Skip to main content

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

 


ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ...

"ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ".

-ಡಾ.ಬಿ.ಆರ್.ಅಂಬೇಡ್ಕರ್

(Ambedkar writings and speeches, Vol.17, Part 3, Pp.132)

ಕನ್ನಡಕ್ಕೆ: ರಘೋತ್ತಮ ಹೊಬ)

Comments

Popular posts from this blog

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...