Skip to main content

Posts

ಅಂಬೇಡ್ಕರ್ ಮಕ್ಕಳು ಅದ್ಯಾವ ಮಟ್ಟಿಗೆ ಓದುತ್ತಿದ್ದಾರೆ?

  -ರಘೋತ್ತಮ ಹೊ.ಬ ಮೊನ್ನೆ ಒಂದಷ್ಟು ಯುವಕರು ಸಿಕ್ಕಿದ್ದರು. "ಜೈಭೀಮ್ಸರ್" ಎಂದ ಎಲ್ಲರೂ "ಏನ್ ಮಾಡ್ತಿದೀರಪ್ಪ, ಏನ್ ಓದಿದೀರಪ್ಪ" ಅಂದಾಗ "ಎಸ್ ಎಸ್ ಎಲ್ ಸಿ  ಸರ್" ಅಂದರು. ಮುಂದೆ ಓದ್ನಿಲ್ವ? ಅಂದಾಗ ಒಬ್ಬ ಮಾತ್ರ "ಪಿಯುಸಿ ಸರ್" ಅನ್ನುತ್ತ ಉಳಿದವರೆಲ್ಲ ಮುಖ ಕೆಳಗು ಮಾಡಿದರು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಇಂದಿನ ಶಿಕ್ಷಣದ ಮಟ್ಟವಿದು. ಒಂದೆಡೆ ಶೋಷಕ ವ್ಯವಸ್ಥೆ ಇವರು ಶಿಕ್ಷಣ ಪಡೆಯಬಾರದು ಎಂಬಂತೆ ನೀತಿ ರೂಪಿಸುತ್ತಿದ್ದರೆ ಮತ್ತೊಂದೆಡೆ ಇವರು ತಾವು ಓದಬೇಕು, ಮುಂದೆ ಬರಬೇಕು ಎಂಬ ಕನಿಷ್ಠ ಗ್ಯಾನ ಕೂಡ ಮಾಡದೆ ಹತ್ತನೇ ತರಗತಿ ಹಂತಕ್ಕೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಹಾಗೆ ಅಲ್ಲಿಂದಲೇ ಪ್ರಾರಂಭ ಕುಡಿತ, ಜೂಜು, ರೌಡಿಸಂ ನಂತಹ ಕಾನೂನುಬಾಹಿರ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ನಡವಳಿಕೆಗಳು. ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರು ಎಷ್ಟು ಓದಿದ್ದರು? ಬಹುಶಃ ಇತಿಹಾಸ ಅದನ್ನು ಈಗಲೂ ಒಂದು ದಾಖಲೆ ಎಂದೇ ಪರಿಗಣಿಸಬೇಕಾಗುತ್ತದೆ ಆ ಮಟ್ಟಿಗೆ ಡಾ.ಅಂಬೇಡ್ಕರರು ಓದಿದರು. ದೂರದ ಅಮೆರಿಕದಲ್ಲಿ ಎಂ.ಎ, ಪಿಹೆಚ್ಡಿ, ಲಂಡನ್ ನಲ್ಲಿ ಎಂ.ಎಸ್ಸಿ, ಡಿಎಸ್ಸಿ, ಬಾರ್ - ಅಟ್- ಲಾ, ಜರ್ಮನಿಯಲ್ಲೂ ತುಸು ಸಮಯ ವ್ಯಾಸಂಗ... ಅರೆ, ನಮ್ಮ ಹುಡುಗರು ಎಸ್ ಎಸ್ ಎಲ್ ಸಿ ಗೆ ನಿಂತು ಹೋಗುತ್ತಿದ್ದಾರೆ! ಇದ್ಯಾಕೆ ಅಂತ? ಅದರಲ್ಲೂ ಅವರ ಮೊಬೈಲ್ ಗಳಲ್ಲಿ ಜೈಭೀಮ್, ಬುದ್ಧ, ಅಂಬೇಡ್ಕರರ ವಾಲ್ ಪೇಪರ್ ಗಳು, ಫೇಸ...

ದಲಿತರು ಮತ್ತು ಗುಲಾಮಗಿರಿ

-ರಘೋತ್ತಮ ಹೊ.ಬ ಗುಲಾಮಗಿರಿ ಇದು ಅಮೆರಿಕಾದಲ್ಲಿ ಇರುವ ಪದ್ಧತಿ ಎಂದು ಎಲ್ಲರೂ ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ನಿಜ, ಅಮೆರಿಕದಲ್ಲಿ ಇದೆ. ಆದರೆ ಅಲ್ಲಿ ತುಂಬಾ ಸರಳವಾಗಿ, ಎಲ್ಲರೂ ಗುರುತಿಸುವಂತಹ ಕಪ್ಪು ಬಿಳಿ ಎಂಬಂತೆ ಇದೆ. ಪರಿಹಾರವೂ ಸರಳ. ಆದರೆ ಭಾರತದಲ್ಲಿ ಜಾತಿ ವ್ಯವಸ್ಥೆ ತುಂಬಿರುವ ನಮ್ಮಲ್ಲಿ ಗುಲಾಮಗಿರಿ ಸಂಕೀರ್ಣ ಅವಸ್ಥೆಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಕಪ್ಪು ಜನರಿಗೆ ಭಾರತದ ದಲಿತರು ಹೋಲಿಕೆಯಾಗುತ್ತಾರೆಯೇ? ಉತ್ತರ: ಮೇಲ್ನೋಟದ ಹೋಲಿಕೆಯಾಗಬಹುದು. ಆದರೆ ಆಳದಲ್ಲಿ ಸಮಸ್ಯೆ ತೀವ್ರ ಭಿನ್ನವಾಗಿರುತ್ತದೆ, ಗೊಂದಲ ಗೋಜಲುಗಳಿಂದ ತುಂಬಿರುತ್ತದೆ. ತುಂಬಿರುವಂತೆ ಶೋಷಕ ಶಕ್ತಿಗಳು, ಅವರ ಚಿಂತನೆಗಳು, ಚಟುವಟಿಕೆಗಳು ವ್ಯವಸ್ಥೆಯನ್ನು ಹಾಗೆ ಮಾಡುತ್ತಿರುತ್ತವೆ. ಆ ಶೋಷಕ ವ್ಯವಸ್ಥೆಗೆ ತನ್ನದೆ ದೇಶದ ಪ್ರಜೆಗಳಾದ ದಲಿತರು ಅಕ್ಷರ ಕಲಿಯುವುದು ಬೇಕಿರುವುದಿಲ್ಲ! ವಿಜ್ಞಾನ- ತಂತ್ರಜ್ಞಾನ, ವ್ಯಾಪಾರ - ವ್ಯವಹಾರ ಯಾವುದರಲ್ಲೂ ಮುಂದೆ ಬರುವುದು ಬೇಕಿರುವುದಿಲ್ಲ! ಕಡೆ ಪಕ್ಷ ಶುಚಿಯಾಗಿರುವುದನ್ನು, ಸ್ವಾಭಿಮಾನಿಗಳಾಗಿರುವುದನ್ನು ಬಯಸುವುದಿಲ್ಲ! ಬೇಕಿದ್ದರೆ ತಮ್ಮ ಮನೆಗಳಿಗೆ ವಿದೇಶಿಯರನ್ನು ಆಹ್ವಾನಿಸುತ್ತಾರೆಯೇ ಹೊರತು ಸ್ವದೇಶಿ ದಲಿತರನ್ನು ಆಹ್ವಾನಿಸುವುದಿಲ್ಲ, ಅವರ ಏಳಿಗೆ ಬಯಸುವುದಿಲ್ಲ.  ಅಂತಹ ಸ್ವದೇಶಿ ಜನರ ಏಳಿಗೆ ಬಯಸದ ಶೋಷಕ ವ್ಯವಸ್ಥೆ ಮತ್ತು ಜನ ಇರುವ ಪದ್ಧತಿ ನಮ್ಮದು. ಆದ್ದರಿಂದ ಹೇಳಿದ್ದು ನಮ್ಮಲ್ಲಿ ಇರುವ ಗ...

ಲಾಕ್ ಡೌನ್ ತೆರವುಗೊಳಿಸುತ್ತಿರುವ ಈ ಸಮಯ ದಲಿತರು ಬಿಸಿನೆಸ್ ಗೆ ತೆರೆದುಕೊಳ್ಳಲು ಸುಸಮಯ

  - ರಘೋತ್ತಮ ಹೊ.ಬ ಒಂದು ಓಟದ ಸ್ಪರ್ಧೆ ( ಅದು ಎಂದೂ ಮುಗಿಯದ ಸ್ಪರ್ಧೆ). ಅಂದಹಾಗೆ ಆ ಓಟದಲ್ಲಿ ಈಗಾಗಲೇ ನೂರಾರು ಮೈಲಿ ಓಡಿರುವವರು ಕೆಲವರು ಇನ್ನೂ ಆರಂಭದ ಗೆರೆಯಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ಇರುವವರು. ಆರಂಭದ ಗೆರೆಯಲ್ಲಿ ಇರುವವರು "ನೀವು ಓಡುವಂತಿಲ್ಲ ಎಂಬ ಕಾನೂನು ನಿರ್ಬಂಧದ ಮೂಲಕ ತಡೆಯಲ್ಪಟ್ಟವರು, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಹಳ ಹಿಂದೆಯೇ ಉಳಿಯಲ್ಪಟ್ಟವರು, ಈಗಲೂ ನಿಮ್ಮ ಕೈಯಲ್ಲಿ ಆಗಲ್ಲ ಎಂಬ ಆತ್ಮವಿಶ್ವಾಸ ದ ಕೊರತೆಯಿಂದ ನರಳುತ್ತಿರುವವರು..". ಖಂಡಿತ, ಈ ದೃಷ್ಟಾಂತ ದಲಿತರ ಬಿಸಿನೆಸ್ ಗೆ ಸಂಬಂಧಿಸಿದ್ದು. ಮನುಸ್ಮೃತಿಯಂತಹ ಕಾನೂನುಗಳ ಮೂಲಕ ಇವರಿಗೆ ವ್ಯಾಪಾರ ವ್ಯವಹಾರ ಮಾಡಲು ಶತಶತಮಾನಗಳು ತಡೆಯೊಡ್ಡಲಾಗಿದೆ. ಅಸ್ಪೃಶ್ಯತೆ ಮೂಲಕ " ಅಯ್ಯೋ , ನಮ್ಮ ಕೈಯಲ್ಲಿ ಆಗೋದೆ ಇಲ್ಲ " ಎಂಬ ಮಟ್ಟಕ್ಕೆ ಇವರನ್ನು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತಂದು ನಿಲ್ಲಿಸಲಾಗಿದೆ! ಆದರೆ ಸದ್ಯದ ಅಪರೂಪದ ವಾಸ್ತವ ಎಂದರೆ ಕೊರೊನ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ನೂರಾರು ಮೈಲಿ ಓಡಿ ಮುಂದೆ ಹೋಗಿದ್ದವರು ಮತ್ತೆ ವಾಪಸ್ ಆರಂಭಿಕ ಗೆರೆಗೆ ಬಂದಿದ್ದಾರೆ. ದಲಿತರ ಜೊತೆಗೆ ನಿಂತಿದ್ದಾರೆ ಅಥವಾ ದಲಿತರು ಅವರ ಜೊತೆ ಇಂದು ಸ್ಪರ್ಧೆ ಮಾಡಲು ಸುಸಮಯ. ಯಥಾಪ್ರಕಾರ ದಲಿತರಿಗೆ ಬಂಡವಾಳ, ಆತ್ಮವಿಶ್ವಾಸ, ನಮ್ಮ ಕೈಯಲ್ಲಿ ಆಗುತ್ತಾ, ನಾವು ಮಾಡಬಹುದಾ ಎಂಬ ಆಲೋಚನೆಗಳು ತೊಡಕಾಗಿ ಕಾಣುತ್ತವೆ. ಆದರೆ ಸ್ಪರ್ಧೆಗೆ ಇಳಿದ ಮೇಲೆ ಭಾ...

ವೈದ್ಯರಿಗೆ ನಮನಗಳು

  -ರಘೋತ್ತಮ ಹೊ.ಬ ವೈದ್ಯರು, ಆಡು ಭಾಷೆಯಲ್ಲಿ ಡಾಕ್ಟರ್ ಗಳು ಜೀವ ಉಳಿಸುವ ಪ್ರತಿಭೆಗಳು ಅವರು. ಮನುಷ್ಯ ತನ್ನ ಏಳೆಗೆಗೆ ಉಳಿವಿಗೆ ತಾನೇ ಕಂಡುಕೊಂಡ ಶ್ರೇಷ್ಠ ವೃತ್ತಿ ಅದು. ಅದು ಇರಲಿಲ್ಲ ಎಂದರೆ ಎಲ್ಲರೂ ಎಲ್ಲದಕ್ಕೂ ದೇವರ ಮೊರೆ ಹೋಗಬೇಕಿರುತ್ತಿತ್ತು. ಆದರೆ ಹಾಗಾಗಿಲ್ಲ.  ವೈದ್ಯ ವೃತ್ತಿಯಲ್ಲಿ ಜಾತಿ ಇಲ್ಲವೇ? ಖಂಡಿತ ಇಲ್ಲ. ನಿಮ್ಹಾನ್ಸ್ ನ ಖ್ಯಾತ ವೈದ್ಯರಾದ ಗೆಳೆಯರಾದ ಡಾ.ಲಿಂಗರಾಜುರವರು ಬಹಳ ಸ್ಪಷ್ಟವಾಗಿ ಹೇಳುವುದು "ಇಲ್ಲಿ ಕೆಲಸ ಗೊತ್ತಿರುವವರೆ ಶ್ರೇಷ್ಠರು ಜಾತಿ ಗೀತಿ ಇಲ್ಲಿ ಏನೂ ಇಲ್ಲ" ಎಂದು. ಹಾಗಿದ್ದರೆ ಈಚೆಗೆ ಅಲೋಪತಿ ವಿರುದ್ಧ ಕೆಲವರಿಂದ ಟೀಕೆಗಳು ಬರುತ್ತವಲ್ಲ? ವೈದ್ಯ ವೃತ್ತಿಯಲ್ಲೂ ಧರ್ಮ ಹುಡುಕುವವರ ಜನ ವಿರೋಧಿಗಳ ಕ್ಷುಲ್ಲಕ ನಡೆಯದು. ವಾಸ್ತವ ಏನೆಂದರೆ ಹಿಂದೆ ಭಾರತದಲ್ಲಿ ವೈದ್ಯ ವೃತ್ತಿ ಇತಿಹಾಸದಲ್ಲಿ ಆರಂಭ ಆಯಿತು. ಆದರೆ ಮೌಢ್ಯ, ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ಅದು ಅಲ್ಲೇ ನಿಂತಿತು. ಹೇಗೆಂದರೆ ರೋಗಿಗಳನ್ನು ಅವರ ಜಾತಿ ಮೀರಿ ಮುಟ್ಟಬೇಕಾಗುತ್ತದಲ್ಲ ಎಂದು ಅನೇಕರು ಹಿಂಜರಿಯುತ್ತಿದ್ದರಂತೆ! ಈ ಬಗ್ಗೆ ತಮಿಳುನಾಡಿನ ಪಂಡಿತ ಅಯೋಧಿ ದಾಸ್ ರವರ ಜೀವನ ಚರಿತ್ರೆಯಲ್ಲಿ ನಾವು ಕಾಣಬಹುದು. ಬಾಬಾಸಾಹೇಬ್ ಅಂಬೇಡ್ಕರರು ಕೂಡ ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ವೈಜ್ಞಾನಿಕ ಸಂಶೋಧನೆ ಹಿಂದುಳಿಯಿತು ಎಂದು ಒಂದೆಡೆ ಹೇಳುತ್ತಾರೆ.  ಆದರೆ ವಸಾಹತುಶಾಹಿಗಳ ಆಗಮನದ ನಂ...

ಬೆಳಕಾಗು

  - ರಘೋತ್ತಮ ಹೊ.ಬ ನಿನ್ನ ತುಳಿಯಲು ಅಲ್ಲಿ ಬಲೆ ನೇಯ್ದಿಹರು ಬಯಲಲ್ಲಿ ಸಂಜೆ ಅಲ್ಲಿಗೆ ಜೀತ ಮಾಡಲು ಹೋಗುವೆಯಾ ನಿನ್ನ ಊರಾಚೆ ಇಡಲು ಕತೆ ಕಟ್ಟುತಿಹರು ಅಲ್ಲಿ ಅರಿಯದೆ ನೀ ಕುಡಿದು ಕಣ್ಮುಚ್ಚುವೆಯಾ ನಿನ್ನ ಅಕ್ಕ ತಂಗಿಯರ  ದೇವದಾಸಿಯರ ಮಾಡಲು ಅಲ್ಲಿ ಮಂತ್ರ ತಂತ್ರ ಕುತಂತ್ರ  ಮಾಡುತಿಹರು ಅಲ್ಲಿ ಅರಿಯದೆ ನೀ ಮತ್ತೆ ದಾಸನಾಗುವೆಯಾ ಆಕೆಯ ದಾಸಿಯಾಗಿಸುವೆಯಾ ನಿನ್ನ ಏಳಿಗೆ ತುಳಿಯಲು ತರ್ಕ ಕುತರ್ಕ ವಿತಂಡವಾದಗೈಯುತಿಹರು ಅಲ್ಲಿ ತಿಳಿಯದೆ ಮತ್ತೆ ನೀ ತುಳಿತಕ್ಕೊಳಗಾಗುವೆಯಾ ಸಂಜೆಗಿಟ್ಟಿಲ್ಲದಿದ್ದರು ಕಂದ ತಂದೆ ಅಂಬೇಡ್ಕರರ ಓದು ತಂಗಾಳಿಯ ತುಂಬಿಕೊ ಆತ್ಮಗೌರವವ ಹೃದಯಕ್ಕೆ ಸೆಳೆದುಕೊ ಮತ್ತೆ ಮತ್ತೆ ನೆನೆದುಕೊ ಆ ನಿನ್ನ ತಾತ ಮುತ್ತಾತರ ಗುಲಾಮಗಿರಿಯ ನೆನಹ ಬಡವನಾದರೇನು ಮತ್ತೆ ಮುಟ್ಟದಿರು ಶೌಚಾಲಯದ ಪೊರಕೆಯ ಹೊಟ್ಟೆಗಿಲ್ಲದಿದ್ದರೂ ಮುಟ್ಟದಿರವರ ಚಪ್ಪಲಿಯ ಹೊಲಿಯಲು ಅಕ್ಷರದ ಹೂವಾಗು ಬುದ್ಧನಾಗು ಸ್ವಾಭಿಮಾನದ ಜ್ಯೋತಿಯಾಗು ನಿನಗೆ ನೀನೆ ಬೆಳಕಾಗು ನಿನಗೆ ನೀನೆ ಬೆಳಕಾಗು

Caste and Business

  - Raghothama Hoba Usually daily I go to market to purchase many things as I needed. I go to hotel, mall, vegetable vendors,... So on. Everywhere I find people but I doesn't find my own people viz, my downtrodden people. If I find them it may be near toilets ready to clean it, on the roads holding brooms to the collect wastages. Sometimes I find them as labourers to load lorries with rice, grocery bags etc,. Definitely I never found them as owners. Alas, what's happening around us! Where's our men in shop as owners chamber collecting huge amount of money? May be it a dream up to now. Question is can we still keep it as a dream for the coming generations too? Can't we not make it a reality at least for future! Basically we thought just about manusmriti's gradation list, that also first position that of brahmans. But never thought about vaishyas where they are fixed with money with profession of trading! Arey, what's the problem with us? Because its business that...

ಜಾತಿಗಳು ಸ್ವಾಯತ್ತ ಸಂಸ್ಥೆಗಳು

  "ಜಾ ತಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳ ನಡುವೆ ತಮ್ಮ ಜಾತಿಗಳ ಒಳಕ್ಕೆ ಇತರೆ ಹೊಸ ಸದಸ್ಯರನ್ನು ಸೇರಿಸಿಕೊಂಡು, ಅಂತಹವರನ್ನು ತಮ್ಮ ಸಾಮಾಜಿಕ ಜೀವನದಲ್ಲಿ ಒಳಗೊಳ್ಳುವಂತೆ ಒತ್ತಾಯಪಡಿಸುವ ಯಾವುದೇ ಪ್ರಾಧಿಕಾರ ಇಲ್ಲ". -ಡಾ.ಬಿ.ಆರ್.ಅಂಬೇಡ್ಕರ್ (Annihilation of caste, Pp.54, ಕನ್ನಡಕ್ಕೆ: ರಘೋತ್ತಮ ಹೊ.ಬ)