1949 ಸೆಪ್ಟೆಂಬರ್ 17ರಂದು ಸಂವಿಧಾನ ಸಭೆಯಲ್ಲಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಅನುಚ್ಛೇದ 368 ರ ಕುರಿತು ಚರ್ಚೆ ಆರಂಭವಾದಾಗ ಗೌರವಾನ್ವಿತ ಸದಸ್ಯರಾದ ನಜೀರುದ್ದೀನ್ ಅಹ್ಮದ್ ಅಭಿಪ್ರಾಯ ಮಂಡಿಸಲು ತಮಗೆ ಅವಕಾಶ ಕೊಡಬೇಕು ಎಂದು ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರರನ್ನು ಕೇಳುತ್ತಾರೆ. ಅಂದಹಾಗೆ ನಜೀರುದ್ದೀನ್ ಅಹ್ಮದ್ ರ ಒಂದು ಅಭ್ಯಾಸವೆಂದರೆ ಹೀಗೆ ಮಾತನಾಡಲು ಅವಕಾಶ ಪಡೆಯುತ್ತಿದ್ದ ಅವರು ಅವಕಾಶ ಸಿಕ್ಕಾಕ್ಷಣ ಗಂಟೆಗಟ್ಟಲೆ ಮಾತನಾಡುತ್ತಿದ್ದರು! ಇದನ್ನು ಗಮನಿಸಿದ್ದ ಡಾ.ಅಂಬೇಡ್ಕರ್ ರವರು "ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಸ್ನೇಹಿತರು ಭರವಸೆಕೊಟ್ಟರೆ ನಾನು ಅವಕಾಶ ಕೊಡುವೆ. ಆದರೆ ಸ್ನೇಹಿತ ನಜೀರುದ್ದೀನ್ ಅಹ್ಮದ್ Will have his cake and eat it too" ಎನ್ನುತ್ತಾರೆ! ಅಂದರೆ ಸಮಯ ಜಾಸ್ತಿ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯರು ಅವಕಾಶ ಪಡೆಯುತ್ತಾರೆ ಹಾಗೆ ಅವಕಾಶ ಸಿಕ್ಕಾಗ ಸಮಯವನ್ನು ನುಂಗಿಯೂ ಬಿಡುತ್ತಾರೆ ಎಂದು ಹೇಳಲು ಡಾ.ಅಂಬೇಡ್ಕರರು "ತಿನ್ನುವುದಿಲ್ಲ ಎಂದು ಕೇಕ್ ಅನ್ನು ಪಡೆಯುತ್ತಾರೆ, ಕೊಟ್ಟ ನಂತರ ಅದನ್ನು ತಿಂದೂ ಬಿಡುತ್ತಾರೆ" ಎಂದು ಹಾಸ್ಯ ಚಟಾಕಿ ಹಾರಿಸುತ್ತಾರೆ!
-ರಘೋತ್ತಮ ಹೊ.ಬ
(ಆಧಾರ: Dr.Ambedkar the principal architect of Constitution of India, Published by Govt of India, Pp.1052)
Comments
Post a Comment