ಅಂಬೇಡ್ಕರ್ ವಾದಿಗಳ ನಡುವೆ ಬೌದ್ಧ ಧರ್ಮ ಬೆಳೆಯದಿರಲು ಮುಖ್ಯ ಕಾರಣಗಳು
ಬುದ್ಧ
ಡಾ.ಬಿ.ಆರ್.ಅಂಬೇಡ್ಕರ್
1.ಬೌದ್ಧ ಧರ್ಮದ ಬಗ್ಗೆ ಅಂಬೇಡ್ಕರರ ಮೂಲ ಚಿಂತನೆಗಳು ಏನು ಎಂದು ಅವರ ಅನುಯಾಯಿಗಳು ತಿಳಿಯಲು ಹೋಗದಿರುವುದು.
2. ಬಾಬಾಸಾಹೇಬ್ ಅಂಬೇಡ್ಕರರ 22 ಪ್ರತಿಜ್ಞೆ ಗಳ ಮಹತ್ವ ಅರಿಯದಿರುವುದು. ಅದನ್ನು ಅರಿತರೆ ಮಾತ್ರ ಅವರು ತಮ್ಮ ಈಗಿನ ಮೂಢನಂಬಿಕೆ, ಪೂಜೆ ಪುನಸ್ಕಾರಗಳಿಂದ ಹೊರಬರಲು ಸಾಧ್ಯ.
3.ಬಾಬಾಸಾಹೇಬ್ ಅಂಬೇಡ್ಕರರ ಬೌದ್ಧ ಚಿಂತನೆಗಳನ್ನು ಅಲ್ಲಗಳೆಯುವ ಕೆಲವು ಬೌದ್ಧ ಸೊಸೈಟಿಗಳ ಜೊತೆ ಬೌದ್ಧ ಧರ್ಮದ ಕಡೆ ಒಲವಿರುವ ದಲಿತರು ಗುರುತಿಸಿಕೊಂಡಿರುವುದು.
4. ಬಾಬಾಸಾಹೇಬ್ ಅಂಬೇಡ್ಕರರು ಬೌದ್ಧ ಭಿಕ್ಕುಗಳಿಗಿಂತ ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಮಾದರಿಯಲ್ಲಿ ಮದುವೆ ಆಗಿರುವ ಉಪಾಸಕರು ಬೌದ್ಧ ಧರ್ಮ ಹರಡಲು ಮುಂದೆ ಬರಬೇಕು ಎಂದಿರುವುದನ್ನು ಅನುಯಾಯಿಗಳು ಅರಿಯದಿರುವುದು.
5. ಬಾಬಾಸಾಹೇಬ್ ಅಂಬೇಡ್ಕರರ ಬುದ್ಧ ಮತ್ತು ಆತನ ಧಮ್ಮ ಕೃತಿ ಓದದಿರುವುದು, ಗೌರವಿಸದಿರುವುದು.
6. ಬ್ರಾಹ್ಮಣ ಧರ್ಮಕ್ಕೆ ಪ್ರತಿಯಾಗಿ ಕ್ರಾಂತಿಯ ರೂಪದಲ್ಲಿ ಬೌದ್ಧ ಧರ್ಮ ಹುಟ್ಟಿಕೊಂಡಿದೆ ಎಂಬ ಸತ್ಯ ಅರಿಯದಿರುವುದು.
7. ಧರ್ಮದ ಕಾಲಂನಲ್ಲಿ ಬೌದ್ಧ ಮತ್ತು ಜಾತಿಯ ಕಾಲಂನಲ್ಲಿ ಜಾತಿ ಹೆಸರು ಬರೆಸಿದರೆ ಎಸ್ಸಿ ಮೀಸಲಾತಿಗೆ ತೊಂದರೆ ಆಗುವುದಿಲ್ಲ ಎಂಬ ಸತ್ಯ ಅರಿಯದಿರುವುದು.
8. ಬೌದ್ಧ ವಿಹಾರಗಳಿಗೆ ಬಾರದೆ ಅಲಕ್ಷ್ಯ ವಹಿಸುತ್ತಿರುವುದು.
9.ಹಬ್ಬ ಹರಿದಿನಗಳನ್ನು ಇನ್ನೂ ಆಚರಿಸುತ್ತಿರುವುದು.
10. ಪಂಚಶೀಲಗಳನ್ನು ಕಡ್ಡಾಯವಾಗಿ ಆಚರಿಸಬೇಕು ಎಂಬ ಭಯದಲ್ಲಿ ಬದುಕುತ್ತಿರುವುದು ಅಥವಾ ಅದರ ಬಗ್ಗೆ ತಪ್ಪು ತಿಳಿದಿರುವುದು.
-ರಘೋತ್ತಮ ಹೊ.ಬ
- Get link
- X
- Other Apps
- Get link
- X
- Other Apps
Comments
Post a Comment