ಆ ಜಾತಿಯಲ್ಲಿ ಹುಟ್ಟಿದ್ದೇನೆ ಅಂದ ಮಾತ್ರಕ್ಕೆ ನಾನು ಇತರ ಜಾತಿಗಳವರನ್ನು ಯಾವ್ಯಾವುದೋ ಕಾರಣಕ್ಕೋ ಸದಾ ದ್ವೇಷಿಸುತ್ತಲೇ ಇರಬೇಕು, ದ್ವೇಷಿಸಲೇ ಬೇಕು ಎಂಬಂತೆ ಅಲ್ಲ. ಕ್ಷಮಿಸಿ, ಯಾರಾದರೂ ಹಾಗೆ ತಿಳಿದುಕೊಂಡಿದ್ದರೆ ಅದು ತಪ್ಪು. ನಾನು ಯಾವುದೇ ಜಾತಿಯನ್ನು , ಜಾತಿಯವರನ್ನು ದ್ವೇಷಿಸುವುದಿಲ್ಲ. ಹಾಗಂತ ನನ್ನ ಸ್ವಂತ ಜಾತಿಯ ಬಗ್ಗೆ ನನಗೆ ಅಭಿಮಾನವಿಲ್ಲವೆ? ಇದೇ. ಆದರೆ ಅದರರ್ಥ; ಬೇರೆ ಜಾತಿಯನ್ನು ದ್ವೇಷಿಸು ಎನ್ನುವುದಲ್ಲ, ದ್ವೇಷಿಸುತ್ತ ಕೂರುವುದು ಸಾಧ್ಯವಿಲ್ಲ, ದ್ವೇಷಿಸುವುದೂ ಇಲ್ಲ.
ಜಾತಿ ಮನೋಭಾವ ಅದು ಎರಡಲಗಿನ ಕತ್ತಿ. ಹೇಗೆ ಒಂದು ಜಾತಿಯವರನ್ನು ಅವರು ಹಾಗೆ ಮಾಡಿದರು ಹೀಗೆ ಮಾಡಿದರು ಎಂದು ಹೇಳುತ್ತದೆಯೋ at the same time ಮತ್ತೊಂದು ಜಾತಿಯವರಾಗಿ ನಾವು ಕೂಡ ಅಂತಹದ್ದೆ ತಪ್ಪುಗಳನ್ನು ಮಾಡುತ್ತಿರುತ್ತೇವೆ.
ಮತ್ತೊಂದು ವಿಚಾರ ನಾವು ಈ ಪ್ರಪಂಚದಲ್ಲಿ ಸಾಮಾನ್ಯ ಮನುಷ್ಯರಾಗಿ ಎಷ್ಟು ವರ್ಷ ಬದುಕುತ್ತೇವೆ? ಎಂಬುದು. ಒಂದು ಸಾವಿರ ವರ್ಷ? ಹಾಗಿದ್ದರೆ ಜಾತಿ ಹೊತ್ತುಕೊಂಡು ಮೆರೆಯೋಣ. ಆದರೆ ವಾಸ್ತವ we are impermanent. ಪ್ರಶ್ನೆ ಎಂದರೆ ಜಾತಿ ಯಾಕೆ permanent ಆಗಿರಬೇಕು?
ವಯಕ್ತಿಕವಾಗಿ ನಾನು ಮತ್ತೊಂದು ಜಾತಿಯನ್ನು, ಅವರು ಯಾವುದೇ ಜಾತಿ ಇರಲಿ ದ್ವೇಷಿಸುವುದಿಲ್ಲ, ದ್ವೇಷಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಸಾಧ್ಯವೂ ಇಲ್ಲ. ಮತ್ತೊಂದು ಜಾತಿಯನ್ನು, ಆ ಜಾತಿಯ ಜನರನ್ನು ದ್ವೇಷಿಸುವ ಮನೋಭಾವ ಅದೊಂದು ಮಾನಸಿಕ ರೋಗ. ಆ ರೋಗ ಬೆಳೆಸಿಕೊಂಡಷ್ಟು ಕೂಡ ನಮ್ಮ ಆರೋಗ್ಯ ಹದಗೆಡುತ್ತದೆ. ಯಾಕೆಂದರೆ ಮತ್ತೊಂದು ಜಾತಿಯನ್ನು ನೀನು ಯಾವ ಮಟ್ಟಕ್ಕೆ ದ್ವೇಷಿಸಬಹುದು? Ultimate ಆಗಿ ಆ ಮತ್ತೊಂದು ಜಾತಿಯ ಎಲ್ಲರನ್ನೂ ಮುಗಿಸುವ ಮಟ್ಟಕ್ಕೆ? ಕಾನೂನು ಅದಕ್ಕೆ ಅವಕಾಶ ಕೊಡುತ್ತದೆಯೇ? ಅಂತಹ ಜಾತಿ ರೋಗಿಯನ್ನು ಅದು ಒದ್ದು ಒಳ ಹಾಕುತ್ತದೆಯಲ್ಲವೇ?
ಆದ್ದರಿಂದ "ಜಾತಿ ದ್ವೇಷ" ಅದೊಂದು ಮಾನಸಿಕ ರೋಗ (ಮುಂದಿನ ದಿನಗಳಲ್ಲಿ ಅಂತಹ ಜಾತಿ ರೋಗಕ್ಕೆ treatment ನೀಡುವ ಕ್ಲಿನಿಕ್ ಗಳು ಬರಬಹುದು). ಅದರಿಂದ ಗುಣಹೊಂದುವ ದಾರಿ ನಾವು ನಿರಂತರ ಕಂಡುಕೊಳ್ಳಬೇಕು, ಅಂತಹ ಪ್ರಯತ್ನದಲ್ಲಿ ಮನುಷ್ಯರಾಗಿ ನಾವು ಭಾಗಿಯಾಗಲೇಬೇಕು. ಆಡೋದು ಆಚಾರ, ತಿನ್ನೋದು ಬದನೆಕಾಯಿ ಎಂಬಂತಾಗಬಾರದು. ಆ ಕಾರಣ ನಾನಂತು ವಯಕ್ತಿಕವಾಗಿ ಇನ್ನೊಂದು ಜಾತಿಯ ದ್ವೇಷಿಯಾಗಲಾರೆ. ಅಕಸ್ಮಾತ್ ಅಂತಹ ರೋಗ ನನ್ನಲ್ಲಿ ಇದ್ದರೆ ಅದರಿಂದ ಗುಣಮುಖನಾಗುವ ಪ್ರಯತ್ನದಲ್ಲಿ ಜೀವನದುದ್ದಕ್ಕೂ ನಿರತನಾಗುವೆ.
-ರಘೋತ್ತಮ ಹೊ.ಬ
#ಜಾತಿ #ಅಂಬೇಡ್ಕರ್_ವಾದ
#caste #dalit
Comments
Post a Comment