ಇಂದು ವೆಬಿನಾರ್ ಒಂದರಲ್ಲಿ ಮಾತನಾಡುತ್ತಾ ಗೆಳೆಯರೊಬ್ಬರು "ಡಾ.ಅಂಬೇಡ್ಕರ್ ರವರಿಗೆ ರಾಜಕೀಯ ಮೀಸಲಾತಿ ಇಷ್ಟ ಇರಲಿಲ್ಲ, ಆ ಕಾರಣ ಅವರು ಅದನ್ನು ಹತ್ತು ವರ್ಷಗಳಿಗೆ ಸೀಮಿತಗೊಳಿಸಿದ್ದರು" ಎಂದರು! ಎಂತಹ ದುರಂತ ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ತಪ್ಪು ಮಾಹಿತಿ!
ಏಕೆಂದರೆ ವಾಸ್ತವ ಏನೆಂದರೆ ಡಾ.ಅಂಬೇಡ್ಕರರು ಶೋಷಿತ ಸಮುದಾಯಗಳಿಗೆ (SC/ ST) ಗಳಿಗೆ ರಾಜಕೀಯ ಮೀಸಲಾತಿಯನ್ನು ಕೂಡ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ರೀತಿ ಶಾಶ್ವತಗೊಳಿಸಬೇಕು ಎಂದು ಬಯಸಿದ್ದರು. ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿಯೂ ಕೂಡ ಅವರು ಇಂಗಿತ ವ್ಯಕ್ತಪಡಿಸಿದ್ದರು. (ಈ ಬಗ್ಗೆ ತಮ್ಮ ನೋವನ್ನು ಕೂಡ ಅವರು ತಮ್ಮ ಆಪ್ತರಾದ ಡಾ.ಶಂಕರಾನಂದ ಶಾಸ್ತ್ರೀ ಮತ್ತು ನಾನಕ್ ಚಂದ್ ರತ್ತು ರವರುಗಳಲ್ಲಿ ವ್ಯಕ್ತಪಡಿಸಿದ್ದರು) ಆದರೆ ಅಂದಿನ ಸಂವಿಧಾನ ರಚನಾ ಸಭೆಯ ಇತರ ಸದಸ್ಯರು ಮತ್ತು ಇತರೆ ಪಕ್ಷಗಳ ಸದಸ್ಯರು ಅದಕ್ಕೆ ಆಕ್ಷೇಪ ಎತ್ತಿದ್ದರಿಂದ ಅಂಬೇಡ್ಕರರ ಆ ಆಶಯ ಅದು ಸಾಕಾರವಾಗಲಿಲ್ಲ. ಪರಿಣಾಮ ಡಾ.ಅಂಬೇಡ್ಕರರು "ತದನಂತರದ ವಿಸ್ತಾರದ ಅವಕಾಶದೊಡನೆ ಕೇವಲ 10 ವರ್ಷಗಳವರೆಗೆ" ಎಂದು ಸೇರಿಸುವಂತಾಯಿತು. ದುರಂತ ಎಂದರ ಸಂವಿಧಾನ ಸಭೆಯ ಚರ್ಚೆಗಳನ್ನು (constitutional assembly debates) ಓದದ ಅನೇಕರು, ವಿಶೇಷವಾಗಿ ದಲಿತರು ರಾಜಕೀಯ ಮೀಸಲಾತಿಯನ್ನು ಅಂಬೇಡ್ಕರರೇ ಹತ್ತು ವರ್ಷಗಳಿಗೆ ಸೀಮಿತಗೊಳಿಸಿದರು, ಅವರಿಗೆ ರಾಜಕೀಯ ಮೀಸಲಾತಿ ಇಷ್ಟ ಇರಲಿಲ್ಲ ಹಾಗೆ ಹೀಗೆ ಎಂದು ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ.
ಆದ್ದರಿಂದ ದಯವಿಟ್ಟು ಯಾರೂ ಕೂಡ ಅಂತಹ ತಪ್ಪು ಪ್ರಚಾರ ಮಾಡಬೇಡಿ. ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಮೀಸಲಾತಿಯನ್ನು ಕೂಡ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ರೀತಿ ಶಾಶ್ವತಗೊಳಿಸಬೇಕು, ಶಾಶ್ವತವಾಗಿ ಇರಿಸಬೇಕು ಎಂದು ಆಶಿಸಿದ್ದರು ಎಂಬುದನ್ನು ತಿಳಿಯಿರಿ. ಬಾಬಾಸಾಹೇಬರ ಬಗ್ಗೆ ಓದದೆ, ಅಧ್ಯಯನ ಮಾಡದೆ ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡಬೇಡಿ.
***
Comments
Post a Comment