Skip to main content

Posts

Showing posts from May, 2021

Some tales of untouchability

I am a Dalit. Mathematics teacher by profession. Once I had to visit my students home on the scheme of vidyagama where we have to go houses of every student to observe whether they are studying or not. Like that one day I had to go for a visit to one of my students home. As I had not have the knowledge of address of students home I took along with me a student, incidentally who is also a Dalit.  Like that I went to visit one of my girl students home. As I went there mother of that student came with a smile and wished me. As usual I also wished her and begin to ask "how her daughter is studying at home.. and other things. While I was asking her in a usual curiosity the boy student who had accompanied me came a little forward to listen the conversation. suddenly that mother rushed in hurry that she removed all cloths that were hanging from a wire in front of her house so that the boy might touch. I noticed the incident but pretended as unnoticed as I don't want to make know that...

ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು 1956 ಅಕ್ಟೋಬರ್14 ರಂದು ಬೌದ್ಧರಿಗೆ ಬೋಧಿಸಿದ 22 ಪ್ರತಿಜ್ಞೆಗಳು.

  1)ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.  2)ನಾನು ರಾಮ ಮತ್ತು ಕೃಷ್ಣ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ. 3)ನಾನು ಗಣಪತಿ ಮತ್ತು ಗೌರಿ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ. 4)ನಾನು ದೇವರ ಅವತಾರಗಳ ಸಿದ್ಧಾಂತದಲ್ಲಿ ನಂಬಿಕೆ ಇಡುವುದಿಲ್ಲ.  5)ನಾನು ಬುದ್ಧ ವಿಷ್ಣುವಿನ ಅವತಾರ ಎಂಬುದನ್ನು ನಂಬುವುದಿಲ್ಲ. 6)ನಾನು ಯಾವುದೇ ಶ್ರಾದ್ಧ ಮತ್ತು ಪಿಂಡ ದಾನಗಳನ್ನು ಮಾಡುವುದಿಲ್ಲ. 7)ನಾನು ಬೌದ್ಧ ಧರ್ಮಕ್ಕೆ ಕೇಡು ತರುವ ಯಾವುದೇ ಕ್ರಿಯೆಗಳನ್ನು ಮಾಡುವುದಿಲ್ಲ.  8)ನಾನು ಬ್ರಾಹ್ಮಣರ ಮೂಲಕ ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದಿಲ್ಲ.  9)ನಾನು ಮನುಷ್ಯರೆಲ್ಲ ಸಮಾನರು ಎಂಬುದನ್ನು ನಂಬುತ್ತೇನೆ.  10)ನಾನು ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ. 11)ನಾನು ಬುದ್ಧರ ಅಷ್ಟಾಂಗ ಮಾರ್ಗವನ್ನು ಪಾಲಿಸುತ್ತೇನೆ. 12)ನಾನು ಬುದ್ಧರ ಹತ್ತು ಪಾರಮಿತ ತತ್ವಗಳನ್ನು ಅನುಸರಿಸುತ್ತೇನೆ. 13)ನಾನು ಎಲ್ಲಾ ಜೀವರಾಶಿಗಳ ಮೇಲೆ ಸಹಾನುಭೂತಿ ತೋರುತ್ತೇನೆ ಮತ್ತು ಅವುಗಳ ಮೇಲೆ ದಯೆ ಇಟ್ಟು ಅವುಗಳನ್ನು ಕಾಪಾಡುತ್ತೇನೆ. 14)ನಾನು ಕಳ್ಳತನ ಮಾಡುವುದಿಲ್ಲ. 15)ನಾನು ಸುಳ್ಳು ಹೇಳುವುದಿಲ್ಲ  16)ನಾನು ವ್ಯಭಿಚಾರ ಮಾಡುವುದಿ...

ಡಾ.ಅಂಬೇಡ್ಕರರು ಹಾರಿಸಿದ ಹಾಸ್ಯ ಚಟಾಕಿ

1949 ಸೆಪ್ಟೆಂಬರ್ 17ರಂದು ಸಂವಿಧಾನ ಸಭೆಯಲ್ಲಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಅನುಚ್ಛೇದ 368 ರ ಕುರಿತು ಚರ್ಚೆ ಆರಂಭವಾದಾಗ ಗೌರವಾನ್ವಿತ ಸದಸ್ಯರಾದ ನಜೀರುದ್ದೀನ್ ಅಹ್ಮದ್  ಅಭಿಪ್ರಾಯ ಮಂಡಿಸಲು ತಮಗೆ ಅವಕಾಶ ಕೊಡಬೇಕು ಎಂದು ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರರನ್ನು ಕೇಳುತ್ತಾರೆ. ಅಂದಹಾಗೆ ನಜೀರುದ್ದೀನ್ ಅಹ್ಮದ್ ರ ಒಂದು ಅಭ್ಯಾಸವೆಂದರೆ ಹೀಗೆ ಮಾತನಾಡಲು ಅವಕಾಶ ಪಡೆಯುತ್ತಿದ್ದ ಅವರು ಅವಕಾಶ ಸಿಕ್ಕಾಕ್ಷಣ ಗಂಟೆಗಟ್ಟಲೆ ಮಾತನಾಡುತ್ತಿದ್ದರು! ಇದನ್ನು ಗಮನಿಸಿದ್ದ ಡಾ.ಅಂಬೇಡ್ಕರ್ ರವರು "ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಸ್ನೇಹಿತರು ಭರವಸೆಕೊಟ್ಟರೆ ನಾನು ಅವಕಾಶ ಕೊಡುವೆ. ಆದರೆ ಸ್ನೇಹಿತ ನಜೀರುದ್ದೀನ್ ಅಹ್ಮದ್ Will have his cake and eat it too" ಎನ್ನುತ್ತಾರೆ! ಅಂದರೆ ಸಮಯ ಜಾಸ್ತಿ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯರು ಅವಕಾಶ ಪಡೆಯುತ್ತಾರೆ ಹಾಗೆ ಅವಕಾಶ ಸಿಕ್ಕಾಗ ಸಮಯವನ್ನು ನುಂಗಿಯೂ ಬಿಡುತ್ತಾರೆ ಎಂದು ಹೇಳಲು ಡಾ.ಅಂಬೇಡ್ಕರರು "ತಿನ್ನುವುದಿಲ್ಲ ಎಂದು ಕೇಕ್ ಅನ್ನು ಪಡೆಯುತ್ತಾರೆ, ಕೊಟ್ಟ ನಂತರ ಅದನ್ನು ತಿಂದೂ ಬಿಡುತ್ತಾರೆ" ಎಂದು ಹಾಸ್ಯ ಚಟಾಕಿ ಹಾರಿಸುತ್ತಾರೆ!  - ರಘೋತ್ತಮ ಹೊ.ಬ (ಆಧಾರ: Dr.Ambedkar the principal architect of Constitution of India, Published by Govt of India, Pp.1052)

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಎಸ್ಸಿಗಳು ಅಂದರೆ ಹೇಗಿರ್ತಾರೆ?

ಮೊನ್ನೆ ಒಬ್ಬರು ಏನೋ ಮಾತಾಡ್ತ "ಸಾರ್, ನೀವು ಯಾವ್ ಜಾತಿ" ಅಂದ್ರು. ನಾನು ಎಸ್ಸಿ ಕಣ್ರಿ ಅಂದೆ. "ಸಾರ್, ನೀವು ಎಸ್ಸಿ ಅಂದರೆ ನಂಬೋಕೆ" ಆಗಲ್ಲ ಸಾರ್"! ಅಂದರು. ಪ್ರಶ್ನೆ ಅಂದರೆ ಎಸ್ಸಿಗಳು ಅಂದರೆ ಹೇಗಿರ್ತಾರೆ? ಖಂಡಿತ, ಜಾತಿವಾದಿ ಜನರಲ್ಲಿ ನಾನು ಈ ಪ್ರಶ್ನೆ ಕೇಳುವುದಿಲ್ಲ. ಯಾಕೆಂದರೆ ನಾವು ತಪ್ಪು ಮಾಡುತ್ತಿದ್ದೇವೆ ಎಂದು ಅವರಿಗೆ ಅನಿಸದೆ ಇರುವುದರಿಂದ ನಾವು ಅವರಲ್ಲಿ ಏನೂ ಕೇಳಬಾರದು. ದಮ್ಮಯ್ಯ,  ಗುಡ್ಡಯ್ಯ ಖಂಡಿತ ಅದರ ಅಗತ್ಯವಿಲ್ಲ.   ಆದರೆ ಅದೇ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದಾದರೆ, ಎಸ್ಸಿಗಳು ಹೇಗಿರ್ತಾರೆ? ಅವರಿಗೂ ಒಂದು ಮೂಗು, ಎರಡು ಕಣ್ಣು, ಒಂದು ಬಾಯಿ, ಮೂವತ್ತೆರಡು ಹಲ್ಲುಗಳು, ಎರಡು ಕಿವಿ... ಏನಾದರೂ extra? ಇಲ್ಲ. ಎಲ್ಲರಿಗೂ ಏನು ಇದೆಯೋ ಅದು ಇವರಿಗೂ ಇದೆ‌. ಆದರೆ ಅವರಲ್ಲಿ ಇಲ್ಲದ ಇವರಲ್ಲಿ ಇರುವ ಒಂದು ವಿಚಾರ ಇವರಲ್ಲಿ "ಅವರು ಇವರು, ಇವರನ್ನು ಆಚೆ ನಿಲ್ಲಿಸಬೇಕು ಇವರನ್ನು ಒಳಕೆ ಬಿಡಬೇಕು" ಎಂಬ ಭೇದದ ಮನಸ್ಸು ಇಲ್ಲ. ಅವರಲ್ಲಿ ಇದೆ. ಅವರಲ್ಲಿ ಇರುವ ಆ ಮನಸ್ಥಿತಿಗೆ ಯಾರು ಕಾರಣ? ಅವರೇ.  ಅಂದಹಾಗೆ ಎಸ್ಸಿಗಳು ಶುಚಿಯಾಗಿರಲ್ಲ ಅದು ಇದು ಅಂತಾನ? ಖಂಡಿತ ಇಲ್ಲ. ಶುಚಿತ್ವಕ್ಕು ಅವರು ಇವರು ಅನ್ನೋದಕ್ಕು ಸಂಬಂಧವೇ ಇರೊಲ್ಲ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅವರದೆ ಜನ ಗಲೀಜಾಗಿದ್ದರು ಅವರು ಅವರ ಜೊತೆಯೇ ಸೇರುತ್ತಾರೆ, ಇವರ ಜೊತೆ ಸೇರುವುದಿಲ್ಲ. ಕಾರಣ? ಮತ...

ಜಾತಿ ದ್ವೇಷ ಮತ್ತು ನಾನು

ನಾನು ವಯಕ್ತಿಕವಾಗಿ ಜಾತಿವಾದಿಯಲ್ಲ. ಅಂಬೇಡ್ಕರ್ ವಾದ ಅಂತಹ ಜಾತಿವಾದಿ ಮನಸ್ಥಿತಿ ಕಲಿಸುವುದಿಲ್ಲ. ನಿಜ, ನಾನೊಂದು ಜಾತಿಯಲ್ಲಿ ಹುಟ್ಟಿದ್ದೇನೆ. ಅದು ನಾನು ಪುಣ್ಯ ಮಾಡಿದ್ದೇನೆ ಅಥವಾ ಪಾಪ ಮಾಡಿದ್ದೇನೆ ಎಂಬಂತೆ ಅಲ್ಲ, ಬದಲಿಗೆ ಭಾರತದ ಸಾಮಾಜಿಕ ವ್ಯವಸ್ಥೆ ಹಾಗೆ ಇದೆ. ಆ ಕಾರಣಕ್ಕಾಗಿ ನಿರ್ದಿಷ್ಟ ಜಾತಿಯೊಂದರಲ್ಲಿ ಹುಟ್ಟಿದ್ದೇನೆ ಅಷ್ಟೇ. ಆ ಜಾತಿಯಲ್ಲಿ ಹುಟ್ಟಿದ್ದೇನೆ ಅಂದ ಮಾತ್ರಕ್ಕೆ ನಾನು ಇತರ ಜಾತಿಗಳವರನ್ನು ಯಾವ್ಯಾವುದೋ ಕಾರಣಕ್ಕೋ ಸದಾ ದ್ವೇಷಿಸುತ್ತಲೇ ಇರಬೇಕು, ದ್ವೇಷಿಸಲೇ ಬೇಕು ಎಂಬಂತೆ ಅಲ್ಲ. ಕ್ಷಮಿಸಿ, ಯಾರಾದರೂ ಹಾಗೆ ತಿಳಿದುಕೊಂಡಿದ್ದರೆ ಅದು ತಪ್ಪು. ನಾನು ಯಾವುದೇ ಜಾತಿಯನ್ನು , ಜಾತಿಯವರನ್ನು ದ್ವೇಷಿಸುವುದಿಲ್ಲ. ಹಾಗಂತ ನನ್ನ ಸ್ವಂತ ಜಾತಿಯ ಬಗ್ಗೆ ನನಗೆ ಅಭಿಮಾನವಿಲ್ಲವೆ? ಇದೇ. ಆದರೆ ಅದರರ್ಥ; ಬೇರೆ ಜಾತಿಯನ್ನು ದ್ವೇಷಿಸು ಎನ್ನುವುದಲ್ಲ, ದ್ವೇಷಿಸುತ್ತ ಕೂರುವುದು ಸಾಧ್ಯವಿಲ್ಲ, ದ್ವೇಷಿಸುವುದೂ ಇಲ್ಲ.  ಜಾತಿ ಮನೋಭಾವ ಅದು ಎರಡಲಗಿನ ಕತ್ತಿ. ಹೇಗೆ ಒಂದು ಜಾತಿಯವರನ್ನು ಅವರು ಹಾಗೆ ಮಾಡಿದರು ಹೀಗೆ ಮಾಡಿದರು ಎಂದು ಹೇಳುತ್ತದೆಯೋ at the same time ಮತ್ತೊಂದು ಜಾತಿಯವರಾಗಿ ನಾವು ಕೂಡ ಅಂತಹದ್ದೆ ತಪ್ಪುಗಳನ್ನು ಮಾಡುತ್ತಿರುತ್ತೇವೆ.  ಮತ್ತೊಂದು ವಿಚಾರ ನಾವು ಈ ಪ್ರಪಂಚದಲ್ಲಿ ಸಾಮಾನ್ಯ ಮನುಷ್ಯರಾಗಿ ಎಷ್ಟು ವರ್ಷ ಬದುಕುತ್ತೇವೆ? ಎಂಬುದು. ಒಂದು ಸಾವಿರ ವರ್ಷ? ಹಾಗಿದ್ದರೆ ಜಾತಿ ಹೊತ್ತುಕೊಂಡು ಮೆರೆಯ...

ಬೌದ್ಧ ಧರ್ಮ ಬೆಳೆಯದಿರಲು ಮುಖ್ಯ ಕಾರಣಗಳು

ಅಂಬೇಡ್ಕರ್ ವಾದಿಗಳ ನಡುವೆ ಬೌದ್ಧ ಧರ್ಮ ಬೆಳೆಯದಿರಲು ಮುಖ್ಯ ಕಾರಣಗಳು ಬುದ್ಧ ಡಾ.ಬಿ.ಆರ್.ಅಂಬೇಡ್ಕರ್ 1.ಬೌದ್ಧ ಧರ್ಮದ ಬಗ್ಗೆ ಅಂಬೇಡ್ಕರರ ಮೂಲ ಚಿಂತನೆಗಳು ಏನು ಎಂದು ಅವರ ಅನುಯಾಯಿಗಳು ತಿಳಿಯಲು ಹೋಗದಿರುವುದು. 2. ಬಾಬಾಸಾಹೇಬ್ ಅಂಬೇಡ್ಕರರ 22 ಪ್ರತಿಜ್ಞೆ ಗಳ ಮಹತ್ವ ಅರಿಯದಿರುವುದು. ಅದನ್ನು ಅರಿತರೆ ಮಾತ್ರ ಅವರು ತಮ್ಮ ಈಗಿನ ಮೂಢನಂಬಿಕೆ, ಪೂಜೆ ಪುನಸ್ಕಾರಗಳಿಂದ ಹೊರಬರಲು ಸಾಧ್ಯ. 3.ಬಾಬಾಸಾಹೇಬ್ ಅಂಬೇಡ್ಕರರ ಬೌದ್ಧ ಚಿಂತನೆಗಳನ್ನು ಅಲ್ಲಗಳೆಯುವ ಕೆಲವು ಬೌದ್ಧ ಸೊಸೈಟಿಗಳ ಜೊತೆ ಬೌದ್ಧ ಧರ್ಮದ ಕಡೆ ಒಲವಿರುವ ದಲಿತರು ಗುರುತಿಸಿಕೊಂಡಿರುವುದು. 4. ಬಾಬಾಸಾಹೇಬ್ ಅಂಬೇಡ್ಕರರು ಬೌದ್ಧ ಭಿಕ್ಕುಗಳಿಗಿಂತ ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಮಾದರಿಯಲ್ಲಿ ಮದುವೆ ಆಗಿರುವ ಉಪಾಸಕರು ಬೌದ್ಧ ಧರ್ಮ ಹರಡಲು ಮುಂದೆ ಬರಬೇಕು ಎಂದಿರುವುದನ್ನು ಅನುಯಾಯಿಗಳು ಅರಿಯದಿರುವುದು. 5. ಬಾಬಾಸಾಹೇಬ್ ಅಂಬೇಡ್ಕರರ ಬುದ್ಧ ಮತ್ತು ಆತನ ಧಮ್ಮ ಕೃತಿ ಓದದಿರುವುದು, ಗೌರವಿಸದಿರುವುದು. 6. ಬ್ರಾಹ್ಮಣ ಧರ್ಮಕ್ಕೆ ಪ್ರತಿಯಾಗಿ ಕ್ರಾಂತಿಯ ರೂಪದಲ್ಲಿ ಬೌದ್ಧ ಧರ್ಮ ಹುಟ್ಟಿಕೊಂಡಿದೆ ಎಂಬ ಸತ್ಯ ಅರಿಯದಿರುವುದು. 7. ಧರ್ಮದ ಕಾಲಂನಲ್ಲಿ ಬೌದ್ಧ ಮತ್ತು ಜಾತಿಯ ಕಾಲಂನಲ್ಲಿ ಜಾತಿ ಹೆಸರು ಬರೆಸಿದರೆ ಎಸ್ಸಿ ಮೀಸಲಾತಿಗೆ ತೊಂದರೆ ಆಗುವುದಿಲ್ಲ ಎಂಬ ಸತ್ಯ ಅರಿಯದಿರುವುದು. 8. ಬೌದ್ಧ ವಿಹಾರಗಳಿಗೆ ಬಾರದೆ ಅಲಕ್ಷ್ಯ ವಹಿಸುತ್ತಿರುವುದು. 9.ಹಬ್ಬ ಹರಿದಿನಗಳನ್ನು ಇನ್ನೂ ಆಚರಿಸುತ...

ಬೌದ್ಧ ಧರ್ಮ ಕಟ್ಟಲು ಡಾ.ಅಂಬೇಡ್ಕರರು ರೂಪಿಸಿದ್ದ ನೀಲನಕ್ಷೆ

ಸಾಮಾನ್ಯ ಉಪಾಸಕರು ಧಮ್ಮ ಪ್ರಸಾರ ಮಾಡಬೇಕು

ಡಾ.ಅಂಬೇಡ್ಕರರು ಯಾಕೆ ಭಿಕ್ಕುಗಳಿಗಿಂತ ವಿವಾಹಿತ ಸಾಮಾನ್ಯ ಉಪಾಸಕರೇ ಬೌದ್ಧ ಧರ್ಮ ಬೆಳೆಸಬೇಕು ಎಂದು ಕರೆಕೊಟ್ಟರೆಂದರೆ.. . ಬ್ರಾಹ್ಮಣ ಧರ್ಮ ಮತ್ತು ಬೌದ್ಧ ಧರ್ಮ ಎರಡನ್ನು ಹೋಲಿಸುವ ಬಾಬಾಸಾಹೇಬ್ ಅಂಬೇಡ್ಕರರು ಬ್ರಾಹ್ಮಣ ಧರ್ಮ ಉಳಿದು ಬೌದ್ಧ ಧರ್ಮ ಏಕೆ ನಾಶವಾಯಿತು ಎಂಬುದಕ್ಕೆ ತಮ್ಮ "ಕ್ರಾಂತಿ ಮತ್ತು ಪ್ರತಿಕ್ರಾಂತಿ" ಕೃತಿಯಲ್ಲಿ ವಿವರಣೆ ಕೊಡುತ್ತಾ ಅವರು ಹೇಳುವುದು, ಯಾವುದೇ ಧರ್ಮ ಉಳಿಯಬೇಕಾದರೆ ಮುಖ್ಯ ಕಾರಣ priesthood ಅಥವಾ ಪುರೋಹಿತ ವರ್ಗ. ಈ ನಿಟ್ಟಿನಲ್ಲಿ ಬ್ರಾಹ್ಮಣ ಧರ್ಮದಲ್ಲಿ ಧರ್ಮ ಉಳಿಸುವ ಪುರೋಹಿತ ವೃತ್ತಿಯನ್ನು ಮದುವೆ ಆಗಿರುವ ಸಾಮಾನ್ಯ ವ್ಯಕ್ತಿಗಳೇ ಮಾಡುತ್ತಿದ್ದರು. ಅಕಸ್ಮಾತ್ ಆ ವ್ಯಕ್ತಿ ನಿಧನರಾದರೆ ಬಾಲ್ಯದಲ್ಲಿಯೇ ಉಪನಯನ ಪಡೆದಿರುವ ಆತನ ಮಗ ಆ ವೃತ್ತಿ ಮುಂದುವರಿಸುತ್ತಿದ್ದ. ಆ ಮೂಲಕ ಪುರೋಹಿತ ವರ್ಗ ಉಳಿಯುತ್ತಿತ್ತು, ಆ ಮೂಲಕ ಧರ್ಮದ ಬೆಳವಣಿಗೆ ಮುಂದುವರೆದಿರುತ್ತಿತ್ತು. ಆದರೆ ಬೌದ್ಧ ಧರ್ಮದಲ್ಲಿ ಭಿಕ್ಕು ಮದುವೆಯಾಗದಂತಿರದ ಕಾರಣ ಅವರ ನಿಧನದ ನಂತರ ಧರ್ಮ ಪ್ರಸಾರಕ್ಕೆ ಯಾರೂ ಬರುತ್ತಿರಲಿಲ್ಲ. ಅಲ್ಲೊಂದು chain break ಆಗುತ್ತಿತ್ತು. ಆ ಕಾರಣ ಬೌದ್ಧ ಧರ್ಮದಲ್ಲಿ ಪುರೋಹಿತ ವರ್ಗವಾದ ಭಿಕ್ಕುಗಳ ಸಂಖ್ಯೆ ತಲೆಮಾರಿನಿಂದ ತಲೆಮಾರಿಗೆ ಕಡಿಮೆಯಾಗುತ್ತ ಬಂದಿತು. ಯಾವ ಮಟ್ಟಿಗೆಂದರೆ ಭಿಕ್ಕುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತ ಹೊಸ ಭಿಕ್ಕುಗಳು ಉದಯಿಸದೆ ...

ಬೌದ್ಧಧರ್ಮ ಸ್ವೀಕರಿಸುವ ಸಂದರ್ಭದಲ್ಲಿ ಸಾವರ್ಕರ್ ಗೆ ಡಾ.ಅಂಬೇಡ್ಕರ್ ರವರು ನೀಡುವ ಉತ್ತರ -ರಘೋತ್ತಮ ಹೊ.ಬ

ಬೌದ್ಧ ಧರ್ಮ ಸ್ವೀಕಾರದ ತಯಾರಿಯ ಹಿನ್ನೆಲೆಯಲ್ಲಿ 1956 ಮೇ 24 ರಂದು ಬಾಬಾಸಾಹೇಬರು ಬಾಂಬೆಯ ನಾರೆ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಏರ್ಪಡಿಸುತ್ತಾರೆ. ಸುಮಾರು 75 ಸಾವಿರಕ್ಕೂ ಹೆಚ್ಚು ಜನ ಆ ಸಭೆಯಲ್ಲಿ ಭಾಗವಹಿಸಿರುತ್ತಾರೆ. (ಆಧಾರ: Dr.Ambedkar writings and speeches, Vol.17, Part 3, Pp.517). ಸಭೆಯಲ್ಲಿ ಭಾಷಣ ಮಾಡುತ್ತ ಡಾ.ಅಂಬೇಡ್ಕರ್ ರವರು ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಬೌದ್ಧ ಧರ್ಮದಲ್ಲಿರುವ ಅಹಿಂಸೆಯ ಕುರಿತು ಸರಣಿ ಲೇಖನಗಳನ್ನು ಬರೆದಿದ್ದ ವೀರ್ ಸಾವರ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆಕ್ರೋಶದಿಂದ ಗುಡುಗುವ ಡಾ.ಅಂಬೇಡ್ಕರ್ ರವರು "ಸಾವರ್ಕರ್ ಸ್ಪಷ್ಟವಾಗಿ ಏನು ಹೇಳಲು ಬಯಸಿದ್ದಾರೋ ಎಂದು ತಿಳಿದರೆ ನಾನು ಅವರಿಗೆ ಉತ್ತರಿಸುವೆ. ಅವರ ಬರಹಗಳನ್ನು ನೋಡಿದರೆ ಬೌದ್ಧ ಧರ್ಮ ಮತ್ತು ಹಿಂದೂ ಧರ್ಮಗಳ ನಡುವೆ ಮತ್ತೆ ಭೀಕರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದೆನಿಸುತ್ತದೆ. ಅಂದಹಾಗೆ ಯಾರು ನಮ್ಮನ್ನು ಮೇಲೆತ್ತುತ್ತಾರೋ ಅವರಿಗೆ ಮಾತ್ರ ನಮ್ಮನ್ನು ಟೀಕಿಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾನು ಮತ್ತು ನನ್ನ ಜನರು ಹಳ್ಳಕ್ಕೆ ಬೇಕಾದರೂ ಹೋಗಿ ಬೀಳುತ್ತೇವೆ ಅಂತಹ ಸ್ವಾತಂತ್ರ್ಯ ನಮಗಿದೆ. ಆದ್ದರಿಂದ ನಮ್ಮ ಟೀಕಾಕಾರರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಲಿ" ಎನ್ನುತ್ತಾರೆ. ಮುಂದುವರಿದು ಬಹಳ ಮುಕ್ತವಾಗಿ ಮಾತನಾಡುತ್ತ ಅವರು "ನನ್ನ ಜನಗಳು ಕುರಿಗಳು. ನಾನು ಅವರನ್ನು ಕಾಯುವ ಕುರುಬ. ನನಗಿಂತ ಶ...