-ರಘೋತ್ತಮ ಹೊ.ಬ
ವಯಕ್ತಿಕವಾಗಿ ನಾನು ಮತ್ತು ನನ್ನಂತಹ ಹಲವರು ಮಾಡಿದ ತಪ್ಪೆಂದರೆ ಬರೇ ರಾಜಕಾರಣದ ಬಗ್ಗೆ ಚರ್ಚಿಸಿದ್ದು ಚಿಂತಿಸಿದ್ದು. ಒಂದು ಚುನಾವಣೆ ಮುಗಿದ ತಕ್ಷಣ ಇನ್ನೊಂದು ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳಿ ಎಂದು ನಿರಂತರ ಪುಂಗಿ ಊದಿದ್ದು. Its all rubbish. ಯಾಕೆಂದರೆ ಬಾಬಾಸಾಹೇಬ್ ಅಂಬೇಡ್ಕರರೇ ಒಂದೆಡೆ ಮನುಷ್ಯ ರಾಜಕೀಯ ಪ್ರಾಣಿಯಲ್ಲ (Man is not a political animal) " ಎಂದಿದ್ದಾರೆ. ಹಾಗೆಯೇ ಮತ್ತೊಂದೆಡೆ "ರಾಜಕಾರಣವೇ ಎಲ್ಲವೂ ಅಲ್ಲ, ರಾಜಕಾರಣವೇ ಅಂತಿಮವಲ್ಲ (Politics is not be all and end all of a society) ಎಂದಿದ್ದಾರೆ. ಉದಾಹರಣೆಗೆ ಮುಸ್ಲಿಂ ಸಮುದಾಯ. ತನ್ನ ಆರ್ಥಿಕತೆ ಚಟುವಟಿಕೆ ಕಾರಣಕ್ಕೆ ಅದು ತನ್ನ ಅಸ್ತಿತ್ವ ಉಳಿಸಿಕೊಂಡಿದೆ, ಕ್ರೈಸ್ತ ಸಮುದಾಯ ತನ್ನ ಶೈಕ್ಷಣಿಕ ಚಟುವಟಿಕೆ ಕಾರಣಕ್ಕೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇವೆರಡೂ ಧರ್ಮಗಳು.
ಆದ್ದರಿಂದ ದಲಿತ ಸಮುದಾಯ ಬರೇ ರಾಜಕಾರಣ, ಅದರ ಸೋಲು ಗೆಲುವು, ಅವಕಾಶ ವಂಚನೆ ಬಗ್ಗೆ ಮಾತಾಡದೆ, ಅಯ್ಯೋ! ಆಕಾಶ ಕಳಚಿ ಬಿದ್ದೋಯ್ತು ಎಂಬಂತೆ ವರ್ತಿಸದೆ ಆರ್ಥಿಕ ಶಕ್ತಿ ಗಳಿಸುವುದರ ಕಡೆ, ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ ತಲುಪಿಸುವ ಕಡೆ, ಬಾಬಾಸಾಹೇಬ್ ಅಂಬೇಡ್ಕರರ ಮಹದಾಸೆಯ ಬೌದ್ಧ ಧಮ್ಮ ಹರಡುವುದರ ಕಡೆ ಗಮನಹರಿಸುವುದು ಕಾರ್ಯ ಚಟುವಟಿಕೆ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳು ಈ ಮಾರ್ಗಗಳಲ್ಲಿ ಮುನ್ನಡೆಯಲಿ. ಸಾಮಾಜಿಕ ವಿಮೋಚನೆ, ಪರಿವರ್ತನೆ ಕಾಣಲಿ.
---
Comments
Post a Comment