Skip to main content

Posts

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...
Recent posts

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

ಅಸ್ಪೃಶ್ಯತೆಯ ಕಾರಣ...

  "ಅಸ್ಪೃಶ್ಯತೆಯ ಕಾರಣಕ್ಕೆ ನಿಮ್ಮ ಅರ್ಹ ಕೆಲಸಗಳು ಪ್ರಶಸ್ತಿಗಳಿಂದ ವಂಚಿತವಾಗುತ್ತಿವೆ. ನಿಮ್ಮ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳಿಗೆ ಯಾವುದೇ ಮೆಚ್ಚುಗೆ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಿಮಗೆ ಸೈನ್ಯ, ಪೊಲೀಸ್ ಇಲಾಖೆ, ನೌಕಾದಳ ಹೀಗೆ ಎಲ್ಲದರಿಂದಲೂ ನಿಮ್ಮನ್ನು ದೂರ ಇಡಲಾಗಿದೆ. ಅಸ್ಪೃಶ್ಯತೆಯು ಒಂದು ಶಾಪವಾಗಿದ್ದು ಅದು ನಿಮ್ಮ ಲೌಕಿಕ ಅಸ್ತಿತ್ವ, ಗೌರವ ಮತ್ತು ಹೆಸರು ಎಲ್ಲವನ್ನೂ ನಾಶಗೊಳಿಸಿದೆ". -ಡಾ.ಬಿ.ಆರ್.ಅಂಬೇಡ್ಕರ್ (ಆಧಾರ: Dr.Ambedkar important messages, Sayings, Wit and Wisdom by N.C.Rattu. Pp.60, ಕನ್ನಡಕ್ಕೆ: ರಘೋತ್ತಮ ಹೊಬ)

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಫುಟ್ ಪಾತ್ ಗಳು: ದಲಿತ ಉದ್ಯಮಶೀಲತೆಯ ಪ್ರಯೋಗಶಾಲೆಗಳು?- ರಘೋತ್ತಮ ಹೊಬ

"ಸರ್, ಏನ್ ವ್ಯಾಪಾರ ಮಾಡ್ಬೇಕು? ಹೇಗೆ ವ್ಯಾಪಾರ ಮಾಡ್ಬೇಕು? ಬಂಡವಾಳ ಹೇಗೆ?... ಈಚೆಗೆ ಇಂತಹ ಪ್ರಶ್ನೆ ಗಳು ನನಗೆ ಮಾಮೂಲಿಯಾಗಿಬಿಟ್ಟಿವೆ. ಸಲಹೆ ನೀಡುತ್ತಾ ನೀಡುತ್ತಾ ಒಂದು ರೀತಿ ಬಿಸಿನೆಸ್ ಗುರು ಆಗ್ಬಿಟ್ಟಿದ್ದೇನೆ. ಇರಲಿ, ನೋ ಪ್ರಾಬ್ಲಂ. ಈ ನಿಟ್ಟಿನಲ್ಲಿ ಸ್ನೇಹಿತರೊಬ್ಬರ ಈ ಸಲದ ಪ್ರಶ್ನೆ ಅಂದರೆ ದಲಿತ ಸಮುದಾಯದ ಯುವಕರು/ ಯುವತಿಯರು ತುಂಬಾ ಸರಳವಾಗಿ ಕಡಿಮೆ ವೆಚ್ಚದಲ್ಲಿ ಬಿಸಿನೆಸ್ ಹೇಗೆ ಮಾಡಬಹುದು? ಎಲ್ಲಿ ಮಾಡಬಹುದು ಎಂಬುದು. ಉತ್ತರ ಸರಳ: ಫುಟ್ ಪಾತ್ ಗಳು. ಹೌದು, ರಸ್ತೆ ಫುಟ್ ಪಾತ್ ಗಳು, ಖಾಲಿ ನಿವೇಶನಗಳು ದಲಿತ ವ್ಯಾಪಾರ- ವ್ಯವಹಾರದ ಪ್ರಯೋಗ ಶಾಲೆಗಳಾಗುತ್ತವೆ. ಕಡಿಮೆ ಬಂಡವಾಳ, ಹೆಚ್ಚಿನ ಕಸ್ಟಮರ್ ಗಳನ್ನು ಸೆಳೆಯುವ ಸ್ಥಳಗಳು ಇವು ಎಂಬುದು ಪ್ರಮುಖ ಕಾರಣ. ಇದಕ್ಕೆ ಬೇಕಿರುವುದು? ಧೃಡನಿರ್ಧಾರ ಮತ್ತು ಆತ್ಮವಿಶ್ವಾಸ. ಹಾಗೆಯೇ ನಾಚಿಕೆ ಮತ್ತು ಮುಜುಗರರಹಿತ ನಿಲುವು. ಖಂಡಿತ, ಈ ಮೂರು ಅಂಶಗಳಿದ್ದರೆ ಬಂಡವಾಳ ಇಲ್ಲದಿದ್ದರೂ ದಲಿತ ಸಮುದಾಯದ ಯಾರೇ ಆದರೂ ಬಿಸಿನೆಸ್ ಮಾಡಬಹುದು.  ಧೃಡನಿರ್ಧಾರದ ಬಗ್ಗೆ ಹೇಳುವುದಾದರೆ, ದಲಿತ ಯುವಕ/ ಯುವತಿಯೋರ್ವ ತಾನು ಬಿಸಿನೆಸ್ ಮಾಡಬೇಕು ಎಂದು ಕೊಳ್ಳುತ್ತಾನೆ/ಳೆ. ಆದರೆ ಅಸ್ಪೃಶ್ಯತೆ ಕಾರಣ ಆತನಿಗೆ/ ಆಕೆಗೆ ಇತರೆ ವರ್ಗದವರು ಅಂಗಡಿ ಮಳಿಗೆ ಬಾಡಿಗೆ ಕೊಡುವುದಿಲ್ಲ. ಪ್ರಶ್ನೆ ಅಂದರೆ ಏನು ಮಾಡಬೇಕು? ಬಿಸಿನೆಸ್ ಚಿಂತನೆ ಬಿಟ್ಟು ಬಿಡುವುದೆ? ಇಲ್ಲ. ಖಾಲಿ ಇರುವ ಸಾರ್ವಜನಿಕ ಜಾಗಗಳಲ್ಲಿ,...

Dalits: Lest we forget these three -Raghothama Hoba

  Recently I visited a school. As I observed, there was great exodus of dalit students. I didn't go to enquire the school. Instead directly went their streets. In their homes too students were not there. Elders who were there told me "All are on coolie in nearby fields. Some may had joined factories, petrol bunks etc,". Also they went on telling that "They(students) are not committed to read or write. Evening they come, enjoy their liquor, spent their time like this only. Why you take so much risk about them? Better you be happy yourself, leave them what they are". With heavy heart I came back and begin to think what happened to our boys, why they are neglecting education? A serious question that every dalit intellectual shoul ask. In another picture, in a city there is a huge dalit colony. Estimated population would be nearly 5000. And as I have observed many times every day in the beginning edge of that colony next to highway in the evening a huge chat street ...

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...