Skip to main content

ಸೈದ್ಧಾಂತಿಕವಾಗಿ ಭ್ರಷ್ಟ(corrupt) ರಾಗುವುದು ಶೋಷಿತ ಸಮುದಾಯಗಳ ಜನರ ಚಾಳಿಯಾಗಬಾರದು




-ರಘೋತ್ತಮ ಹೊ.ಬ

ಇಡೀ ದೇಶದಲ್ಲಿ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವುಗಳನ್ನು ಹೊಂದಿರುವ ಎರಡು ವರ್ಗಗಳನ್ನು ರಾಜಕೀಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಆ ಎರಡು ಜನಾಂಗಗಳೆಂದರೆ,

1. ಬ್ರಾಹ್ಮಣರು

2. ದಲಿತರು ಅಥವಾ ಶೋಷಿತ ಸಮುದಾಯಗಳು.

ಬ್ರಾಹ್ಮಣ ಸಮುದಾಯ ವೇದ ಉಪನಿಷತ್ತುಗಳನ್ನು ತನ್ನ ಸೈದ್ಧಾಂತಿಕ ಹಿನ್ನೆಲೆಯಾಗಿ ಅನುಸರಿಸಿದರೆ ದಲಿತ ಸಮುದಾಯ ಅದು ಬಾಬಾಸಾಹೇಬ್ ಅಂಬೇಡ್ಕರ್ ರ ಸಿದ್ಧಾಂತವನ್ನು ಅನುಸರಿಸುತ್ತದೆ. ಹಾಗಿದ್ದರೆ ಇವೆರಡರ ನಡುವೆ ಬರುವ ಇತರ ಜನಾಂಗ- ಜಾತಿಗಳ ಕತೆ? ಖಂಡಿತ, ಅಂತಹ ಸ್ಪಷ್ಟತೆ ಇರದವರು ಎಂದೇ ತಜ್ಞರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಸ್ಪಷ್ಟ ದಲಿತ ಸಮುದಾಯದ ಸೈದ್ಧಾಂತಿಕತೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಬರಹ ಮತ್ತು ಚಿಂತನೆಗಳಾಗಿವೆ. ಅಂದಹಾಗೆ ಇದನ್ನು ಕರ್ನಾಟಕದ ಮಟ್ಟಿಗೆ ನೋಡುವುದಲ್ಲ, ಅಖಿಲ ಭಾರತ ಮಟ್ಟಕ್ಕೆ ನೋಡಿ ಹೇಳುವುದಾಗಿದೆ. ಯಾಕೆಂದರೆ ಕಾಶ್ಮೀರಕ್ಕೆ ಹೋಗಿ ನೀವು ಜೈಭೀಮ್ ಎನ್ನಬಹುದು, ಪಶ್ಚಿಮ ಬಂಗಾಳಕ್ಕೆ ಹೋಗಿ ಜೈಭೀಮ್ ಎನ್ನಬಹುದು, ಗುಜರಾತ್ ಗೆ ಹೋಗಿ ನೀಲಿ ಬಾವುಟ ಹಿಡಿದು ಜೈಭೀಮ್ ಎನ್ನಬಹುದು, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ,  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸ... ಹೀಗೆ ನೀವು ಯಾವುದೇ ಮೂಲೆಗೆ ಹೋಗಿಯೂ ಜೈಭೀಮ್ ಮತ್ತು ನೀಲಿ ಬಾವುಟ ಹಿಡಿದರೆ ಎಲ್ಲಾ ಕಡೆಯೂ ಒಂದೇ ಮಾತು ಅದು ಅಂಬೇಡ್ಕರ್ ಹೆಸರು ಮತ್ತು ಚಿಂತನೆಯಾಗಿದೆ. ಆದ್ದರಿಂದ ದಲಿತರು ಅದು ರಾಷ್ಟ್ರವ್ಯಾಪಿ ಜನಾಂಗವಾಗಿದೆ ಮತ್ತು ಅಂಬೇಡ್ಕರ್ ವಾದ ಅದು ರಾಷ್ಟ್ರವ್ಯಾಪಿ ಚಿಂತನೆಯಾಗಿದೆ. ಮೊದಲೆ ಹೇಳಿದ ಹಾಗೆ ಬ್ರಾಹ್ಮಣ ಸಮುದಾಯ ಕೂಡ ಹಾಗೆ ರಾಷ್ಟ್ರವ್ಯಾಪಿ ಚಿಂತನೆ ಹೊಂದಿರುವ ಸಮುದಾಯವಾಗಿದೆ. 

ದಲಿತ ಸಮುದಾಯ ಹೀಗೆ ಅದು ತನ್ನ ರಾಷ್ಟ್ರವ್ಯಾಪಿ ಲಕ್ಷಣ ಪಡೆಯಲು ಮುಖ್ಯ ಕಾರಣ ಅದು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ಚಳುವಳಿ ಕಟ್ಟಿದ, ಬೆಳೆಸಿದ ಮಾದರಿ. ಈ ಮಾದರಿಯನ್ನು ನಾಶ ಪಡಿಸಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಚಿಂತನೆ ಕಲ್ಲು ಮಣ್ಣು ರೀತಿಯಲ್ಲಿ ಹಾರ್ಡ್ ವೇರ್ ರೂಪದಲ್ಲಿ ಇದ್ದರೆ ಅದನ್ನು ನಾಶ ಪಡಿಸಬಹುದು ಆದರೆ ಆಲೋಚನೆ ಚಿಂತನೆಯ ರೂಪ ಪಡೆದಾಗ ಓದದಿದ್ದರೂ ಬರೆಯದಿದ್ದರೂ ಸ್ಮೃತಿ ( ನೆನಪು) ರೂಪದಲ್ಲಿ ಅದು ಬೆಳೆಯುತ್ತ ಹೋಗುತ್ತದೆ. ಮಾನವ ಜನಾಂಗದಲ್ಲಿ ಉಳಿಯುತ್ತ ಹೋಗುತ್ತದೆ. ಮತ್ತೂ ಒಂದು ಅಂಶವೆಂದರೆ ಯಾವುದನ್ನು ನಾಶ ಪಡಿಸಲು ಯಾರಾದರೂ ಯತ್ನಿಸಿದರೆ ಅಲ್ಲಿ ಉಂಟಾಗುವ ಸಂಘರ್ಷದ ಫಲವಾಗಿ ಅದು ಮತ್ತೂ ಬೆಳೆಯುತ್ತದೆ!

ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ಅದು ಶರವೇಗದಲ್ಲಿ ಪ್ರಪಂಚದಾದ್ಯಂತ ಬೆಳೆಯುತ್ತ ಹೋಗುತ್ತಿದೆ. ಉದಾಹರಣೆಗೆ; ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ಯೂನಿವರ್ಸಿಟಿ ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸಿದೆ. ಪರಿಣಾಮ ಇಂದು ಅಲ್ಲಿಯ ಕಪ್ಪು ಜನರು ಮತ್ತು ಸಮಾನತೆ ಬಯಸುವ ಎಲ್ಲಾ ಜನರು ಓದಲು ಆರಂಭಿಸಿದ್ದಾರೆ. ಆಫ್ರಿಕಾ, ಕೆನಡಾ, ಆಸ್ಟ್ರೇಲಿಯಾ... ಹೀಗೆ ಪ್ರಪಂಚದಾದ್ಯಂತ ಅದು ಓದಿಸಲ್ಪಡುತ್ತ ಓದಿಸಿಕೊಳ್ಳುತ್ತ ಚಿಂತನೆಯ ರೂಪದಲ್ಲಿ ಬೆಳೆಯುತ್ತ ಸಾಗಿದೆ. ಹಿಂದೆ ಬೌದ್ಧ ಧರ್ಮ ಹೂ ಯೆನ್ ತ್ಸಾಂಗ್ ಮತ್ತು ಫಾಹಿಯಾನ್ ರ ಮೂಲಕ ಹೇಗೆ ಪೌರ್ವಾತ್ಯ ದೇಶಗಳನ್ನು ತಲುಪಿತೊ ಹಾಗೆ ಇಂದು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಡಿಜಿಟಲ್ ರೂಪದ ಕಾರಣ ಪಾಶ್ಚಿಮಾತ್ಯ ದೇಶಗಳನ್ನು ತಲುಪುತ್ತಿದೆ. ಇದಕ್ಕೆ ಕಾರಣವೂ ಸ್ಪಷ್ಟ, ಅಂದರೆ ಜಾತಿ ವ್ಯವಸ್ಥೆ ಮತ್ತು ಭೇದಭಾವಗಳು ಎಲ್ಲೆಲ್ಲಿ ಕಾಲಿಡುತ್ತಿದೆಯೋ ಅಲ್ಲೆಲ್ಲ ಜನರು ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಆಂಟಿಡೋಟ್ ಆಗಿ ಚಿಕಿತ್ಸಾ ರೂಪವಾಗಿ ಬಳಸಲಾರಂಭಿಸಿದ್ದಾರೆ. ಆದ್ದರಿಂದ ಅಂಬೇಡ್ಕರ್ ವಾದ ಅದು ಮುಗಿದು ಹೋಗುತ್ತದೆ ಮುಗಿಸಿ ಬಿಡುತ್ತೇವೆ ಎಂದು ಯಾರೂ ಕನಸಲ್ಲು ಸಹ ಚಿಂತನೆ ಮಾಡಬಾರದು. ರಾಷ್ಟ್ರವ್ಯಾಪಿ ಇರಲಿ ವಿಶ್ವವ್ಯಾಪಿ ಬೆಳೆಯುವ ಸ್ಕೋಪ್ ಅದು ಇಂದು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳು ಇಂಗ್ಲಿಷ್ ಭಾಷೆಯಲ್ಲಿ ಇರುವುದು ಅದು ಪ್ರಪಂಚದ ಮೂಲೆ ಮೂಲೆ ತಲುಪಲು ಇಂದು ಪ್ರಮುಖ ಕಾರಣ ಎಂಬುದು ಸ್ಪಷ್ಟ.

ಆದ್ದರಿಂದ ದಲಿತರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಅದು pan India ಅಥವಾ ಅಖಂಡ ಭಾರತ ವ್ಯಾಪಕವಾಗಿದೆ‌. ದುರಂತ ಎಂದರೆ ಈ ಮಹತ್ವ ತಿಳಿಯದ ಕೆಲವು ಸ್ಥಳೀಯ ಶೋಷಿತ ಸಮುದಾಯಗಳ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಚಿಂತನೆಗಳನ್ನು ವಿರೂಪಗೊಳಿಸಿ just for his personal gain ಮಾತನಾಡಿದ್ದಾರೆ. ಅಂತಹವರ ಕ್ಷುಲ್ಲಕತನ ಎಂದರೆ ತನಗೆ ಮಾತ್ರ ಎಲ್ಲಾ ಗೊತ್ತು ಇತರರಿಗೆ ಗೊತ್ತಿಲ್ಲ ಎಂಬುದಾಗಿದೆ ಮತ್ತು ಇದಕ್ಕಾಗಿ ಅವರು ಬಳಸುತ್ತಿರುವುದು ಸಭಿಕರನ್ನು ಮೋಹಕವಾಗಿ ಸೆಳೆಯುವಂತೆ ಭಾಷಣ ಮಾಡುವ ತಮ್ಮ ಶೈಲಿಯನ್ನಾಗಿದೆ. ಪ್ರಶ್ನೆ ಎಂದರೆ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚಿ ಮಾತಾಡಿದರೆ ಜನರಿಗೆ ವಿಶೇಷವಾಗಿ ದಲಿತ ಸಮುದಾಯದಲ್ಲಿಯೇ ಇರುವ ಬುದ್ಧಿಜೀವಿಗಳಿಗೆ ಅರ್ಥ ಆಗುವುದಿಲ್ಲ ಎಂದೇ? ಅಥವಾ ಕೆಲವು ಪುಂಗ್ ಲೀ ಗಳು ಮಾಡುವ ರೀತಿ ಮೋಹಕ ಭಾಷಣಗಳ ಮೂಲಕ ದುರ್ಬಲಗೊಳಿಸುವಷ್ಟು ಅಂಬೇಡ್ಕರ್ ರ ಬರಹಗಳು ದುರ್ಬಲವೇ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮೂಲ ಬಾಬಾಸಾಹೇಬ್ ಅಂಬೇಡ್ಕರ್ ರ ಒರಿಜಿನಲ್ ಚಿಂತನೆಗಳು ಇಂದು ಜನರ ಕೈ ತುದಿಯಲ್ಲೇ ಡಿಜಿಟಲ್ ರೂಪದಲ್ಲಿ ಇವೆ. ಆದ್ದರಿಂದ ಅಂತಹ ಸ್ವಾರ್ಥದ ದಲಿತ ಸಮುದಾಯದ ಮೋಹಕ ಭಾಷಣದ ರಾಜಕಾರಣಿಗಳು ನೀವು ಯಾರನ್ನಾದರೂ ತಿರುಚಿಕೊಳ್ಳಿ, ತಿರುಚಿ ಎಲ್ಲಾದರೂ ಪೇಚಾಡಿ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಮಾತ್ರ ಎತ್ತಬೇಡಿ. ಜನಸಾಮಾನ್ಯರು ಅಷ್ಟೇ ಅಂತಹವರ ವಿರುದ್ಧ ಬೀದಿಗಿಳಿಯಿರಿ, ಪ್ರಶ್ನೆ ಮಾಡಿ, ಎಚ್ಚರಿಕೆ ನೀಡಿ. ಜೈಭೀಮ್.



Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...