"ಪುರುಷಸೂಕ್ತವು ಸೂಚಿಸಲ್ಪಟ್ಟಿದ್ದ ಸಮಾಜದ ಅಂದಿನ ಸಂವಿಧಾನವು ಚಾತುರ್ವರ್ಣ ಎಂದು ಕರೆಯಲ್ಪಡುತ್ತಿತ್ತು. ಹಾಗೆ (ಚಾತುರ್ವರ್ಣ) ಅದು ದೇವರಿಂದ ನೀಡಲ್ಪಟ್ಟಿದ್ದು ಎಂದು ಭಾವಸಲ್ಪಟ್ಟಿದ್ದರಿಂದ ಸ್ವಾಭಾವಿಕವಾಗಿ ಅದು ಇಂಡೋ ಆರ್ಯನ್ ಸಮಾಜದ ಆದರ್ಶವಾಯಿತು. ಈ ಹಿನ್ನೆಲೆಯಲ್ಲಿ ಇಂಡೋ-ಆರ್ಯನ್ ಸಮುದಾಯದ ಜೀವನವನ್ನು ಪ್ರಾಥಮಿಕ ಮತ್ತು ದ್ರವೀಕೃತ ಸ್ಥಿತಿಯಲ್ಲಿ ಎರಕಹೊಯ್ಯಲ್ಪಟ್ಟ ಅಚ್ಚು ಎಂದರೆ ಅದು ಚಾತುರ್ವರ್ಣದ ಇಂತಹ ಆದರ್ಶವಾಗಿತ್ತು. ಅಲ್ಲದೆ ಚಾತುರ್ವರ್ಣದ ಆ ಅಚ್ಚೇ ಇಂಡೋ ಆರ್ಯನ್ ಸಮುದಾಯಕ್ಕೆ ಇಂತಹ ವಿಚಿತ್ರ ಆಕಾರ ಮತ್ತು ರಚನೆಯನ್ನು ಕೊಟ್ಟಿದ್ದುದಾಗಿತ್ತು".
"ಇಂಡೋ-ಆರ್ಯನ್ ಸಮುದಾಯದ ಇಂತಹ ಚಾತುರ್ವರ್ಣದ ಆದರ್ಶದ ಅಚ್ಚಿಗೆ ಸಿಕ್ಕ ಗೌರವ ಅದು ಪ್ರಶ್ನಾತೀತವಾಗಿದುದಷ್ಟೇ ಅಲ್ಲ, ವಿವರಣಾತೀತವೂ ಆಗಿತ್ತು. ಇಂಡೋ-ಆರ್ಯನ್ ಸಮುದಾಯದ ಮೇಲೆ ಚಾತುರ್ವರ್ಣದ ಅದರ ಪ್ರಭಾವ ಅಚ್ಚಳಿಯದುದಾಗಿತ್ತು, ಅಗಾಧವಾದುದ್ದಾಗಿತ್ತು. ಅಂದಹಾಗೆ ಪುರುಷಸೂಕ್ತವು ಸೂಚಿಸಿದ್ದ ಇಂತಹ ಸಾಮಾಜಿಕ ಶ್ರೇಣೀಕರಣವು ಬುದ್ಧನನ್ನು ಹೊರತುಪಡಿಸಿ ಬೇರಾರಿಂದಲೂ ಪ್ರಶ್ನಿಸಲ್ಪಟ್ಟಿಲ್ಲ. ಬುದ್ಧನಿಗೂ ಅದನ್ನು ಅಲುಗಾಡಿಸಲಾಗಲಿಲ್ಲ. ಇದಕ್ಕೆ ಸರಳ ಕಾರಣ, ಬೌದ್ಧ ಧರ್ಮದ ಅವಧಿಯ ಕಾಲದಲ್ಲಿ ಮತ್ತು ಬೌದ್ಧಧರ್ಮದ ಅವನತಿಯ ನಂತರದ ಕಾಲದಲ್ಲಿ ಪುರುಷಸೂಕ್ತದ ಅಂಶಗಳನ್ನು ಸಮರ್ಥಿಸುತ್ತಾ ಅದನ್ನು ಪ್ರಚಾರ ಮಾಡುವುದನ್ನೇ, ವಿಸ್ತೃತ ರೂಪಕ್ಕೆ ತರುವುದನ್ನೇ ತಮ್ಮ ಕೆಲಸವನ್ನಾಗಿ ಮಾಡಿಕೊಂಡಿದ್ದ ಅನೇಕ ಕಾನೂನು ತಜ್ಞರು ಆ ಸಂದರ್ಭದಲ್ಲಿ ಇದ್ದುದಾಗಿತ್ತು".
-ಡಾ.ಬಿ.ಆರ್.ಅಂಬೇಡ್ಕರ್
(BAWS, Vol.7, Pp.23)
ಕನ್ನಡಕ್ಕೆ: ರಘೋತ್ತಮ ಹೊಬ
Comments
Post a Comment