"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ.
"ಹೊಲಯರು - ಮಾದರು -ರಾಜರು"
ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನಮ್ಮನ್ನು ಚಾಲುಕ್ಯರು ಎಂದು ಕರೆಯುತ್ತಿದ್ದರು" ಎಂದು ಅಲ್ಲಿಯ ಜನರು ಈಗಲೂ ಹೇಳುವುದನ್ನು ಲೇಖಕರು ಉಲ್ಲೇಖಿಸುತ್ತಾರೆ.
ಇನ್ನು ಹಂಪಿ ಕನ್ನಡ ವಿವಿಯ ಸಂಶೋಧನೆಗಳ ಆಧಾರದಲ್ಲಿ ಲೇಖಕರು ಚಾಳುಕ್ಯರ ಸುಪ್ರಸಿದ್ಧ ದೊರೆ ಪುಲಕೇಶಿಯನ್ನು ಪ್ರಸ್ತಾಫಿಸುತ್ತ ಪುಲಕೇಶಿಯ ಮೂಲ ಪೊಲೆಕೇಶಿ, ಪೊಲೆ ಎಂಬುದು ಹೊಲೆಮನೆ ಮತ್ತು ಕೇಶಿ ಎಂಬುದು ಕೇಶವ ಎಂಬುದರ ಮೂಲವಾಗಿದೆ. ಆದ್ದರಿಂದ ಹೊಲೆಯರ ಕೇಶವನೆ ಪೊಲೆಕೇಶಿ ಅಥವಾ ಪುಲಕೇಶಿ. ಆತ ಛಲವಾದಿ ವಂಶಸ್ಥರಾದ ಚಾಲುಕ್ಯರ ದೊರೆ ಎಂದು ನಂಜುಂಡಸ್ವಾಮಿಯವರು ಹೇಳುತ್ತಾರೆ. ಇದಕ್ಕಾಗಿ ಅವರು ಕ್ರಿ.ಶ.578 ರ ಬಾದಾಮಿ ಶಾಸನ, ಕ್ರಿ.ಶ.602 ರ ಮಹಾಕೂಟ ಸ್ತಂಭ ಶಾಸನ, ಕ್ರಿ. ಶ. 634 ರ ಐಹೊಳೆಯ ಶಾಸನಗಳನ್ನು ಉಲ್ಲೇಖಿಸುತ್ತಾರೆ. ಮುಖ್ಯವಾಗಿ ಭಾಷಾಶಾಸ್ತ್ರದ ದಾಖಲೆ ನೀಡುವ ಅವರು ಸುಮೇರಿಯನ್ ಮತ್ತು ಅಕ್ಕಾಡಿಯನ್ ಭಾಷೆಗಳಲ್ಲಿ ರಾಜ ಮತ್ತು ರಾಜನಿಗೆ ಸಂಬಂಧಿಸಿದ ಪದ ವ್ಯುತ್ಪತ್ತಿ ದಾಖಲಿಸಿ ಚಾಲುಕ್ಯ ಪದ ಅಲ್ಲಿಂದ ಬಂದಿದೆ ಎನ್ನುತ್ತಾರೆ.
ಅಂದಹಾಗೆ ಪುಲಕೇಶಿನ್ ಅಂದರೆ ಪೊಲಕೇಸಿನ್ ಅಂದರೆ ಹೊಲ ಮಾಡುವವನು, ಭೂಮಿ ಉಳುವವನು ಎಂದು ಅವರು ಹೇಳುತ್ತಾ, ಹೊಲ ಎಂಬ ಪದದಿಂದ ಹೊಲೆಯರು (Owner of Land) ಬಂದಿರುವುದರಿಂದ ಹೊಲೆಯರು ಈ ರಾಜ್ಯ ಆಳಿದವರು ಅದಕ್ಕಾಗಿ ಅವರು ರಾಜರು ಎಂದು ಹೇಳುತ್ತಾರೆ. ಹಾಗೆಯೇ ಹೊಲೆಯರು ಹೊಲದ ಮೂಲದವರಾದ್ದರಿಂದ ಚಾಲುಕ್ಯರು ಅಥವಾ ಚಾಳುಕ್ಯರು "ಚಳುಕ್ಯ, ಚಳುಕಿ, ಸಳುಕಿ", ಇವುಗಳನ್ನು ಸಲಿಕೆ, ಸಲಾಕೆ ಎಂಬ ಕೃಷಿ ಉಪಕರಣಗಳೊಡನೆ ಸಮೀಕರಿಸಬಹುದು. ಆದ್ದರಿಂದ ಚಾಳುಕ್ಯರು ಹೊಲೆಯ ಜನಾಂಗದವರು ಅವರ ರಾಜ ಪುಲಕೇಶಿ (ಹೊಲೆಯರ ಕೇಶಿ) ಹೊಲೆಯರವನು ಎಂದು ನಂಜುಂಡಸ್ವಾಮಿಯವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ನಾವು ಬಾಬಾಸಾಹೇಬ್ ಅಂಬೇಡ್ಕರರ "ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು" ಎಂಬ ಮಾತನ್ನು ಇಲ್ಲಿ ಉಲ್ಲೇಖಿಸಬಹುದು.
***
#ಪುಲಿಕೇಶಿ
ನಿಜವಾದ ಇತಿಹಾಸ ಇನ್ನೂ ಅಗಿಯಬೇಕು. ಆಗ ನಿಜ ಸತ್ಯ ಹೊರಗೆ ಬರುತ್ತದೆ. ಮೊದಲ ಧರೆಗೆ ದೊಡ್ಡವರು ಪುಸ್ತಕ ದಲ್ಲಿ ಪ್ರಕಟಗೊಂಡಿತು, ಲೇಖಕರು ಐಪಿಎಸ್ ಭರಣಿ ಸರದು.ನಂತರ ನಂಜುಂಡ ಸ್ವಾಮಿ ಐಪಿಎಸ ಇವರದು. ಅಭಿನಂದನೆಗಳು ಸರ ಇನ್ನೂ ಹೆಚ್ಚಿನ ಇತಿಹಾಸ ಹೊರಗೆ ಬರಬೇಕು ತನ್ನಿ ಸರ ಭಗವಾನ್ ಬುದ್ಧ ಮತ್ತು ಸಾಹೇಬ್ ಅಂಬೇಡ್ಕರ ಅವರ ಕಂಡ ಕನಸು ನನಸಾಗುತ್ತದೆ.
ReplyDeletewow good news
ReplyDeleteTruth is always truth....tq sir great job
ReplyDelete