ಅಸ್ಪೃಶ್ಯ ಆತ ಎಷ್ಟೇ ಬೆಳೆದರೂ... "ಒಂದು ಬಗೆಯ ತಾರತಮ್ಯವಿದೆ ಅದು ತುಂಬ ಸೂಕ್ಷ್ಮ, ಆದಾಗ್ಯೂ ಅದು ವಾಸ್ತವ. ಆ ತಾರತಮ್ಯದಲ್ಲಿ ಪ್ರತಿಭಾವಂತ, ಅರ್ಹ ಅಸ್ಪೃಶ್ಯನ ಸ್ಥಾನ ಮತ್ತು ಘನತೆಯನ್ನು ಕುಗ್ಗಿಸುವ ವ್ಯವಸ್ಥಿತ ತಂತ್ರವಿರುತ್ತದೆ. ಉದಾಹರಣೆಗೆ ಒಬ್ಬ ಹಿಂದೂ ನೇತಾರನನ್ನು ಭಾರತದ ಶ್ರೇಷ್ಠ ನೇತಾರ ಎನ್ನಲಾಗುತ್ತದೆ ಆದರೆ ಯಾರೂ ಕೂಡ ಆತನನ್ನು ಕಾಶ್ಮೀರಿ ಬ್ರಾಹ್ಮಣರ ನೇತಾರ (ಆತ ಅದೇ ಆಗಿದ್ದರೂ ಕೂಡ) ಎನ್ನುವುದಿಲ್ಲ. ಅಕಸ್ಮಾತ್ ಆ ನೇತಾರ ಅಸ್ಪೃಶ್ಯ ಸಮುದಾಯದವನಾಗಿದ್ದರೆ ಆತನನ್ನು ಅಸ್ಪೃಶ್ಯರ ನೇತಾರ ಎಂದಷ್ಟೇ ಹೇಳಲಾಗುತ್ತದೆಯೇ ಹೊರತು ಆತನನ್ನು ಭಾರತದ ನೇತಾರ ಎನ್ನಲಾಗುವುದಿಲ್ಲ! ಹಾಗೆಯೇ ಒಬ್ಬ ಹಿಂದೂ ವೈದ್ಯನನ್ನು ಭಾರತದ ಶ್ರೇಷ್ಠ ವೈದ್ಯ ಎನ್ನಲಾಗುತ್ತದೆ, ಯಾರೂ ಕೂಡ ಆತನನ್ನು ಅಯ್ಯಂಗಾರ್ (ಆತ ಅದೇ ಆಗಿದ್ದರೂ ಕೂಡ) ಎನ್ನುವುದಿಲ್ಲ. ಆದರೆ ಅದೇ ವೈದ್ಯ ಅಕಸ್ಮಾತ್ ಅಸ್ಪೃಶ್ಯ ನಾಗಿದ್ದರೆ ಆತನನ್ನು ಹಾಗೆಯೇ ಕರೆಯಲಾಗುತ್ತದೆ, ಅಸ್ಪೃಶ್ಯ ವೈದ್ಯ ಎಂದೇ ಸಂಬೋಧಿಸಲಾಗುತ್ತದೆ. ಅಂತೆಯೇ ಒಬ್ಬ ಹಿಂದೂ ಹಾಡುಗಾರನನ್ನು ಭಾರತದ ಶ್ರೇಷ್ಠ ಹಾಡುಗಾರ ಎಂದು ವರ್ಣಿಸಲಾಗುತ್ತದೆ ಮತ್ತು ಅದೇ ಹಾಡುಗಾರ ಅಸ್ಪೃಶ್ಯನಾಗಿದ್ದರೆ ಆತನನ್ನು ಅಸ್ಪೃಶ್ಯ ಹಾಡುಗಾರ ಅಷ್ಟೇ ಎಂದು ಕರೆಯಲಾಗುತ್ತದೆ. ಹಾಗೆಯೇ ಒಬ್ಬ ಹಿಂದೂ ಕುಸ್ತಿ ಪಟುವನ್ನೂ ಅಷ್ಟೆ ಭಾರತದ ಶ್ರೇಷ್ಠ ಜಿಮ್ನಾಸ್ಟ್ ಎನ್ನಲಾಗುತ್ತದೆ ಅಕಸ್ಮಾತ್ ಆತ ಅಸ್ಪೃಶ್ಯ ನಾಗಿದ್ದರೆ ಆತನನ್ನು ಅಸ್ಪ...