Skip to main content

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ






"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ.

"ಹೊಲಯರು - ಮಾದರು -ರಾಜರು"
ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನಮ್ಮನ್ನು ಚಾಲುಕ್ಯರು ಎಂದು ಕರೆಯುತ್ತಿದ್ದರು" ಎಂದು ಅಲ್ಲಿಯ ಜನರು ಈಗಲೂ ಹೇಳುವುದನ್ನು ಲೇಖಕರು ಉಲ್ಲೇಖಿಸುತ್ತಾರೆ. 

ಇನ್ನು ಹಂಪಿ ಕನ್ನಡ ವಿವಿಯ ಸಂಶೋಧನೆಗಳ ಆಧಾರದಲ್ಲಿ ಲೇಖಕರು ಚಾಳುಕ್ಯರ ಸುಪ್ರಸಿದ್ಧ ದೊರೆ ಪುಲಕೇಶಿಯನ್ನು ಪ್ರಸ್ತಾಫಿಸುತ್ತ ಪುಲಕೇಶಿಯ ಮೂಲ ಪೊಲೆಕೇಶಿ, ಪೊಲೆ ಎಂಬುದು ಹೊಲೆಮನೆ ಮತ್ತು ಕೇಶಿ ಎಂಬುದು ಕೇಶವ ಎಂಬುದರ ಮೂಲವಾಗಿದೆ. ಆದ್ದರಿಂದ ಹೊಲೆಯರ ಕೇಶವನೆ ಪೊಲೆಕೇಶಿ ಅಥವಾ ಪುಲಕೇಶಿ. ಆತ ಛಲವಾದಿ ವಂಶಸ್ಥರಾದ ಚಾಲುಕ್ಯರ ದೊರೆ ಎಂದು ನಂಜುಂಡಸ್ವಾಮಿಯವರು ಹೇಳುತ್ತಾರೆ. ಇದಕ್ಕಾಗಿ ಅವರು ಕ್ರಿ.ಶ.578 ರ ಬಾದಾಮಿ ಶಾಸನ, ಕ್ರಿ.ಶ‌.602 ರ ಮಹಾಕೂಟ ಸ್ತಂಭ ಶಾಸನ, ಕ್ರಿ. ಶ. 634 ರ ಐಹೊಳೆಯ ಶಾಸನಗಳನ್ನು ಉಲ್ಲೇಖಿಸುತ್ತಾರೆ. ಮುಖ್ಯವಾಗಿ ಭಾಷಾಶಾಸ್ತ್ರದ ದಾಖಲೆ ನೀಡುವ ಅವರು ಸುಮೇರಿಯನ್ ಮತ್ತು ಅಕ್ಕಾಡಿಯನ್ ಭಾಷೆಗಳಲ್ಲಿ ರಾಜ ಮತ್ತು ರಾಜನಿಗೆ ಸಂಬಂಧಿಸಿದ ಪದ ವ್ಯುತ್ಪತ್ತಿ ದಾಖಲಿಸಿ ಚಾಲುಕ್ಯ ಪದ ಅಲ್ಲಿಂದ ಬಂದಿದೆ ಎನ್ನುತ್ತಾರೆ.

ಅಂದಹಾಗೆ ಪುಲಕೇಶಿನ್ ಅಂದರೆ ಪೊಲಕೇಸಿನ್ ಅಂದರೆ ಹೊಲ ಮಾಡುವವನು, ಭೂಮಿ ಉಳುವವನು ಎಂದು ಅವರು ಹೇಳುತ್ತಾ, ಹೊಲ ಎಂಬ ಪದದಿಂದ ಹೊಲೆಯರು (Owner of Land) ಬಂದಿರುವುದರಿಂದ ಹೊಲೆಯರು ಈ ರಾಜ್ಯ ಆಳಿದವರು ಅದಕ್ಕಾಗಿ ಅವರು ರಾಜರು ಎಂದು ಹೇಳುತ್ತಾರೆ. ಹಾಗೆಯೇ ಹೊಲೆಯರು ಹೊಲದ ಮೂಲದವರಾದ್ದರಿಂದ ಚಾಲುಕ್ಯರು ಅಥವಾ ಚಾಳುಕ್ಯರು "ಚಳುಕ್ಯ, ಚಳುಕಿ, ಸಳುಕಿ", ಇವುಗಳನ್ನು ಸಲಿಕೆ, ಸಲಾಕೆ ಎಂಬ ಕೃಷಿ ಉಪಕರಣಗಳೊಡನೆ ಸಮೀಕರಿಸಬಹುದು. ಆದ್ದರಿಂದ ಚಾಳುಕ್ಯರು ಹೊಲೆಯ ಜನಾಂಗದವರು ಅವರ ರಾಜ ಪುಲಕೇಶಿ (ಹೊಲೆಯರ ಕೇಶಿ) ಹೊಲೆಯರವನು ಎಂದು ನಂಜುಂಡಸ್ವಾಮಿಯವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ನಾವು ಬಾಬಾಸಾಹೇಬ್ ಅಂಬೇಡ್ಕರರ "ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು" ಎಂಬ ಮಾತನ್ನು ಇಲ್ಲಿ ಉಲ್ಲೇಖಿಸಬಹುದು.
***
#ಪುಲಿಕೇಶಿ

Comments

  1. ನಿಜವಾದ ಇತಿಹಾಸ ಇನ್ನೂ ಅಗಿಯಬೇಕು. ಆಗ ನಿಜ ಸತ್ಯ ಹೊರಗೆ ಬರುತ್ತದೆ. ಮೊದಲ ಧರೆಗೆ ದೊಡ್ಡವರು ಪುಸ್ತಕ ದಲ್ಲಿ ಪ್ರಕಟಗೊಂಡಿತು, ಲೇಖಕರು ಐಪಿಎಸ್ ಭರಣಿ ಸರದು.ನಂತರ ನಂಜುಂಡ ಸ್ವಾಮಿ ಐಪಿಎಸ ಇವರದು. ಅಭಿನಂದನೆಗಳು ಸರ ಇನ್ನೂ ಹೆಚ್ಚಿನ ಇತಿಹಾಸ ಹೊರಗೆ ಬರಬೇಕು ತನ್ನಿ ಸರ ಭಗವಾನ್ ಬುದ್ಧ ಮತ್ತು ಸಾಹೇಬ್ ಅಂಬೇಡ್ಕರ ಅವರ ಕಂಡ ಕನಸು ನನಸಾಗುತ್ತದೆ.

    ReplyDelete
  2. Truth is always truth....tq sir great job

    ReplyDelete

Post a Comment

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...