"ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ ಹಿಂದೂ ಧರ್ಮವು ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.
"ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯನ್ ರು ಪೆಗಾನಿಸಂ ಅನ್ನು ಹೊರದಬ್ಬಿದ್ದನ್ನು
ಯಾರೇ ಆದರೂ ನೆನಪಿಸಿಕೊಳ್ಳಬಹುದು. ರೋಮನ್ ಆ ಸಾಮ್ರಾಜ್ಯದಲ್ಲಿ ಜನಸಾಮಾನ್ಯರಿಗೆ ಪೆಗಾನಿಸಂ ನಮಗೆ ಯಾವುದೇ ರೀತಿಯ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡುವುದಿಲ್ಲ ಎಂದು ಅರಿವಾದಾಗ ಅವರು ಕ್ರೈಸ್ತ ಧರ್ಮ ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೋಮ್ ನಲ್ಲಿ ಅಂದು ಏನು ನಡೆಯಿತೊ ಅದು ಖಂಡಿತ ಭಾರತದಲ್ಲಿ ಘಟಿಸಲಿದೆ. ಹಿಂದೂ ಜನಸಮೂಹಕ್ಕೆ ಅವರಿಗೆ ತಿಳುವಳಿಕೆ ಮೂಡಿದಾಗ ಖಂಡಿತ ಅವರೆಲ್ಲ ಬೌದ್ಧರಾಗಲಿದ್ದಾರೆ.
-ಡಾ.ಬಿ.ಆರ್.ಅಂಬೇಡ್ಕರ್
(ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಇಂಗ್ಲಿಷ್ ಸಂ. 17, ಭಾಗ 2, ಪು. 103) ಕನ್ನಡಕ್ಕೆ: ರಘೋತ್ತಮ ಹೊಬ
Comments
Post a Comment