-ರಘೋತ್ತಮ ಹೊ.ಬ,
ಎದೆಯೊಳಗಿನ ಸಂಕ್ಟ ಯಾರಿಗೂ ಹೇಳಬಾರದು ಎಂದಿದ್ದೆ
ಹೇಳದಿದ್ದರೆ ಎದೆ ನಾ ಒಡೆಯುವೆ ಎಂದಿತ್ತು
ಹೇಳಲೊರಟೆ
ಗೌರವ ಕೊಟ್ಟಿದ್ದೆ ಅವನಿಗೆ
ಅವ ಬರುವ ಕೆಲಸ ಕೊಡಿಸುವ ಮದುವೆ ಮಾಡಿಸುವ ಮಕ್ಕಳುಟ್ಟಿಸುವ
ಅದೃಷ್ಟಕ್ಜೆ ಅಪ್ಪ ಕೆಲಸ ಕೊಡಿಸಿದ್ದ ಮದುವೆ ಮಾಡಿಸಿದ್ದ ನಾ ಮಕ್ಕಳುಟ್ಟಿಸಿದ್ದೆ
ಗೌರವ ಕೊಟ್ಟಿದ್ದೆ ಅವನಿಗೆ
ಕಣ್ಣೆತ್ತಿ ನೋಡಿರಲಿಲ್ಲ
ಕೈ ಭದ್ರ ಕುಲುಕಿರಲಿಲ್ಲ
ಬರೆದಿದ್ದೆ ಜಗದಗಲ ಮುಗಿಲಗಲ
ಫೇಸ್ ಬುಕ್ಕು ವ್ಯಾಟ್ಸಪ್ಪು ಪತ್ರಿಕೆ
ನಾನೇ ತಿದ್ದಿದ್ದೆ ತೀಡಿದ್ದೆ ಮುದ್ರಿಸಿದ್ದೆ ಹಿರಿ ಹಿರಿ ಹಿಗ್ಗಿ ಹಂಚಿದ್ದೆ
ಬಂದ ನೋಡಿ ಶೂರ ಜಗದೇಕವೀರ
ನಾಡಿನಾದ್ಯಂತ ಸಂಭ್ರಮಿಸಿದ್ದೆ
ಎದೆಯುಳಗಿನ ಬುದ್ಧನ ಅವನಿಗೆ ಕೊಟ್ಟಿದ್ದೆ
ಮನದೊಳಗಿನ ಅಂಬೇಡ್ಕರನ ಅವನಲ್ಲಿ ಕಂಡಿದ್ದೆ
ದುಡ್ಡು ಕಾಸು ಎಲ್ಲದಕ್ಕೂ ಅವನೆ ಬಾಸು
ಬೆಳಗು ರಾತ್ರೆ ಅವನದೆ ಜಪ
ಸಂಜೆಯಾದರೆ ನೈಂಟಿಯೊಳಗೂ ಅವನದೆ ತಪ
ಗ್ಯಾನ ತಪ್ಪಿ ಬಿದ್ದಿದ್ದರೂ ಅವನನೆ ನೆನಪಿದ್ದೆ
ಅವನ ನಡೆ ನುಡಿ ಕುಣಿತ
ಭರವಸೆಯ ಹಿಮಾಲಯ ಕಂಡಿದ್ದೆ
ಕೈಕುಲುಕಲು ಸಾಲು ನಿಂತಿದ್ದೆ
ದನಿ ಕೇಳಲು ಕಿವಿ ತೆರೆದು ಕುಂತಿದ್ದೆ
ಹತ್ತಿರ ಬಂದರೆ ಪುಳಕ ದೂರ ಹೋದರೆ ನರಕ
ಯಾರಿಗೆ ಹೇಳಲಿ ನನ್ನ ತವಕ
ಹತ್ತಾರು ಮೈಲಿ ನಡೆದಿದ್ದೆ ಅವನ ಹಿಂದೆ
ಬದುಕಿನ ಎಲ್ಲವನು ಕಳೆದು
ಮದುವೆ ಮಕ್ಕಳು ವೃತ್ತಿ ಎಲ್ಲವನ್ನು ಬಿಟ್ಟು ನನ್ನಂತವರು ಸಾವಿರಾರು
ಒಂದೊಮ್ಮೆ ದಾರಿ ತಪ್ಪಲಾರಂಭಿಸಿದ್ದ ತಿದ್ದಲೋದೆ ಬೈಸಿಕೊಂಡೆ ಟ್ರೋಲ್ ಮಾಡಿಸಿಕೊಂಡೆ
ಗೆದ್ದ ಒಮ್ಮೆ ಜಗವ ಗೆದ್ದ ಎಂದೇ ಖುಷಿಗೊಂಡೆ
ನನ್ನ ಕೀರ್ತಿಯ ಪೇಟವ ಅವನಿಗೆ ತೊಡಿಸಿದ್ದೆ
ಕೆಲಸ ಮಕ್ಕಳು ಮದುವೆ ಎಲ್ಲಾ ಮಾಡಿಕೊಂಡಿದ್ದೆ
ಮಾಡಿಕೊಳ್ಳದವರು ಕ್ಯೂ ನಿಂತಿದ್ದರು
ಮಾಡಿಕೊಡುವ ಎಂದು!
ಹೌಹಾರಿದ್ದ.... ಸರ್ರನೆ ತಿರುಗಿದ್ದ ಹಿಂದಿರುಗಿದ್ದ ಯೂಟರ್ನ್ ತೆಗೆದುಕೊಂಡಿದ್ದ
ಯಾರು ಏನು ಎಂದು ನೋಡುವಷ್ಟರಲ್ಲಿ
ಅಧಿಕಾರದ ಬಂಡಿಯ ಜೊತೆಗೆ ಸರಸರನೆ ಓಡಿದ್ದ
ಅಯ್ಯೋ! ಅಪಾ... ಇದೇನಪಾ...!
ಗಾಭರಿಗೊಂಡ ಎಲ್ಲರ ಜಪತಪ
ಅದೊಂದು ದಿನ ಎದುರುಕಂಡಿದ್ದೆ
ಸರ್ರನೆ ಮುಖ ತಿರುಗಿಸಿದ್ದ ಕಂಡು ಎದೆಯೊಡೆದಿದ್ದೆ ಯಾರಿಗೂ ಹೇಳದೆ
ಹೃದಯ ಭದ್ರ ಹಿಡಿದಿದ್ದೆ
ಚಿಂತಿಸಿದೆ ಮಂತಿಸಿದೆ ಬರೆದೆ ಕೂಗಾಡಿದೆ
ಅಧಿಕಾರದ ಭದ್ರ ಕೈ ಹಿಡಿದಿದ್ದ ಆತ
ಗಹಗಹಿಸಿ ನಕ್ಕಿದ್ದ ಕಂಡಿದ್ದ
ಶತೃವಂತೆ ನನ್ನನ್ನೆ
ನನ್ನ ಬದುಕ ಕಿತ್ತುಕೊಂಡಿದ್ದ ಯೌವನ ಆಯಸ್ಸು ಮದುವೆ ಮಕ್ಕಳು ಹಣ ಐಶ್ವರ್ಯ ಅಯ್ಯೋ! ಪ್ರಾಣ ತೆತ್ತವರೆಷ್ಟೊ!
ನನಗಾದರೋ ಬರಹ ಸಿದ್ಧಿಸಿತ್ತು ಬರೆದೆ
ಕೀರ್ತಿ ಗಳಿಸಿದ್ದೆ
ಅವನಲ್ಲದಿದ್ದರೂ ಅವನ ಜುಟ್ಟ ಹಿಡಿಯುವ ಮಟ್ಟಕ್ಕೆ ಬೆಳೆದಿದ್ದೆ
ಸಂಜೆ ಬಾಡು ತಿಂಬುವ ಮಟ್ಟಕ್ಕೆ
ಬೆಳೆಯದ ನನ್ನಣ್ಣಂದಿರು ವಯಸ್ಸಾದ ಅಕ್ಕ ತಂಗಿಯರು
ಅವನ ಇನ್ನೂ ನಂಬಿಹರು
ಅವನೊ ಬಹು ಎಂದವನು
ಈಗ ಮನು ಅಪ್ಪಿಹನು
ಅಪ್ಪದ ಅಪ್ಪನಿಗುಟ್ಟಿದವರು?
ಯಾರಿಗೆ ಹೇಳುವುದೆಂದು ಎದೆಯೊಡೆದಿಹರು
ಚರ್ಚಿಹರು ಪರ್ಚಿಹರು ನೈಂಟಿಗಳ ಗಳಾಸುಗಳ ಎತ್ತಿ ಎತ್ತಿ ಚಿಂದಿಗೈಯಿಹರು
ಮೂರಾದಿ ಮಣ್ಣೆರಚಿ ಬೋರಿಹರು
ದ್ರೋಅ?
ಛೇ! ಛೇ! ಛೇ!
***
Comments
Post a Comment