ಬುದ್ಧರು ಮಹಿಳೆಯರು ಮತ್ತು ಶೂದ್ರರು ಸೇರಿದಂತೆ ಎಲ್ಲರಿಗೂ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು. ಯಾಕೆಂದರೆ.... -ರಘೋತ್ತಮ ಹೊಬ
ಬುದ್ಧರ ಪ್ರಕಾರ ನಾವು ಇನ್ನೊಬ್ಬರಿಗೆ "ನೀನು ಶಿಕ್ಷಣ ಪಡೆಯಬೇಡ ಅಥವಾ ನಿನಗೆ ಶಿಕ್ಷಣ ನಿರಾಕರಿಸಲಾಗಿದೆ, ಹಾಗೆ ನೀನು ಆಯುಧ ಹೊಂದಬೇಡ ಅಥವಾ ನಿನಗೆ ಆಯುಧ ನಿರಾಕರಿಸಲಾಗಿದೆ, ನೀನು ವ್ಯಾಪಾರ- ವ್ಯವಹಾರ ಮಾಡಬೇಡ ಅಥವಾ ನಿನಗೆ ವ್ಯಾಪಾರ_ವ್ಯವಹಾರ ನಿರಾಕರಿಸಲಾಗಿದೆ" ಎಂದು ಅವೆಲ್ಲವನ್ನೂ ನಾವೇ ಅನುಭವಿಸಿದರೆ ಅನುಭವಿಸಿ ಸುಖವಾಗಿದ್ದರೆ, ನಾವು ಯಾರಿಗೆ ಎಲ್ಲವನ್ನೂ ನಿರಾಕರಿಸಿರುತ್ತೇವೆಯೊ ಆತ ನಮ್ಮನ್ನು ನೋಡಿದಾಗ ಖಂಡಿತ ಖುಷಿ ಪಡುವುದಿಲ್ಲ. ಬದಲಿಗೆ ನಾವು ಇರುವ ಮತ್ತು ಬದುಕುತ್ತಿರುವ ರೀತಿ ಕಂಡು ಆತ ದ್ವೇಷ ಸಾಧಿಸುತ್ತಾನೆ. "ಎಲ್ಲವನ್ನೂ ನಮಗೆ ನಿರಾಕರಿಸಿ ಇವನು ಆರಾಮಾಗಿ ಇದ್ದಾನಲ್ಲ ಎಂದು ಆತ ನಮ್ಮ ವಿರುದ್ಧ ಹಗೆ ಸಾಧಿಸಲಾರಂಭಿಸುತ್ತಾನೆ. ಪರಿಣಾಮ ಆತ ನಮಗೆ ಅಪಾಯವನ್ನು ಕೂಡ ತಂದೊಡ್ಡಬಹುದು. ನಾವು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ.
ಅದರ ಬದಲು ನಾವು "ಶಿಕ್ಷಣ, ವ್ಯಾಪಾರ ವ್ಯವಹಾರ, ಆಯುಧ... ಹೀಗೆ ಎಲ್ಲವನ್ನೂ ಯಾರಿಗೂ ನಿರಾಕರಿಸದೆ ಎಲ್ಲರೂ ಹೊಂದುವಂತೆ ಬೋಧಿಸಿದರೆ, ಕಡೆ ಪಕ್ಷ ಅವುಗಳನ್ನು ಹೊಂದುವುದಕ್ಕೆ ತಡೆ ಮಾಡದೆ ನಮ್ಮ ಪಾಡಿಗೆ ನಾವಿದ್ದರೆ ಎಲ್ಲರೂ ಎಲ್ಲವನ್ನೂ ಪಡೆಯುತ್ತಾರೆ. ನಮ್ಮ ಹಾಗೆ ಅವರು ಕೂಡ ನೆಮ್ಮದಿಯಿಂದ ಇರುತ್ತಾರೆ. ಆಗ ಅವರು ನಮಗೆ ಅಪಾಯ ತಂದೊಡ್ಡುವುದಿಲ್ಲ ನಾವು ಕೂಡ ನೆಮ್ಮದಿಯಿಂದ ಇರಬಹುದು. ಹೀಗೆ ಹೇಳುತ್ತಾ ಬುದ್ಧರು ಬ್ರಾಹ್ಮಣ ಲೋಹಿಕ್ಕರೊಂದಿಗೆ ನಡೆಸಿದ ಚರ್ಚೆಯ ಈ ಸಂದರ್ಭದಲ್ಲಿ "ಮಹಿಳೆಯರು ಮತ್ತು ಶೂದ್ರರು ಸೇರಿದಂತೆ ಎಲ್ಲರಿಗೂ ಕಲಿಸುವ, ಶಿಕ್ಷಣ ನೀಡುವ ಸಲಹೆ ನೀಡುತ್ತಾರೆ. ಇದರಿಂದ ಬ್ರಾಹ್ಮಣರು ಕೂಡ ನೆಮ್ಮದಿಯಾಗಿ ಇರಬಹುದು ಎಂದು ಈ ಪ್ರಸಂಗದ ಮೂಲಕ ಬುದ್ಧರು ವಿವರಿಸುತ್ತಾರೆ.
****
(ಆಧಾರ: ಡಾ.ಅಂಬೇಡ್ಕರ್ ರವರ "ಬುದ್ಧ ಅಂಡ್ ಹಿಸ್ ಧಮ್ಮ" ಕೃತಿ, ಪುಟ ಸಂಖ್ಯೆ 289, 290)
Comments
Post a Comment