ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈರ್ಲಾಂಜಿ ಗ್ರಾಮದ ಏಕೈಕ ದಲಿತ ಕುಟುಂಬ ತನ್ನ ಪಾಡಿಗೆ ತಾನು ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್ ಆ ಕುಟುಂಬದ ಸದಸ್ಯರು. ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾÀದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ ಅಧ್ಯಾಯವನ್ನು ಎಂದು! ಏಕೆಂದರೆ ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈರ್ಲಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು. ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ ಅಲ್ಲಿ ನಡೆದ ದೌರ್ಜನ್ಯ ತನ್...