Skip to main content

Posts

Showing posts from June, 2021

ಬೆಳಕಾಗು

  - ರಘೋತ್ತಮ ಹೊ.ಬ ನಿನ್ನ ತುಳಿಯಲು ಅಲ್ಲಿ ಬಲೆ ನೇಯ್ದಿಹರು ಬಯಲಲ್ಲಿ ಸಂಜೆ ಅಲ್ಲಿಗೆ ಜೀತ ಮಾಡಲು ಹೋಗುವೆಯಾ ನಿನ್ನ ಊರಾಚೆ ಇಡಲು ಕತೆ ಕಟ್ಟುತಿಹರು ಅಲ್ಲಿ ಅರಿಯದೆ ನೀ ಕುಡಿದು ಕಣ್ಮುಚ್ಚುವೆಯಾ ನಿನ್ನ ಅಕ್ಕ ತಂಗಿಯರ  ದೇವದಾಸಿಯರ ಮಾಡಲು ಅಲ್ಲಿ ಮಂತ್ರ ತಂತ್ರ ಕುತಂತ್ರ  ಮಾಡುತಿಹರು ಅಲ್ಲಿ ಅರಿಯದೆ ನೀ ಮತ್ತೆ ದಾಸನಾಗುವೆಯಾ ಆಕೆಯ ದಾಸಿಯಾಗಿಸುವೆಯಾ ನಿನ್ನ ಏಳಿಗೆ ತುಳಿಯಲು ತರ್ಕ ಕುತರ್ಕ ವಿತಂಡವಾದಗೈಯುತಿಹರು ಅಲ್ಲಿ ತಿಳಿಯದೆ ಮತ್ತೆ ನೀ ತುಳಿತಕ್ಕೊಳಗಾಗುವೆಯಾ ಸಂಜೆಗಿಟ್ಟಿಲ್ಲದಿದ್ದರು ಕಂದ ತಂದೆ ಅಂಬೇಡ್ಕರರ ಓದು ತಂಗಾಳಿಯ ತುಂಬಿಕೊ ಆತ್ಮಗೌರವವ ಹೃದಯಕ್ಕೆ ಸೆಳೆದುಕೊ ಮತ್ತೆ ಮತ್ತೆ ನೆನೆದುಕೊ ಆ ನಿನ್ನ ತಾತ ಮುತ್ತಾತರ ಗುಲಾಮಗಿರಿಯ ನೆನಹ ಬಡವನಾದರೇನು ಮತ್ತೆ ಮುಟ್ಟದಿರು ಶೌಚಾಲಯದ ಪೊರಕೆಯ ಹೊಟ್ಟೆಗಿಲ್ಲದಿದ್ದರೂ ಮುಟ್ಟದಿರವರ ಚಪ್ಪಲಿಯ ಹೊಲಿಯಲು ಅಕ್ಷರದ ಹೂವಾಗು ಬುದ್ಧನಾಗು ಸ್ವಾಭಿಮಾನದ ಜ್ಯೋತಿಯಾಗು ನಿನಗೆ ನೀನೆ ಬೆಳಕಾಗು ನಿನಗೆ ನೀನೆ ಬೆಳಕಾಗು

Caste and Business

  - Raghothama Hoba Usually daily I go to market to purchase many things as I needed. I go to hotel, mall, vegetable vendors,... So on. Everywhere I find people but I doesn't find my own people viz, my downtrodden people. If I find them it may be near toilets ready to clean it, on the roads holding brooms to the collect wastages. Sometimes I find them as labourers to load lorries with rice, grocery bags etc,. Definitely I never found them as owners. Alas, what's happening around us! Where's our men in shop as owners chamber collecting huge amount of money? May be it a dream up to now. Question is can we still keep it as a dream for the coming generations too? Can't we not make it a reality at least for future! Basically we thought just about manusmriti's gradation list, that also first position that of brahmans. But never thought about vaishyas where they are fixed with money with profession of trading! Arey, what's the problem with us? Because its business that...

ಜಾತಿಗಳು ಸ್ವಾಯತ್ತ ಸಂಸ್ಥೆಗಳು

  "ಜಾ ತಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳ ನಡುವೆ ತಮ್ಮ ಜಾತಿಗಳ ಒಳಕ್ಕೆ ಇತರೆ ಹೊಸ ಸದಸ್ಯರನ್ನು ಸೇರಿಸಿಕೊಂಡು, ಅಂತಹವರನ್ನು ತಮ್ಮ ಸಾಮಾಜಿಕ ಜೀವನದಲ್ಲಿ ಒಳಗೊಳ್ಳುವಂತೆ ಒತ್ತಾಯಪಡಿಸುವ ಯಾವುದೇ ಪ್ರಾಧಿಕಾರ ಇಲ್ಲ". -ಡಾ.ಬಿ.ಆರ್.ಅಂಬೇಡ್ಕರ್ (Annihilation of caste, Pp.54, ಕನ್ನಡಕ್ಕೆ: ರಘೋತ್ತಮ ಹೊ.ಬ)

ರಾಜಕೀಯ ಮೀಸಲಾತಿಯನ್ನು ಕೂಡ ಶಾಶ್ವತಗೊಳಿಸ ಬಯಸಿದ್ದ ಡಾ.ಅಂಬೇಡ್ಕರ್ ರವರು

-ರಘೋತ್ತಮ ಹೊ.ಬ ಇಂದು ವೆಬಿನಾರ್ ಒಂದರಲ್ಲಿ ಮಾತನಾಡುತ್ತಾ ಗೆಳೆಯರೊಬ್ಬರು "ಡಾ.ಅಂಬೇಡ್ಕರ್ ರವರಿಗೆ ರಾಜಕೀಯ ಮೀಸಲಾತಿ ಇಷ್ಟ ಇರಲಿಲ್ಲ, ಆ ಕಾರಣ ಅವರು ಅದನ್ನು ಹತ್ತು ವರ್ಷಗಳಿಗೆ ಸೀಮಿತಗೊಳಿಸಿದ್ದರು" ಎಂದರು! ಎಂತಹ ದುರಂತ ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ತಪ್ಪು ಮಾಹಿತಿ!  ಏಕೆಂದರೆ ವಾಸ್ತವ ಏನೆಂದರೆ ಡಾ.ಅಂಬೇಡ್ಕರರು ಶೋಷಿತ ಸಮುದಾಯಗಳಿಗೆ (SC/ ST) ಗಳಿಗೆ ರಾಜಕೀಯ ಮೀಸಲಾತಿಯನ್ನು ಕೂಡ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ರೀತಿ ಶಾಶ್ವತಗೊಳಿಸಬೇಕು ಎಂದು ಬಯಸಿದ್ದರು. ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿಯೂ ಕೂಡ ಅವರು ಇಂಗಿತ ವ್ಯಕ್ತಪಡಿಸಿದ್ದರು. (ಈ ಬಗ್ಗೆ ತಮ್ಮ ನೋವನ್ನು ಕೂಡ ಅವರು ತಮ್ಮ ಆಪ್ತರಾದ ಡಾ.ಶಂಕರಾನಂದ ಶಾಸ್ತ್ರೀ ಮತ್ತು ನಾನಕ್ ಚಂದ್ ರತ್ತು ರವರುಗಳಲ್ಲಿ ವ್ಯಕ್ತಪಡಿಸಿದ್ದರು) ಆದರೆ ಅಂದಿನ ಸಂವಿಧಾನ ರಚನಾ ಸಭೆಯ ಇತರ ಸದಸ್ಯರು ಮತ್ತು ಇತರೆ ಪಕ್ಷಗಳ ಸದಸ್ಯರು ಅದಕ್ಕೆ ಆಕ್ಷೇಪ ಎತ್ತಿದ್ದರಿಂದ ಅಂಬೇಡ್ಕರರ ಆ ಆಶಯ ಅದು ಸಾಕಾರವಾಗಲಿಲ್ಲ. ಪರಿಣಾಮ ಡಾ.ಅಂಬೇಡ್ಕರರು "ತದನಂತರದ ವಿಸ್ತಾರದ ಅವಕಾಶದೊಡನೆ ಕೇವಲ 10 ವರ್ಷಗಳವರೆಗೆ" ಎಂದು ಸೇರಿಸುವಂತಾಯಿತು. ದುರಂತ ಎಂದರ ಸಂವಿಧಾನ ಸಭೆಯ ಚರ್ಚೆಗಳನ್ನು (constitutional assembly debates) ಓದದ ಅನೇಕರು, ವಿಶೇಷವಾಗಿ ದಲಿತರು ರಾಜಕೀಯ ಮೀಸಲಾತಿಯನ್ನು ಅಂಬೇಡ್ಕರರೇ ಹತ್ತು ವರ್ಷಗಳಿಗೆ ಸೀಮಿತಗೊಳಿಸಿದರು, ಅವರಿಗೆ ರಾಜಕೀಯ ಮೀಸಲಾತಿ ಇಷ್ಟ ಇರಲ...

ಸ್ವಾಭಿಮಾನ ಅಥವಾ ಆತ್ಮಗೌರವದ ಚಳುವಳಿ

  - ರಘೋತ್ತಮ ಹೊ.ಬ "ಸ್ವಾಭಿಮಾನ ಅಥವಾ ಆತ್ಮಗೌರವದ ಚಳುವಳಿ ಕಳೆದುಕೊಳ್ಳುವುದು ಏನೂ ಇಲ್ಲ, ಎಲ್ಲವೂ ಪಡೆದುಕೊಳ್ಳುವುದೇ ಆಗಿದೆ" -ಡಾ.ಬಿ.ಆರ್.ಅಂಬೇಡ್ಕರ್* 1937 ಡಿಸೆಂಬರ್ 31ರ ಮಧ್ಯಾಹ್ನ ಡಾ.ಅಂಬೇಡ್ಕರ್ ರವರು ಮಹಾರಾಷ್ಟ್ರದಲ್ಲಿ ಪಂಡರಾಪುರಕ್ಕೆ ಬರುತ್ತಾರೆ ಮತ್ತು ಆ ದಿನ ಅಲ್ಲಿ ಅವರು ಅಂದು ಸಂಘಟಿಸಲ್ಪಟ್ಟಿದ್ದ ಸಮ್ಮೇಳನದಲ್ಲಿ ಮಾತನಾಡುತ್ತಾರೆ. ಆ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿರುತ್ತಾರೆ. ಆ ಸಂದರ್ಭದಲ್ಲಿ ಡಾ.ಅಂಬೇಡ್ಕರರು ಹೇಳುವುದು " ನಮ್ಮ ನಡುವೆ ಮೂರು ಸಮಸ್ಯೆಗಳಿವೆ. ಒಂದನೆಯದು, ಹಿಂದೂ ಸಮಾಜದಲ್ಲಿ ನಮಗೆ ಸಮಾನ ಸ್ಥಾನಮಾನ ನೀಡಲಾಗುತ್ತದೆಯೇ?. ಎರಡನೆಯದು, ರಾಷ್ಟ್ರೀಯ ಸಂಪತ್ತಿನಲ್ಲಿ ನಮಗೆ ಸಮಾನ ಪಾಲು ದೊರೆಯುತ್ತದೆಯೇ?. ಮೂರನೆಯದು, ಆತ್ಮಗೌರವ (self respect) ಮತ್ತು ನಮ್ಮ ಏಳಿಗೆಗೆ ನಾವೇ ದುಡಿಯಬೇಕಿರುವ (self help) ಈ ಚಳುವಳಿಯ ಭವಿಷ್ಯ ಏನಾಗಬಹುದು. ಮೊದಲನೆಯದರ ಬಗ್ಗೆ ಹೇಳುವುದಾದರೆ, ಜಾತಿ ವ್ಯವಸ್ಥೆ ಇರುವ ತನಕ ಹಿಂದೂ ಸಮಾಜದಲ್ಲಿ ನಮಗೆ ಸಮಾನ ಸ್ಥಾನಮಾನ ಸಿಗುವುದು ಸಾಧ್ಯವಿಲ್ಲ. ಎರಡನೆಯದರ ಬಗ್ಗೆ, ಬಂಡವಾಳಶಾಹಿ ಆಧಾರಿತ ಪಕ್ಷಗಳು ಆಳುತ್ತಿರುವ ತನಕ ರಾಷ್ಟ್ರೀಯ ಸಂಪತ್ತಿನಲ್ಲಿ ನಮಗೆ ಪಾಲು ಸಿಗುವುದು ಸಾಧ್ಯವಿಲ್ಲ. ಮೂರನೆಯದು, ಪ್ರಸ್ತುತದ ಸರ್ಕಾರಗಳು ಇರುವ ತನಕ ನಮಗೆ ಆರ್ಥಿಕ ಸ್ವಾತಂತ್ರ್ಯ ಸಿಗುವುದು ಸಾಧ್ಯವಿಲ್ಲ. ಆದ್ದರಿಂದ ಬಂಡವಾಳ ಶಾಹ...

ಛತ್ರಪತಿ ಶಾಹುಮಹಾರಾಜ್: ಸಾಮಾಜಿಕ ಪರಿವರ್ತನೆಯ ಮೇರುಸ್ತಂಭ

- ರಘೋತ್ತಮ ಹೊ.ಬ 1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನುಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು... ಹಾಗೆಯೇ ಈ ಆದೇಶದ ಉದ್ದೇಶಕ್ಕಾಗಿ ಬ್ರಾಹ್ಮಣ, ಪ್ರಭು, ಶೇಣಾವಿ, ಪಾರ್ಸಿ ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಜಾತಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ಅರ್ಥೈಸಲಾಗುವುದು”. ಹೌದು, ಹಿಂದುಳಿದ ವರ್ಗಗಳಿಗೆ(ಓ.ಬಿ.ಸಿ) ಈ ದೇಶದಲ್ಲಿ ಪ್ರಪ್ರಥಮವಾಗಿ ಶೇ.50ರಷ್ಟು ಮೀಸÀಲಾತಿ ನೀಡಿ ಆಜ್ಞೆ ಹೊರಡಿಸಿ ‘ಮೀಸಲಾತಿಯ ಜನಕ (Father of Reservation) ಖ್ಯಾತಿಗೊಂಡ ಅರಸ ಬೇರಾರು ಅಲ್ಲ, ಕೊಲ್ಲಾಪುರದ ಛತ್ರಿಪತಿ ಶಾಹು ಮಹಾರಾಜರು. ಸಹಜವಾಗಿ ಹೇಳುವುದಾದರೆ “ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ” (ಆಧಾರ: Chatrapati Shahu the Pillar Of Social Democracy : Published by Education department, Government of Maharashtra , p.146).    ಶಾಹು ಮಹಾರಾಜರು ಹುಟ್ಟಿದ್ದು 1874 ಜೂನ್ 26 ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‍ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ...

ಪುರುಷ ಸೂಕ್ತ ಕುರಿತು ಡಾ.ಅಂಬೇಡ್ಕರ್

  "ಪುರುಷಸೂಕ್ತವು ಸೂಚಿಸಲ್ಪಟ್ಟಿದ್ದ ಸಮಾಜದ ಅಂದಿನ ಸಂವಿಧಾನವು ಚಾತುರ್ವರ್ಣ ಎಂದು ಕರೆಯಲ್ಪಡುತ್ತಿತ್ತು. ಹಾಗೆ (ಚಾತುರ್ವರ್ಣ) ಅದು ದೇವರಿಂದ ನೀಡಲ್ಪಟ್ಟಿದ್ದು ಎಂದು ಭಾವಸಲ್ಪಟ್ಟಿದ್ದರಿಂದ ಸ್ವಾಭಾವಿಕವಾಗಿ ಅದು ಇಂಡೋ ಆರ್ಯನ್ ಸಮಾಜದ ಆದರ್ಶವಾಯಿತು. ಈ ಹಿನ್ನೆಲೆಯಲ್ಲಿ ಇಂಡೋ-ಆರ್ಯನ್ ಸಮುದಾಯದ ಜೀವನವನ್ನು ಪ್ರಾಥಮಿಕ ಮತ್ತು ದ್ರವೀಕೃತ ಸ್ಥಿತಿಯಲ್ಲಿ ಎರಕಹೊಯ್ಯಲ್ಪಟ್ಟ ಅಚ್ಚು ಎಂದರೆ ಅದು ಚಾತುರ್ವರ್ಣದ ಇಂತಹ ಆದರ್ಶವಾಗಿತ್ತು‌. ಅಲ್ಲದೆ ಚಾತುರ್ವರ್ಣದ ಆ ಅಚ್ಚೇ ಇಂಡೋ ಆರ್ಯನ್ ಸಮುದಾಯಕ್ಕೆ ಇಂತಹ ವಿಚಿತ್ರ ಆಕಾರ ಮತ್ತು ರಚನೆಯನ್ನು ಕೊಟ್ಟಿದ್ದುದಾಗಿತ್ತು". "ಇಂಡೋ-ಆರ್ಯನ್ ಸಮುದಾಯದ ಇಂತಹ ಚಾತುರ್ವರ್ಣದ ಆದರ್ಶದ ಅಚ್ಚಿಗೆ ಸಿಕ್ಕ ಗೌರವ ಅದು ಪ್ರಶ್ನಾತೀತವಾಗಿದುದಷ್ಟೇ ಅಲ್ಲ, ವಿವರಣಾತೀತವೂ ಆಗಿತ್ತು. ಇಂಡೋ-ಆರ್ಯನ್ ಸಮುದಾಯದ ಮೇಲೆ ಚಾತುರ್ವರ್ಣದ ಅದರ ಪ್ರಭಾವ ಅಚ್ಚಳಿಯದುದಾಗಿತ್ತು, ಅಗಾಧವಾದುದ್ದಾಗಿತ್ತು. ಅಂದಹಾಗೆ ಪುರುಷಸೂಕ್ತವು ಸೂಚಿಸಿದ್ದ ಇಂತಹ ಸಾಮಾಜಿಕ ಶ್ರೇಣೀಕರಣವು ಬುದ್ಧನನ್ನು ಹೊರತುಪಡಿಸಿ ಬೇರಾರಿಂದಲೂ ಪ್ರಶ್ನಿಸಲ್ಪಟ್ಟಿಲ್ಲ. ಬುದ್ಧನಿಗೂ ಅದನ್ನು ಅಲುಗಾಡಿಸಲಾಗಲಿಲ್ಲ‌. ಇದಕ್ಕೆ ಸರಳ ಕಾರಣ, ಬೌದ್ಧ ಧರ್ಮದ ಅವಧಿಯ ಕಾಲದಲ್ಲಿ ಮತ್ತು ಬೌದ್ಧಧರ್ಮದ ಅವನತಿಯ ನಂತರದ ಕಾಲದಲ್ಲಿ ಪುರುಷಸೂಕ್ತದ ಅಂಶಗಳನ್ನು  ಸಮರ್ಥಿಸುತ್ತಾ ಅದನ್ನು ಪ್ರಚಾರ ಮಾಡುವುದನ್ನೇ, ವಿಸ್ತೃತ ರೂಪಕ್ಕೆ ತರುವುದನ್ನೇ ತಮ್ಮ ...

ಕ್ಷೌರ ಮಾಡಿಸಿಕೊಳ್ಳುವಾಗ ಅಸ್ಪೃಶ್ಯತಾಚರಣೆ

-ರಘೋತ್ತಮ ಹೊ.ಬ ಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕರ ಮೇಲೆ ಹಲ್ಲೆ: ಮನನೊಂದ ಯುವಕರಿಂದ ಆತ್ಮಹತ್ಯೆ ಯತ್ನ ಎಂಬ ಸುದ್ದಿ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಇದಕ್ಕೆ ಪರಿಹಾರ?  ಪರಿಹಾರವನ್ನು ವಯಕ್ತಿಕ ನೆನಪುಗಳ ಮೂಲಕವೇ ನಾನು ಬಿಚ್ಚಿಡಲು ಯತ್ನಿಸುವುದಾದರೆ, ಬಾಲ್ಯದಲ್ಲಿ ನಮ್ಮ ಊರಿನಲ್ಲಿ ವಿಶೇಷವಾಗಿ ನಮ್ಮ ಬೀದಿಯಲ್ಲಿ ನಮಗೆ ಕೂದಲು ಕತ್ತರಿಸುವ ಸಮಸ್ಯೆಯೇ ಇರಲಿಲ್ಲ! ಅಸ್ಪೃಶ್ಯತೆ ಅದು ಇದು ಏನೂ ಇರಲಿಲ್ಲ! ಕಾರಣ ನಮ್ಮದೆ ಸಮುದಾಯದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಅಜ್ಜ ರತ್ನಯ್ಯ ಕೂದಲು ಕತ್ತರಿಸುವ, ಕ್ಷೌರ ಮಾಡುವ ವೃತ್ತಿ ಮಾಡುತ್ತಿದ್ದರು. ಸುಮಾರು ಅರೆ ಬರೆ ಶೈಲಿಯಲ್ಲಿ ಕೂದಲು ಕತ್ತರಿಸುತ್ತಿದ್ದ ಅವರ ಬಳಿ ಬಾಲಕರಾದ ನಮಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳುವುದು ಕೆಲವೊಮ್ಮೆ ಹಿಂಸೆ ಎನಿಸುತ್ತಿತ್ತು. ಆದರೆ ನಮ್ಮ ಅಪ್ಪನಿಗೆ, ಬೀದಿಯ ಇತರರಿಗೆ ಅದೇ ಒಂದು ರೀತಿಯ ವರದಾನವಾಗಿತ್ತು. ಪರಿಣಾಮ ಕ್ಷೌರ ವೃತ್ತಿಗೆ ಸಂಬಂಧಿಸಿದ ಅಸ್ಪೃಶ್ಯತೆ ಒಂದು ದಿನವೂ ನಮಗೆ ಕಾಡಲಿಲ್ಲ!  ಇವರಲ್ಲದೆ ಮತ್ತೊಬ್ಬ ಅಣ್ಣ ನಮ್ಮ ಪಕ್ಕದ ಊರಿಂದ ಬರುತ್ತಿದ್ದ ನಮ್ಮದೆ ಸಮುದಾಯದ ಸಿದ್ದಣ್ಣ ಹೇರ್ ಕಟಿಂಗ್ ಉಪಕರಣಗಳ ಸಮೇತ ವಾರಕ್ಕೊಮ್ಮೆ ಹಾಜರಾಗುತ್ತಿದ್ದ. ಸಿದ್ದಣ್ಣ ಯಾರದ್ದಾದರೂ ಜಗುಲಿ ಮೇಲೆ ಕುಳಿತುಕೊಂಡರೆಂದರೆ ಸಾಕು ಅದೇ ಆವತ್ತಿನ ಕಟಿಂಗ್ ಶಾಪ್ ಆಗುತ್ತಿತ್ತು. ಅಲ್ಲದೇ ಸಿದ್ದಣ್ಣ ತಮ್ಮ ಸ್ವಂತ ಊರಿನಲ್ಲೂ ತನ್ನದೆ ಸ್ವಂತ ಒಂದು ಹೇರ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...

ಬುದ್ಧಂ ಧಮ್ಮಂ, ಸಂಘಂ...

- ರಘೋತ್ತಮ ಹೊ.ಬ ಬೌದ್ಧ ಧರ್ಮದಲ್ಲಿ ಬಹುಮುಖ್ಯವಾದದ್ದು ತಿಸರಣ. ಅಂದರೆ ಮೂರು ಅಂಶಗಳಿಗೆ ಶರಣು ಹೋಗುವುದು, ನಮಿಸುವುದು, ಗೌರವ ಕೊಡುವುದು ಎಂದರ್ಥ. ಮೂರು ಅಂಶ ಇಲ್ಲಿ ಮೂರು ಹಂತವಾಗಿಯೂ ಕಂಡುಬರುತ್ತದೆ. ಅಂದರೆ ಮೊದಲ ಹಂತ ಬುದ್ಧ , ಎರಡನೆಯ ಹಂತ ಆತ ಬೋಧಿಸಿದ ಧಮ್ಮ, ಮೂರನೆಯ ಹಂತ ಆತನ‌ ಭಿಕ್ಕು ಪರಿವಾರ ಅಥವಾ ಭಿಕ್ಕು ಸಂಘ.  ಇದರರ್ಥ ಬುದ್ಧನ ಅನುಯಾಯಿಗಳು ಮೊದಲು ಬುದ್ಧ ನಿಗೆ ಶರಣು ಹೋಗಬೇಕು ನಂತರ ಆತನ ಧಮ್ಮಕ್ಕೆ ನಂತರ ಸಂಘಕ್ಕೆ. ಈ ಹಿನ್ನೆಲೆಯಲ್ಲಿ ಮೊದಲು ಬುದ್ಧ ಎಂದರೆ ಬೌದ್ಧ ಧರ್ಮಕ್ಕೆ ಬರುವ ಪ್ರತಿಯೊಬ್ಬರೂ ಬುದ್ಧನ ಜೀವನ ಆತನ ತ್ಯಾಗ, ಬದುಕು, ಆತ ಭೇಟಿ ಮಾಡಿದ ಜನರು, ಆತ ಭೇಟಿ ಮಾಡಿದ ಸ್ಥಳಗಳು, ಆತನಿಗೆ ನೆರವಾದ ರಾಜರುಗಳು... ಹೀಗೆ, ಒಟ್ಟಾರೆ ಆತನ ಸಂಪೂರ್ಣ ಜೀವನ. In other sense ಬುದ್ಧನನ್ನು ಆರಾಧಿಸುವುದನ್ನು ಕಲಿಯಬೇಕು. ಭಕ್ತಿ ಎಂಬುದನ್ನು ಈ ಸಂದರ್ಭದಲ್ಲಿ ಬಳಸುವುದನ್ನು ಕೆಲವರು ಆಕ್ಷೇಪಿಸಬಹುದು. ಆದರೆ ಬುದ್ಧನ ಕುರಿತು ಭಕ್ತಿ ಇರಲೇಬೇಕು. ಆ ಭಕ್ತಿಯ ಮತ್ತೊಂದು ಹೆಸರು ಬುದ್ಧನ ಕುರಿತ ಅಚಲ ನಂಬಿಕೆ. ಹೀಗೆ ಬುದ್ಧನನ್ನು ನಂಬಲು , ಗೌರವಿಸಲು ಪ್ರಾರಂಭಿಸಿದ ಬುದ್ಧ ಧರ್ಮದ ಹೊರಗೆ ಇರುವ ವ್ಯಕ್ತಿ ಖಂಡಿತ ಆತನ ಅನುಯಾಯಿ ಆಗುತ್ತಾನೆ.  ಹೀಗೆ ಅನುಯಾಯಿ ಆದ ಆತನಿಗೆ ಪರಿಚಯವಾಗಬೇಕಾದ ಎರಡನೇ ಹಂತ ಧಮ್ಮ ಅಂದರೆ ಬುದ್ಧನ‌ ಬೋಧನೆ. ನಿಜ, ಬುದ್ಧನ ಬದುಕು ತಿಳಿಯುತ್ತಲೇ ಆತನಿಗೆ ಧಮ್ಮ‌ಅರಿವಿಗೆ ಬಂದಿರುತ್ತದೆ. ...

ಬೌದ್ಧ ಧರ್ಮದೆಡೆ ನಮ್ಮ ಉದಾಸೀನತೆ?

  ನಾವು ಬೌದ್ಧ ಧರ್ಮವನ್ನು ಇನ್ನಷ್ಟು ವರ್ಷ ಹೀಗೆ neglect ಮಾಡ್ತ ಹೋದರೆ ಬಹುಶಃ ಕರ್ನಾಟಕದಲ್ಲಿ ಅದು ಇತಿಹಾಸದ ತಳ ಸೇರಲಿದೆ. ಯಾವ ಪರಮಪೂಜ್ಯ ಬಾಬಾಸಾಹೇಬರು ತಮ್ಮ ಜೀವನದ ಅಂತಿಮ ಘಳಿಗೆಯಲ್ಲಿ ಬೌದ್ಧ ಧರ್ಮಕ್ಕೆ ಮಿಡಿದರೊ ನನ್ನ ಜನ ಈ ಧರ್ಮವನ್ನು ಪುನರುಜ್ಜೀವನಗೊಳಿಸುವರು ಎಂದು ತುಡಿದರೊ ಅದನ್ನು ಶೋಷಿತ ಸಮುದಾಯ ಅರಿಯುತ್ತಿಲ್ಲ. ಬಾಬಾಸಾಹೇಬರು ಕೊಟ್ಟ ಹಕ್ಕು ಬೇಕು ಆದರೆ ಅವರು ನೀಡಿದ ಕರ್ತವ್ಯದ ಕಡೆ ಗಮನವಿಲ್ಲ.      ಇಷ್ಟೊತ್ತಿಗೆ ಮನಸ್ಸು ಮಾಡಿದ್ದರೆ ಶೋಷಿತರಿಗೆ ಬಾಬಾಸಾಹೇಬರು ನಿಧನರಾದ ಈ 62 ವರ್ಷಗಳಲ್ಲಿ ಧರ್ಮ ಪುನರುಜ್ಜೀವನಗೊಳಿಸಲು ಕೇವಲ 10 ವರ್ಷ ಸಾಕಿತ್ತು. ಆದರೆ ಬಾಬಾಸಾಹೇಬರ ಈ ಆಶಯ ಕೇವಲ ಅವರ "ಬುದ್ಧ ಅಂಡ್ ಹಿಸ್ ಧಮ್ಮ" ಕೃತಿಯಲ್ಲಿ ಅಡಗಿ ಕುಳಿತಿದೆ ಅಷ್ಟೇ.ಈ ನಿಟ್ಟಿನಲ್ಲಿ ಬುಡಕಟ್ಟು ಹಬ್ಬ ಆಚರಣೆಗಳನ್ನು ಈಗಲೂ ಅದ್ದೂರಿಯಾಗಿ ಆಚರಿಸುವವರು ಒಂದೆಡೆಯಾದರೆ ಅದಕ್ಕೆ ವೈದಿಕ touch ಕೊಟ್ಟು ಸ್ವಲ್ಪ standard ಆಗಿರುವವರು ಇನ್ನೊಂದೆಡೆ. ಮತ್ತೊಂದಷ್ಟು ಜನ ಬಾಬಾಸಾಹೇಬರ ಚಿಂತನೆ ತಿಳಿದೂ ತಿಳಿದೂ ಧರ್ಮದ ಬಗ್ಗೆ ಕಡೇಪಕ್ಷ ಕೇವಲ 10% ಗಮನಹರಿಸದ ಜಾಣಗುರುಡರು.  ಈ ದಿಸೆಯಲ್ಲಿ ಇಂತಹ ಧಾರ್ಮಿಕ ಉದಾಸೀನತೆ, ಬೌದ್ಧ ಧರ್ಮ ಕಟ್ಟುವಲ್ಲಿ ನಮ್ಮ ಜಾಣ ಕುರುಡು ಬುದ್ಧಿ ಎಷ್ಟು ದಿನ ಎಂಬುದು?     ಮೊನ್ನೆ ಮಗಳ ಹುಟ್ಟು ಹಬ್ಬದ ಪ್ರಯುಕ್ತ ವಿಹಾರವೊಂದಕ್ಕೆ ಹೋಗಿದ್ದೆ. ಸರ್ಕಾರದ ಮತ್ತು ದಾನ...

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಡಾ.ಬಿ.ಆರ್.ಅಂಬೇಡ್ಕರ್ ರವರ ಬರಹಗಳು

"ಹಿಂದೂಗಳ ಮೇಲೆ ಜಾತಿ ಬೀರಿರುವ ಪರಿಣಾಮವು ನಿಜಕ್ಕೂ ಶೋಚನೀಯವಾದುದು. ಹೇಗೆಂದರೆ ಜಾತಿಯು ಜನಸಾಮಾನ್ಯರ ಸಾರ್ವಜನಿಕ ಅಂತಃಕರಣವನ್ನು ಕೊಂದಿದೆ‌. ಜಾತಿಯು ಸಾರ್ವಜನಿಕರಲ್ಲಿ ಇರಬಹುದಾದ ಔದಾರ್ಯ ಗುಣವನ್ನು ನಾಶಪಡಿಸಿದೆ. ಜಾತಿಯು ಜನಸಾಮಾನ್ಯರಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸಿಕೊಳ್ಳುವಿಕೆಯನ್ನು ಅಸಾಧ್ಯಗೊಳಿಸಿದೆ. ಈ ನಿಟ್ಟಿನಲ್ಲಿ ಹಿಂದೂವೊಬ್ಬನ ಸಾರ್ವಜನಿಕತೆ ಎಂದರೆ ಅದು ಆತನ ಜಾತಿಯಾಗಿದೆ. ಆತನ ಜವಾಬ್ದಾರಿ ಕೂಡ ಆತನ ಜಾತಿಯ ಬಗೆಗಷ್ಟೇ ಆಗಿರುತ್ತದೆ. ಆತನ ವಿಧೇಯತೆ ಕೂಡ ಆತನ ಜಾತಿಗಷ್ಟೆ ಸೀಮಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ (ಆ ವ್ಯವಸ್ಥೆಯಲ್ಲಿ) ಯಾರು ಪಾತ್ರರೋ ಅಂತಹವರಿಗೆ ಅನುಕಂಪ ಸಿಗುವುದಿಲ್ಲ. ಅರ್ಹತೆ ಇರುವವರಿಗೆ ಪ್ರಶಂಸೆ ಸಿಗುವುದಿಲ್ಲ. ಅಗತ್ಯ ಇರುವವರಿಗೆ ದಾನ ಸಿಗುವುದಿಲ್ಲ. ನೋವಿನಲ್ಲಿರುವವರ ಕೂಗಿಗೆ ಸ್ಪಂದನೆ ಸಿಗುವುದಿಲ್ಲ." - ಡಾ.ಬಿ.ಆರ್.ಅಂಬೇಡ್ಕರ್ ( Vol.1. Pp 56)  ಸಂಗ್ರಹ ಮತ್ತು ಅನುವಾದ: ರಘೋತ್ತಮ ಹೊ.ಬ