ಹೌದು, ಇತರರು ಅಂದರೆ ಇತರೆ ಸಮುದಾಯಗಳವರು, ಆ ಸಮುದಾಯಗಳ ರಾಜಕಾರಣಿಗಳು "ನಮಗೆ ರಾಜಕೀಯವಷ್ಟೇ ಮುಖ್ಯ, ಬೇರೇನೂ ಅಲ್ಲ" ಎಂದುಬಿಡಬಹುದು. ಆದರೆ ಶೋಷಿತ ಸಮುದಾಯಗಳ ರಾಜಕಾರಣಿಗಳು "ತಮಗೆ ರಾಜಕೀಯವಷ್ಟೇ ಮುಖ್ಯ, ಅದಕ್ಕೋಸ್ಕರ ನಾವು ಏನು ಬೇಕಾದರೂ ಮಾಡಲು ಸಿದ್ದ" ಎನ್ನುವಂತಿಲ್ಲ. ನಮ್ಮ ನಡುವೆ ಬಾಬಾಸಾಹೇಬ್ ಅಂಬೇಡ್ಕರ್ ವಾದವಿದೆ. ಅದು ನಮ್ಮನ್ನು ಹೀಗೆಯೇ ಬದುಕಿ ಎಂದು ಹೇಳುತ್ತದೆ. ಹೀಗೆಯೇ ಬದುಕಬೇಕು ಎಂದು ಕೂಡ ಹೇಳುತ್ತದೆ. ಯಾಕೆಂದರೆ ಅಂಬೇಡ್ಕರರು ಹೇಳಿರುವ ಹಾಗೆ ಬದುಕಿದಾಗ ಮಾತ್ರ ನಮಗೆ ಸ್ವಾಭಿಮಾನ, ಅಸ್ಪೃಶ್ಯತೆಯಿಂದ ವಿಮೋಚನೆ ಸಿಗಲು ಸಾಧ್ಯ. ಅದು ಬಿಟ್ಟು "ನಮಗೆ ರಾಜಕೀಯವಷ್ಟೇ ಮುಖ್ಯ" ಎಂದು ಶೋಷಿತ ಸಮುದಾಯಗಳ ರಾಜಕಾರಣಿಗಳು ಸಾರ್ವಜನಿಕರ ಮುಂದೆ ಹೇಳಿದರೆ, ಹಾಗೆ ಹೇಳುತ್ತಾ ಬದುಕಿದರೆ ಸಮುದಾಯದ ಸ್ವಾಭಿಮಾನ ಹರಾಜಾಗುತ್ತ ಹೋಗುತ್ತದೆ, ನಾಶವಾಗುತ್ತದೆ. ಹೊಸ ತಲೆಮಾರು ಮತ್ತೊಮ್ಮೆ ಅಸ್ಪೃಶ್ಯತೆಗೆ ಈಡಾಗುತ್ತದೆ. ಈ ಎಚ್ಚರಿಕೆ ಶೋಷಿತ ಸಮುದಾಯಗಳ ಪ್ರತಿಯೊಬ್ಬ ರಾಜಕಾರಣಿಗೂ, ರಾಜಕೀಯ ಪ್ರವೇಶಿಸಲು ಆಸೆಪಡುವ ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು.
ಜೈ ಭೀಮ್.
#ಸ್ವಾಭಿಮಾನ #ಅಂಬೇಡ್ಕರ್ #ಅಸ್ಪೃಶ್ಯತೆ
Comments
Post a Comment