ಅಸ್ಪೃಶ್ಯ ಆತ ಎಷ್ಟೇ ಬೆಳೆದರೂ...
"ಒಂದು ಬಗೆಯ ತಾರತಮ್ಯವಿದೆ ಅದು ತುಂಬ ಸೂಕ್ಷ್ಮ, ಆದಾಗ್ಯೂ ಅದು ವಾಸ್ತವ. ಆ ತಾರತಮ್ಯದಲ್ಲಿ ಪ್ರತಿಭಾವಂತ, ಅರ್ಹ ಅಸ್ಪೃಶ್ಯನ ಸ್ಥಾನ ಮತ್ತು ಘನತೆಯನ್ನು ಕುಗ್ಗಿಸುವ ವ್ಯವಸ್ಥಿತ ತಂತ್ರವಿರುತ್ತದೆ. ಉದಾಹರಣೆಗೆ ಒಬ್ಬ ಹಿಂದೂ ನೇತಾರನನ್ನು ಭಾರತದ ಶ್ರೇಷ್ಠ ನೇತಾರ ಎನ್ನಲಾಗುತ್ತದೆ ಆದರೆ ಯಾರೂ ಕೂಡ ಆತನನ್ನು ಕಾಶ್ಮೀರಿ ಬ್ರಾಹ್ಮಣರ ನೇತಾರ (ಆತ ಅದೇ ಆಗಿದ್ದರೂ ಕೂಡ) ಎನ್ನುವುದಿಲ್ಲ. ಅಕಸ್ಮಾತ್ ಆ ನೇತಾರ ಅಸ್ಪೃಶ್ಯ ಸಮುದಾಯದವನಾಗಿದ್ದರೆ ಆತನನ್ನು ಅಸ್ಪೃಶ್ಯರ ನೇತಾರ ಎಂದಷ್ಟೇ ಹೇಳಲಾಗುತ್ತದೆಯೇ ಹೊರತು ಆತನನ್ನು ಭಾರತದ ನೇತಾರ ಎನ್ನಲಾಗುವುದಿಲ್ಲ! ಹಾಗೆಯೇ ಒಬ್ಬ ಹಿಂದೂ ವೈದ್ಯನನ್ನು ಭಾರತದ ಶ್ರೇಷ್ಠ ವೈದ್ಯ ಎನ್ನಲಾಗುತ್ತದೆ, ಯಾರೂ ಕೂಡ ಆತನನ್ನು ಅಯ್ಯಂಗಾರ್ (ಆತ ಅದೇ ಆಗಿದ್ದರೂ ಕೂಡ) ಎನ್ನುವುದಿಲ್ಲ. ಆದರೆ ಅದೇ ವೈದ್ಯ ಅಕಸ್ಮಾತ್ ಅಸ್ಪೃಶ್ಯ ನಾಗಿದ್ದರೆ ಆತನನ್ನು ಹಾಗೆಯೇ ಕರೆಯಲಾಗುತ್ತದೆ, ಅಸ್ಪೃಶ್ಯ ವೈದ್ಯ ಎಂದೇ ಸಂಬೋಧಿಸಲಾಗುತ್ತದೆ. ಅಂತೆಯೇ ಒಬ್ಬ ಹಿಂದೂ ಹಾಡುಗಾರನನ್ನು ಭಾರತದ ಶ್ರೇಷ್ಠ ಹಾಡುಗಾರ ಎಂದು ವರ್ಣಿಸಲಾಗುತ್ತದೆ ಮತ್ತು ಅದೇ ಹಾಡುಗಾರ ಅಸ್ಪೃಶ್ಯನಾಗಿದ್ದರೆ ಆತನನ್ನು ಅಸ್ಪೃಶ್ಯ ಹಾಡುಗಾರ ಅಷ್ಟೇ ಎಂದು ಕರೆಯಲಾಗುತ್ತದೆ. ಹಾಗೆಯೇ ಒಬ್ಬ ಹಿಂದೂ ಕುಸ್ತಿ ಪಟುವನ್ನೂ ಅಷ್ಟೆ ಭಾರತದ ಶ್ರೇಷ್ಠ ಜಿಮ್ನಾಸ್ಟ್ ಎನ್ನಲಾಗುತ್ತದೆ ಅಕಸ್ಮಾತ್ ಆತ ಅಸ್ಪೃಶ್ಯ ನಾಗಿದ್ದರೆ ಆತನನ್ನು ಅಸ್ಪೃಶ್ಯ ಜಿಮ್ನಾಸ್ಟ್ ಎಂದೇ ಕರೆಯಲಾಗುತ್ತದೆ".
"ಈ ನಿಟ್ಟಿನಲ್ಲಿ ಮೇಲೆ ಹೇಳಿದ ಈ ಮಾದರಿಯ ತಾರತಮ್ಯದ ಮೂಲ ಇರುವುದು ಅಸ್ಪೃಶ್ಯರು ಅದೆಷ್ಟೇ ಶ್ರೇಷ್ಠತೆಯನ್ನು ಸಾಧಿಸಲಿ ಅವರು ಕೀಳು ಜನರು ಎನ್ನುವ ಹಿಂದೂಗಳ ದೃಷ್ಟಿಕೋನದಲ್ಲಿ. ಈ ದಿಸೆಯಲ್ಲಿ ಅಸ್ಪೃಶ್ಯ ಸಮುದಾಯದ ಶ್ರೇಷ್ಠ ವ್ಯಕ್ತಿಗಳು ಅವರು ಅಸ್ಪೃಶ್ಯ ಸಮುದಾಯದಲ್ಲಷ್ಟೆ ಶ್ರೇಷ್ಠರು ಅವರು ಹಿಂದೂ ಶ್ರೇಷ್ಠ ವ್ಯಕ್ತಿಗಳಿಗಿಂತ ಶ್ರೇಷ್ಠರಾಗುವುದಿರಲಿ ಅವರ ಸಮಕ್ಕೂ ಕೂಡ ಏರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಗೆಯ ತಾರತಮ್ಯ ಗುಣಲಕ್ಷಣದಲ್ಲಿ ಸಾಮಾಜಿಕತೆಯದಾಗಿದ್ದರೂ ಅದು ಆರ್ಥಿಕ ತಾರತಮ್ಯದ ಅಪಮಾನವಲ್ಲದೆ ಬೇರೇನಲ್ಲ."
--ಬಾಬಾಸಾಹೇಬ್ ಅಂಬೇಡ್ಕರ್. (AW&S, vol.5, Pp.109)
ಕನ್ನಡಕ್ಕೆ: ರಘೋತ್ತಮ ಹೊಬ (೨೯-೮-೧೬)
Comments
Post a Comment