್ಟ ಆರ್ಥಿಕ, ಶೈಕ್ಷಣಿಕ, ರಾಜಕೀಯ ಎಲ್ಲಾ ಅನುಕೂಲ ಗಳು ಬೇಕು. ಆದರೆ ಹೊರಿಸಿದ ಹೊಣೆಗಾರಿಕೆ, ಕರ್ತವ್ಯ ಬೇಡ. ಬೌದ್ಧ ಧರ್ಮ ಎಂಬ ಆ ಧರ್ಮ ಬೇಡ. ಈ ದಿಸೆಯಲ್ಲಿ ಇದು ಇನ್ನೆಷ್ಟು ದಿನ ಮುಂದುವರೆಯಬೇಕು? ಬಾಬಾಸಾಹೇಬರು ನೀಡಿದ ಈ ಧಾರ್ಮಿಕ ಕರ್ತವ್ಯವನ್ನು ಇನ್ನೆಷ್ಟು ದಿನ ನಾವು ಕೈಚೆಲ್ಲಿ ಕೂರಬೇಕು?
ಈ ನಿಟ್ಟಿನಲ್ಲಿ ಈಗಲೂ ತಡವಾಗಿಲ್ಲ. ಪ್ರತಿ ಊರಿನಲ್ಲಿ ಸಾಧ್ಯ ಆಗದಿದ್ದರೂ ಪರವಾಗಿಲ್ಲ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪ್ರತಿ ಭಾನುವಾರ ಶೋಷಿತ ಸಮುದಾಯದ ಬಂಧುಗಳು ಒಂದೆಡೆ ಸೇರಬೇಕು. ಬುದ್ಧ ಪೂಜೆ, ಬುದ್ಧ ಗೀತ ಗಾಯನ, ಬುದ್ಧ ಬೋಧನೆ ಯನ್ನು ಕಡೇ ಪಕ್ಷ ಒಂದು ಗಂಟೆ ಕಡ್ಡಾಯವಾಗಿ ಮಾಡಲು ಪ್ರಾರಂಭಿಸಬೇಕು. ಆ ಮೂಲಕ ಬಾಬಾಸಾಹೇಬರ ಬೌದ್ಧ ಕರ್ತವ್ಯವನ್ನು ಕಾರ್ಯರೂಪಕ್ಕಿಳಿಸಲು ಮುಂದಡಿ ಇಡಬೇಕು ಎಂಬುದೇ ಸದ್ಯದ ಕಳಕಳಿ.
-ರಘೋತ್ತಮ ಹೊಬ
Comments
Post a Comment