Skip to main content

Posts

Showing posts from July, 2021

ದ್ರೋಅ

-ರಘೋತ್ತಮ ಹೊ.ಬ, ಎದೆಯೊಳಗಿನ ಸಂಕ್ಟ ಯಾರಿಗೂ ಹೇಳಬಾರದು ಎಂದಿದ್ದೆ ಹೇಳದಿದ್ದರೆ ಎದೆ ನಾ ಒಡೆಯುವೆ ಎಂದಿತ್ತು ಹೇಳಲೊರಟೆ ಗೌರವ ಕೊಟ್ಟಿದ್ದೆ ಅವನಿಗೆ ಅವ ಬರುವ ಕೆಲಸ ಕೊಡಿಸುವ ಮದುವೆ ಮಾಡಿಸುವ ಮಕ್ಕಳುಟ್ಟಿಸುವ ಅದೃಷ್ಟಕ್ಜೆ ಅಪ್ಪ ಕೆಲಸ ಕೊಡಿಸಿದ್ದ ಮದುವೆ ಮಾಡಿಸಿದ್ದ ನಾ ಮಕ್ಕಳುಟ್ಟಿಸಿದ್ದೆ ಗೌರವ ಕೊಟ್ಟಿದ್ದೆ ಅವನಿಗೆ ಕಣ್ಣೆತ್ತಿ ನೋಡಿರಲಿಲ್ಲ ಕೈ ಭದ್ರ ಕುಲುಕಿರಲಿಲ್ಲ ಬರೆದಿದ್ದೆ ಜಗದಗಲ ಮುಗಿಲಗಲ ಫೇಸ್ ಬುಕ್ಕು ವ್ಯಾಟ್ಸಪ್ಪು ಪತ್ರಿಕೆ ನಾನೇ ತಿದ್ದಿದ್ದೆ ತೀಡಿದ್ದೆ ಮುದ್ರಿಸಿದ್ದೆ ಹಿರಿ ಹಿರಿ ಹಿಗ್ಗಿ ಹಂಚಿದ್ದೆ ಬಂದ ನೋಡಿ ಶೂರ ಜಗದೇಕವೀರ ನಾಡಿನಾದ್ಯಂತ ಸಂಭ್ರಮಿಸಿದ್ದೆ ಎದೆಯುಳಗಿನ ಬುದ್ಧನ ಅವನಿಗೆ ಕೊಟ್ಟಿದ್ದೆ ಮನದೊಳಗಿನ ಅಂಬೇಡ್ಕರನ ಅವನಲ್ಲಿ ಕಂಡಿದ್ದೆ ದುಡ್ಡು ಕಾಸು ಎಲ್ಲದಕ್ಕೂ ಅವನೆ ಬಾಸು ಬೆಳಗು ರಾತ್ರೆ ಅವನದೆ ಜಪ ಸಂಜೆಯಾದರೆ ನೈಂಟಿಯೊಳಗೂ ಅವನದೆ ತಪ ಗ್ಯಾನ ತಪ್ಪಿ ಬಿದ್ದಿದ್ದರೂ ಅವನನೆ ನೆನಪಿದ್ದೆ ಅವನ ನಡೆ ನುಡಿ ಕುಣಿತ ಭರವಸೆಯ ಹಿಮಾಲಯ ಕಂಡಿದ್ದೆ ಕೈಕುಲುಕಲು ಸಾಲು ನಿಂತಿದ್ದೆ ದನಿ ಕೇಳಲು ಕಿವಿ ತೆರೆದು ಕುಂತಿದ್ದೆ ಹತ್ತಿರ ಬಂದರೆ ಪುಳಕ ದೂರ ಹೋದರೆ ನರಕ ಯಾರಿಗೆ ಹೇಳಲಿ ನನ್ನ ತವಕ ಹತ್ತಾರು ಮೈಲಿ ನಡೆದಿದ್ದೆ ಅವನ ಹಿಂದೆ ಬದುಕಿನ ಎಲ್ಲವನು ಕಳೆದು ಮದುವೆ ಮಕ್ಕಳು ವೃತ್ತಿ ಎಲ್ಲವನ್ನು ಬಿಟ್ಟು ನನ್ನಂತವರು ಸಾವಿರಾರು ಒಂದೊಮ್ಮೆ ದಾರಿ ತಪ್ಪಲಾರಂಭಿಸಿದ್ದ ತಿದ್ದಲೋದೆ ಬೈಸಿಕೊಂಡೆ ಟ್ರೋಲ್ ಮಾಡಿಸಿಕೊಂಡೆ ಗ...

ಕತೆ: ಸ್ಟೀಲ್ ತಟ್ಟೆ

  - ರಘೋತ್ತಮ ಹೊ.ಬ "ಏನಪ್ಪೊ, ಚಂದಾಗಿ ದಿಯ?" ರಂಗಣ್ಣ ಹೋಟೆಲ್ ಮಹದೇವಪ್ಪನ್ನ ಕೇಳಿದ. "ಬಾ ರಂಗ ಎಲ್ಲಾ ಕೊರೊನ. ಮಳ ಬ್ಯಳ ಬ್ಯಾರ ಕಿತ್ಕ ಹೊಯ್ತು. ಟೀ ಕೊಡ್ಲ, ಕುಡ್ದಯ" ಮಹಾದೇವಪ್ಪ ಹೇಳಿದ. "ತತ್ತ, ನಮ್ಮಪ್ಪನ್ ಕಾಲ್ದಿಂದ್ಲು ನಿನ್ ತಮೆ ತಾನ ನಾಮು ಟೀ ಕುಡಿಯದು" ರಂಗ ಉತ್ತರಿಸಿದ. "ಬುಡ್ಡ, ಆ ಕಾಲದ್ ಮಾತ್ ಯಾತಕ್ ಆಡಿಯೆ. ಎಲ್ಲಾ ಕೆಟ್ಟೊಯ್ತು. ನೋಡು ಅಮಾ ಸಂತೋಷ, ನನ್ ಎದುರ್ಗೈ ಕಾಲ್ ಮ್ಯಾಲ ಕಾಲಕ್ಕಂದ್ ಕೂತನೈ. ಕ್ಯೋಳಮು ಅಂದ್ರು ಅದ್ಯಾನ ಮಹಾನಾಯಕ..‌ ಅಂಬೇಡ್ಕರ್ರು... ಅಂತಾನೈ. ಅದೇಂಡ ಅಮಾ ಅಷ್ಟ್ ಬುದ್ಧಿವಂತನಾ? ನಮ್ ಬುದ್ಯವ್ರಿಗಿಂತ ಬುದ್ಧಿವಂತನಾ?" "ಅಪ್ಪೋ, ಇದ್ಯಾನ್ ಹಿಂಗ್ ಅಂದೈ. ಮೊಕ್ಕ ಟೀ ಎರಚ್ ಬುಟ್ಟಾನು. ನಮ್ ಕಾಲದಲಿ ಏನೋ ಮೋಡ್ ಗಾಲ. ನೀಮ್ ಯೋಳ್ದಂಗ್ ಕ್ಯೋಳ್ಕಂಡ್ ಬಿದ್ದಿದ್ಮು‌. ಈಗ್ಲು ಅಂಗೆಯಾ? ಅದೇ, ನಿಮ್ಮವರ್ಗಾದ್ರೆ ಸ್ಟೀಲ್ ಲೋಟ. ನಮ್ಮವರ್ಗ ಪೇಪರ್ ಲೋಟ..." ರಂಗ ಹೇಳುತ್ತಿದ್ದ... "ಡೋ, ನಮ್ಮೂರ್ಲಿ ನೀರ್ಗ ಕಷ್ಟ ಅಂತ ನಿಂಗ್ ಗೊತ್ತಿಲ್ವಡ. ಅದುಕ್ಕೆ ಕಡ ಪೇಪರ್ ಲೋಟ, ಪೇಪರ್ ತಟ್ಟೆ. ಒಂದ್ ಕೆಲ್ಸ ಮಾಡ್ತೀನ್ ಬುಡು, ನಾಳಯಿಂದ ಬಾಳ ಯಲ ಕೊಡ್ತೀನಿ...".  "ಒಪ್ಪೊವ್, ನಿಮ್ಮವ್ರ್ ಗ್ಯಾಕ ಸ್ಟೀಲ್ ಲೋಟ ಕೊಟ್ಟಯಿ ಅದ್ಯೋಳು. ನಮ್ ಕರ್ಮ ಪೇಪರ್ ಲೋಟದಲ್ಲೆ ಕುಡಿತಿಮಿ. ಅದ್ಯೋಳು ಅದ್ಯಾಕ ನಿಮ್ಮವ್ರ್ ಗ ಸ್ಟೀಲ್ ಲೋಟ, ಸ್ಟೀಲ್ ತಟ್ಟ...

ಸೈದ್ಧಾಂತಿಕವಾಗಿ ಭ್ರಷ್ಟ(corrupt) ರಾಗುವುದು ಶೋಷಿತ ಸಮುದಾಯಗಳ ಜನರ ಚಾಳಿಯಾಗಬಾರದು

- ರಘೋತ್ತಮ ಹೊ.ಬ ಇಡೀ ದೇಶದಲ್ಲಿ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವುಗಳನ್ನು ಹೊಂದಿರುವ ಎರಡು ವರ್ಗಗಳನ್ನು ರಾಜಕೀಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಆ ಎರಡು ಜನಾಂಗಗಳೆಂದರೆ, 1. ಬ್ರಾಹ್ಮಣರು 2. ದಲಿತರು ಅಥವಾ ಶೋಷಿತ ಸಮುದಾಯಗಳು. ಬ್ರಾಹ್ಮಣ ಸಮುದಾಯ ವೇದ ಉಪನಿಷತ್ತುಗಳನ್ನು ತನ್ನ ಸೈದ್ಧಾಂತಿಕ ಹಿನ್ನೆಲೆಯಾಗಿ ಅನುಸರಿಸಿದರೆ ದಲಿತ ಸಮುದಾಯ ಅದು ಬಾಬಾಸಾಹೇಬ್ ಅಂಬೇಡ್ಕರ್ ರ ಸಿದ್ಧಾಂತವನ್ನು ಅನುಸರಿಸುತ್ತದೆ. ಹಾಗಿದ್ದರೆ ಇವೆರಡರ ನಡುವೆ ಬರುವ ಇತರ ಜನಾಂಗ- ಜಾತಿಗಳ ಕತೆ? ಖಂಡಿತ, ಅಂತಹ ಸ್ಪಷ್ಟತೆ ಇರದವರು ಎಂದೇ ತಜ್ಞರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಸ್ಪಷ್ಟ ದಲಿತ ಸಮುದಾಯದ ಸೈದ್ಧಾಂತಿಕತೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಬರಹ ಮತ್ತು ಚಿಂತನೆಗಳಾಗಿವೆ. ಅಂದಹಾಗೆ ಇದನ್ನು ಕರ್ನಾಟಕದ ಮಟ್ಟಿಗೆ ನೋಡುವುದಲ್ಲ, ಅಖಿಲ ಭಾರತ ಮಟ್ಟಕ್ಕೆ ನೋಡಿ ಹೇಳುವುದಾಗಿದೆ. ಯಾಕೆಂದರೆ ಕಾಶ್ಮೀರಕ್ಕೆ ಹೋಗಿ ನೀವು ಜೈಭೀಮ್ ಎನ್ನಬಹುದು, ಪಶ್ಚಿಮ ಬಂಗಾಳಕ್ಕೆ ಹೋಗಿ ಜೈಭೀಮ್ ಎನ್ನಬಹುದು, ಗುಜರಾತ್ ಗೆ ಹೋಗಿ ನೀಲಿ ಬಾವುಟ ಹಿಡಿದು ಜೈಭೀಮ್ ಎನ್ನಬಹುದು, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ,  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸ... ಹೀಗೆ ನೀವು ಯಾವುದೇ ಮೂಲೆಗೆ ಹೋಗಿಯೂ ಜೈಭೀಮ್ ಮತ್ತು ನೀಲಿ ಬಾವುಟ ಹಿಡಿದರೆ ಎಲ್ಲಾ ಕಡೆಯೂ ಒಂದೇ ಮಾತು ಅದು ಅಂಬೇಡ್ಕರ್ ಹೆಸರು ಮತ್ತು ಚಿಂತನೆಯಾಗಿದ...

ಅಂಬೇಡ್ಕರ್ ಮಕ್ಕಳು ಅದ್ಯಾವ ಮಟ್ಟಿಗೆ ಓದುತ್ತಿದ್ದಾರೆ?

  -ರಘೋತ್ತಮ ಹೊ.ಬ ಮೊನ್ನೆ ಒಂದಷ್ಟು ಯುವಕರು ಸಿಕ್ಕಿದ್ದರು. "ಜೈಭೀಮ್ಸರ್" ಎಂದ ಎಲ್ಲರೂ "ಏನ್ ಮಾಡ್ತಿದೀರಪ್ಪ, ಏನ್ ಓದಿದೀರಪ್ಪ" ಅಂದಾಗ "ಎಸ್ ಎಸ್ ಎಲ್ ಸಿ  ಸರ್" ಅಂದರು. ಮುಂದೆ ಓದ್ನಿಲ್ವ? ಅಂದಾಗ ಒಬ್ಬ ಮಾತ್ರ "ಪಿಯುಸಿ ಸರ್" ಅನ್ನುತ್ತ ಉಳಿದವರೆಲ್ಲ ಮುಖ ಕೆಳಗು ಮಾಡಿದರು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಇಂದಿನ ಶಿಕ್ಷಣದ ಮಟ್ಟವಿದು. ಒಂದೆಡೆ ಶೋಷಕ ವ್ಯವಸ್ಥೆ ಇವರು ಶಿಕ್ಷಣ ಪಡೆಯಬಾರದು ಎಂಬಂತೆ ನೀತಿ ರೂಪಿಸುತ್ತಿದ್ದರೆ ಮತ್ತೊಂದೆಡೆ ಇವರು ತಾವು ಓದಬೇಕು, ಮುಂದೆ ಬರಬೇಕು ಎಂಬ ಕನಿಷ್ಠ ಗ್ಯಾನ ಕೂಡ ಮಾಡದೆ ಹತ್ತನೇ ತರಗತಿ ಹಂತಕ್ಕೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಹಾಗೆ ಅಲ್ಲಿಂದಲೇ ಪ್ರಾರಂಭ ಕುಡಿತ, ಜೂಜು, ರೌಡಿಸಂ ನಂತಹ ಕಾನೂನುಬಾಹಿರ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ನಡವಳಿಕೆಗಳು. ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರು ಎಷ್ಟು ಓದಿದ್ದರು? ಬಹುಶಃ ಇತಿಹಾಸ ಅದನ್ನು ಈಗಲೂ ಒಂದು ದಾಖಲೆ ಎಂದೇ ಪರಿಗಣಿಸಬೇಕಾಗುತ್ತದೆ ಆ ಮಟ್ಟಿಗೆ ಡಾ.ಅಂಬೇಡ್ಕರರು ಓದಿದರು. ದೂರದ ಅಮೆರಿಕದಲ್ಲಿ ಎಂ.ಎ, ಪಿಹೆಚ್ಡಿ, ಲಂಡನ್ ನಲ್ಲಿ ಎಂ.ಎಸ್ಸಿ, ಡಿಎಸ್ಸಿ, ಬಾರ್ - ಅಟ್- ಲಾ, ಜರ್ಮನಿಯಲ್ಲೂ ತುಸು ಸಮಯ ವ್ಯಾಸಂಗ... ಅರೆ, ನಮ್ಮ ಹುಡುಗರು ಎಸ್ ಎಸ್ ಎಲ್ ಸಿ ಗೆ ನಿಂತು ಹೋಗುತ್ತಿದ್ದಾರೆ! ಇದ್ಯಾಕೆ ಅಂತ? ಅದರಲ್ಲೂ ಅವರ ಮೊಬೈಲ್ ಗಳಲ್ಲಿ ಜೈಭೀಮ್, ಬುದ್ಧ, ಅಂಬೇಡ್ಕರರ ವಾಲ್ ಪೇಪರ್ ಗಳು, ಫೇಸ...

ದಲಿತರು ಮತ್ತು ಗುಲಾಮಗಿರಿ

-ರಘೋತ್ತಮ ಹೊ.ಬ ಗುಲಾಮಗಿರಿ ಇದು ಅಮೆರಿಕಾದಲ್ಲಿ ಇರುವ ಪದ್ಧತಿ ಎಂದು ಎಲ್ಲರೂ ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ನಿಜ, ಅಮೆರಿಕದಲ್ಲಿ ಇದೆ. ಆದರೆ ಅಲ್ಲಿ ತುಂಬಾ ಸರಳವಾಗಿ, ಎಲ್ಲರೂ ಗುರುತಿಸುವಂತಹ ಕಪ್ಪು ಬಿಳಿ ಎಂಬಂತೆ ಇದೆ. ಪರಿಹಾರವೂ ಸರಳ. ಆದರೆ ಭಾರತದಲ್ಲಿ ಜಾತಿ ವ್ಯವಸ್ಥೆ ತುಂಬಿರುವ ನಮ್ಮಲ್ಲಿ ಗುಲಾಮಗಿರಿ ಸಂಕೀರ್ಣ ಅವಸ್ಥೆಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಕಪ್ಪು ಜನರಿಗೆ ಭಾರತದ ದಲಿತರು ಹೋಲಿಕೆಯಾಗುತ್ತಾರೆಯೇ? ಉತ್ತರ: ಮೇಲ್ನೋಟದ ಹೋಲಿಕೆಯಾಗಬಹುದು. ಆದರೆ ಆಳದಲ್ಲಿ ಸಮಸ್ಯೆ ತೀವ್ರ ಭಿನ್ನವಾಗಿರುತ್ತದೆ, ಗೊಂದಲ ಗೋಜಲುಗಳಿಂದ ತುಂಬಿರುತ್ತದೆ. ತುಂಬಿರುವಂತೆ ಶೋಷಕ ಶಕ್ತಿಗಳು, ಅವರ ಚಿಂತನೆಗಳು, ಚಟುವಟಿಕೆಗಳು ವ್ಯವಸ್ಥೆಯನ್ನು ಹಾಗೆ ಮಾಡುತ್ತಿರುತ್ತವೆ. ಆ ಶೋಷಕ ವ್ಯವಸ್ಥೆಗೆ ತನ್ನದೆ ದೇಶದ ಪ್ರಜೆಗಳಾದ ದಲಿತರು ಅಕ್ಷರ ಕಲಿಯುವುದು ಬೇಕಿರುವುದಿಲ್ಲ! ವಿಜ್ಞಾನ- ತಂತ್ರಜ್ಞಾನ, ವ್ಯಾಪಾರ - ವ್ಯವಹಾರ ಯಾವುದರಲ್ಲೂ ಮುಂದೆ ಬರುವುದು ಬೇಕಿರುವುದಿಲ್ಲ! ಕಡೆ ಪಕ್ಷ ಶುಚಿಯಾಗಿರುವುದನ್ನು, ಸ್ವಾಭಿಮಾನಿಗಳಾಗಿರುವುದನ್ನು ಬಯಸುವುದಿಲ್ಲ! ಬೇಕಿದ್ದರೆ ತಮ್ಮ ಮನೆಗಳಿಗೆ ವಿದೇಶಿಯರನ್ನು ಆಹ್ವಾನಿಸುತ್ತಾರೆಯೇ ಹೊರತು ಸ್ವದೇಶಿ ದಲಿತರನ್ನು ಆಹ್ವಾನಿಸುವುದಿಲ್ಲ, ಅವರ ಏಳಿಗೆ ಬಯಸುವುದಿಲ್ಲ.  ಅಂತಹ ಸ್ವದೇಶಿ ಜನರ ಏಳಿಗೆ ಬಯಸದ ಶೋಷಕ ವ್ಯವಸ್ಥೆ ಮತ್ತು ಜನ ಇರುವ ಪದ್ಧತಿ ನಮ್ಮದು. ಆದ್ದರಿಂದ ಹೇಳಿದ್ದು ನಮ್ಮಲ್ಲಿ ಇರುವ ಗ...

ಲಾಕ್ ಡೌನ್ ತೆರವುಗೊಳಿಸುತ್ತಿರುವ ಈ ಸಮಯ ದಲಿತರು ಬಿಸಿನೆಸ್ ಗೆ ತೆರೆದುಕೊಳ್ಳಲು ಸುಸಮಯ

  - ರಘೋತ್ತಮ ಹೊ.ಬ ಒಂದು ಓಟದ ಸ್ಪರ್ಧೆ ( ಅದು ಎಂದೂ ಮುಗಿಯದ ಸ್ಪರ್ಧೆ). ಅಂದಹಾಗೆ ಆ ಓಟದಲ್ಲಿ ಈಗಾಗಲೇ ನೂರಾರು ಮೈಲಿ ಓಡಿರುವವರು ಕೆಲವರು ಇನ್ನೂ ಆರಂಭದ ಗೆರೆಯಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ಇರುವವರು. ಆರಂಭದ ಗೆರೆಯಲ್ಲಿ ಇರುವವರು "ನೀವು ಓಡುವಂತಿಲ್ಲ ಎಂಬ ಕಾನೂನು ನಿರ್ಬಂಧದ ಮೂಲಕ ತಡೆಯಲ್ಪಟ್ಟವರು, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಹಳ ಹಿಂದೆಯೇ ಉಳಿಯಲ್ಪಟ್ಟವರು, ಈಗಲೂ ನಿಮ್ಮ ಕೈಯಲ್ಲಿ ಆಗಲ್ಲ ಎಂಬ ಆತ್ಮವಿಶ್ವಾಸ ದ ಕೊರತೆಯಿಂದ ನರಳುತ್ತಿರುವವರು..". ಖಂಡಿತ, ಈ ದೃಷ್ಟಾಂತ ದಲಿತರ ಬಿಸಿನೆಸ್ ಗೆ ಸಂಬಂಧಿಸಿದ್ದು. ಮನುಸ್ಮೃತಿಯಂತಹ ಕಾನೂನುಗಳ ಮೂಲಕ ಇವರಿಗೆ ವ್ಯಾಪಾರ ವ್ಯವಹಾರ ಮಾಡಲು ಶತಶತಮಾನಗಳು ತಡೆಯೊಡ್ಡಲಾಗಿದೆ. ಅಸ್ಪೃಶ್ಯತೆ ಮೂಲಕ " ಅಯ್ಯೋ , ನಮ್ಮ ಕೈಯಲ್ಲಿ ಆಗೋದೆ ಇಲ್ಲ " ಎಂಬ ಮಟ್ಟಕ್ಕೆ ಇವರನ್ನು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತಂದು ನಿಲ್ಲಿಸಲಾಗಿದೆ! ಆದರೆ ಸದ್ಯದ ಅಪರೂಪದ ವಾಸ್ತವ ಎಂದರೆ ಕೊರೊನ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ನೂರಾರು ಮೈಲಿ ಓಡಿ ಮುಂದೆ ಹೋಗಿದ್ದವರು ಮತ್ತೆ ವಾಪಸ್ ಆರಂಭಿಕ ಗೆರೆಗೆ ಬಂದಿದ್ದಾರೆ. ದಲಿತರ ಜೊತೆಗೆ ನಿಂತಿದ್ದಾರೆ ಅಥವಾ ದಲಿತರು ಅವರ ಜೊತೆ ಇಂದು ಸ್ಪರ್ಧೆ ಮಾಡಲು ಸುಸಮಯ. ಯಥಾಪ್ರಕಾರ ದಲಿತರಿಗೆ ಬಂಡವಾಳ, ಆತ್ಮವಿಶ್ವಾಸ, ನಮ್ಮ ಕೈಯಲ್ಲಿ ಆಗುತ್ತಾ, ನಾವು ಮಾಡಬಹುದಾ ಎಂಬ ಆಲೋಚನೆಗಳು ತೊಡಕಾಗಿ ಕಾಣುತ್ತವೆ. ಆದರೆ ಸ್ಪರ್ಧೆಗೆ ಇಳಿದ ಮೇಲೆ ಭಾ...

ವೈದ್ಯರಿಗೆ ನಮನಗಳು

  -ರಘೋತ್ತಮ ಹೊ.ಬ ವೈದ್ಯರು, ಆಡು ಭಾಷೆಯಲ್ಲಿ ಡಾಕ್ಟರ್ ಗಳು ಜೀವ ಉಳಿಸುವ ಪ್ರತಿಭೆಗಳು ಅವರು. ಮನುಷ್ಯ ತನ್ನ ಏಳೆಗೆಗೆ ಉಳಿವಿಗೆ ತಾನೇ ಕಂಡುಕೊಂಡ ಶ್ರೇಷ್ಠ ವೃತ್ತಿ ಅದು. ಅದು ಇರಲಿಲ್ಲ ಎಂದರೆ ಎಲ್ಲರೂ ಎಲ್ಲದಕ್ಕೂ ದೇವರ ಮೊರೆ ಹೋಗಬೇಕಿರುತ್ತಿತ್ತು. ಆದರೆ ಹಾಗಾಗಿಲ್ಲ.  ವೈದ್ಯ ವೃತ್ತಿಯಲ್ಲಿ ಜಾತಿ ಇಲ್ಲವೇ? ಖಂಡಿತ ಇಲ್ಲ. ನಿಮ್ಹಾನ್ಸ್ ನ ಖ್ಯಾತ ವೈದ್ಯರಾದ ಗೆಳೆಯರಾದ ಡಾ.ಲಿಂಗರಾಜುರವರು ಬಹಳ ಸ್ಪಷ್ಟವಾಗಿ ಹೇಳುವುದು "ಇಲ್ಲಿ ಕೆಲಸ ಗೊತ್ತಿರುವವರೆ ಶ್ರೇಷ್ಠರು ಜಾತಿ ಗೀತಿ ಇಲ್ಲಿ ಏನೂ ಇಲ್ಲ" ಎಂದು. ಹಾಗಿದ್ದರೆ ಈಚೆಗೆ ಅಲೋಪತಿ ವಿರುದ್ಧ ಕೆಲವರಿಂದ ಟೀಕೆಗಳು ಬರುತ್ತವಲ್ಲ? ವೈದ್ಯ ವೃತ್ತಿಯಲ್ಲೂ ಧರ್ಮ ಹುಡುಕುವವರ ಜನ ವಿರೋಧಿಗಳ ಕ್ಷುಲ್ಲಕ ನಡೆಯದು. ವಾಸ್ತವ ಏನೆಂದರೆ ಹಿಂದೆ ಭಾರತದಲ್ಲಿ ವೈದ್ಯ ವೃತ್ತಿ ಇತಿಹಾಸದಲ್ಲಿ ಆರಂಭ ಆಯಿತು. ಆದರೆ ಮೌಢ್ಯ, ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ಅದು ಅಲ್ಲೇ ನಿಂತಿತು. ಹೇಗೆಂದರೆ ರೋಗಿಗಳನ್ನು ಅವರ ಜಾತಿ ಮೀರಿ ಮುಟ್ಟಬೇಕಾಗುತ್ತದಲ್ಲ ಎಂದು ಅನೇಕರು ಹಿಂಜರಿಯುತ್ತಿದ್ದರಂತೆ! ಈ ಬಗ್ಗೆ ತಮಿಳುನಾಡಿನ ಪಂಡಿತ ಅಯೋಧಿ ದಾಸ್ ರವರ ಜೀವನ ಚರಿತ್ರೆಯಲ್ಲಿ ನಾವು ಕಾಣಬಹುದು. ಬಾಬಾಸಾಹೇಬ್ ಅಂಬೇಡ್ಕರರು ಕೂಡ ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ವೈಜ್ಞಾನಿಕ ಸಂಶೋಧನೆ ಹಿಂದುಳಿಯಿತು ಎಂದು ಒಂದೆಡೆ ಹೇಳುತ್ತಾರೆ.  ಆದರೆ ವಸಾಹತುಶಾಹಿಗಳ ಆಗಮನದ ನಂ...