Skip to main content

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್ -ರಘೋತ್ತಮ ಹೊ.ಬ



ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI ನ ಅರ್ಥಶಾಸ್ತ್ರಕ್ಕೂ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯ RBIಗೂ ಅಂಬೇಡ್ಕರ್ ಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೇಳುವುದಾದರೆ...

ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ 1913ರಲ್ಲಿ ಅಂಬೇಡ್ಕರರು ಮುಂಬಯಿನ ಎಲ್ಫಿನ್ ಸ್ಟೋನ್ ಕಾಲೇಜ್ ನಲ್ಲಿ ಬಿ.ಎ ಪದವಿ ಪಡೆದರು. ವಿಷಯ: ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ. ಮುಂದುವರೆದು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಅದೇ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ತದನಂತರ 1917ರಲ್ಲಿ ಅಂಬೇಡ್ಕರರು ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದರಾದರೂ ಅರ್ಥಶಾಸ್ತ್ರದ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟು ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 1921ರಲ್ಲಿ "ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ" ಎಂಬ ಪ್ರೌಢ ಪ್ರಬಂಧ (thesis) ಮಂಡಿಸಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ  ಪದವಿ ಪಡೆದರು. ಗಮನಿಸಿ, ಅಂಬೇಡ್ಕರರ ಪ್ರಬಂಧದ ಈ ವಿಷಯವನ್ನು ಆ ಮೂಲಕ ಭಾರತೀಯ ಹಣಕಾಸು ವ್ಯವಸ್ಥೆಗೆ ಒಂದು ರೂಪ ಕೊಡುವಲ್ಲಿ ಅವರ ಮೆದುಳಿನಲ್ಲಿ ಹುಟ್ಟಿದ ಆ ವಿಷಯವನ್ನು. ಅಂದರೆ "ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ", ಅರ್ಥಾತ್ ಹಣಕಾಸಿನ ಚಲಾವಣೆಯನ್ನು ವಿಕೇಂದ್ರೀಕರಿಸುವುದು.

ಮುಂದುವರೆದು ಇದೇ ವಿಷಯದ ಸಂಶೋಧನೆ ಮುಂದುವರೆಸಿದ ಅಂಬೇಡ್ಕರರು 1923ರಲ್ಲಿ " ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ. ಭಾರತೀಯ ಕರೆನ್ಸಿ ಮತ್ತು ಬ್ಯಾಂಕಿಂಗ್ ನ ಇತಿಹಾಸ " ಎಂಬ ಮತ್ತೊಂದು ಪ್ರೌಢ ಪ್ರಬಂಧ ಮಂಡಿಸಿದರು. ಅಂದಹಾಗೆ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಬೇಡ್ಕರರ ಈ ಅದ್ಭುತ ಕೃತಿಗೆ "ಡಾಕ್ಟರ್ ಆಫ್ ಸೈನ್ಸ್ (D.Sc)" ಪದವಿ ಇತ್ತು ಗೌರವಿಸಿತು ಮತ್ತು ಅಂಬೇಡ್ಕರರ ಈ D.Sc ಪದವಿ ಪುರಸ್ಕೃತ ಈ ಕೃತಿಯನ್ನು ಲಂಡನ್ ನ "ಪಿ.ಎಸ್.ಕಿಂಗ್ ಅಂಡ್ ಕಂಪನಿ" ಪ್ರಕಾಶನ ಸಂಸ್ಥೆಯು "Problem of Rupee" ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಅದೇ ವರ್ಷ ಅಂದರೆ 1923 ರಲ್ಲಿ ಪ್ರಕಟಿಸಿತು. 

 ಹೀಗೆ ಅಂಬೇಡ್ಕರರ ಅರ್ಥಶಾಸ್ತ್ರದ ಚಿಂತನೆ, ಭಾರತದ ಹಣಕಾಸು ವ್ಯವಸ್ಥೆಯ ಸಮಸ್ಯೆ ಕುರಿತ ಈ ಸಂಶೋಧನೆ ಲಂಡನ್ ನಲ್ಲೇ ಬ್ರಿಟಿಷ್ ಆಡಳಿತಗಾರರ ಕೈಸೇರುತ್ತಲೇ ಅಂಬೇಡ್ಕರರು "ರೂಪಾಯಿಯ ಸಮಸ್ಯೆ , ಅದರ ಮೂಲ ಮತ್ತು ಪರಿಹಾರ" ಎಂದು ಹೇಳಿದ್ದರಲ್ಲ, ಅದರ ಪರಿಹಾರಾರ್ಥವಾಗಿ ಬ್ರಿಟಿಷ್ ಸರ್ಕಾರ 1926ರಲ್ಲಿ ಹಿಲ್ಟನ್ ಯಂಗ್ ರವರ ನೇತೃತ್ವದಲ್ಲಿ Royal Commission on Indian Currency and Finance ಎಂಬ ಆಯೋಗ ನೇಮಿಸಿತು. ಈ ವಿಷಯ ದಾಖಲಿಸುತ್ತ ಅಂಬೇಡ್ಕರ್ ವಾದಿ ಲೇಖಕ ಕ್ರಿಸ್ಟೋಫರ್ ಜೆಫರ್ಲೆಟ್
"ಹಾಗೆ ಭೇಟಿಕೊಟ್ಟ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಕೂಡ ಆಕರ ಗ್ರಂಥವಾಗಿ (reference book) ಅಂಬೇಡ್ಕರರು ಪ್ರಕಟಿಸಿದ್ದ "ಪ್ರಾಬ್ಲಂ ಆಫ್ ರುಪೀ" ಎಂಬ ಆ ಕೃತಿ ಇತ್ತು" ಎನ್ನುತ್ತಾರೆ. 

ಈ ಹಿನ್ನೆಲೆಯಲ್ಲಿ ಆ ಆಯೋಗ ಅಂಬೇಡ್ಕರರು ಎತ್ತಿದ್ದ ಸಮಸ್ಯೆಯ ಈ ಎಳೆ ಹಿಡಿದು ಭಾರತದಲ್ಲಿ ದೇಶದಾದ್ಯಂತ ಸಂಚರಿಸಿ ಅನೇಕರಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿತು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರು ಕೂಡ ಆ ಆಯೋಗದ ಮುಂದೆ ಖುದ್ದು ಹಾಜರಾಗಿ ಸಾಕ್ಷಿ ನುಡಿದರು, ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಮಂಡಿಸಿದರು. (ಅಂಬೇಡ್ಕರರ ಆ ಲಿಖಿತ ಸಾಕ್ಷಿ ಕೂಡ ಭಾರತ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರರ ಬರಹಗಳು ಭಾಷಣಗಳು ಸಂಪುಟಗಳ ಸರಣಿಯಲ್ಲಿದೆ.) 

ಹಾಗಿದ್ದರೆ ಕರೆನ್ಸಿ ಕುರಿತು ಅಂಬೇಡ್ಕರ್
ಏನು ಪ್ರತಿಪಾದಿಸಿದರು? ಈ ಬಗ್ಗೆ ಹೇಳುವ ಅವರ "ಕರೆನ್ಸಿ ನಿಯಂತ್ರಣ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದು ಅಪಾಯಕಾರಿ. ಯಾಕೆಂದರೆ ಕರೆನ್ಸಿ ಪೂರೈಕೆಯನ್ನು ವಾಣಿಜ್ಯದ ಅಗತ್ಯಕ್ಕೆ ತಕ್ಕಂತೆ
ಹೆಚ್ಚಿಸಬೇಕು ಅಥವಾ ಕಡಿಮೆಗೊಳಿಸಬೇಕು. ಆದರೆ ಆತಂಕದ ವಿಷಯವೆಂದರೆ ಸರ್ಕಾರ ಕೆಲವೊಮ್ಮೆ ಯಾವುದೇ ಪಶ್ಚಾತ್ತಾಪ ಪಡದೆ ಅನಿಯಂತ್ರಿತವಾಗಿ ಕರೆನ್ಸಿ ಉತ್ಪಾದಿಸಬಹುದು. ಇದು ಇಡೀ ಕರೆನ್ಸಿ ವ್ಯವಸ್ಥೆಯನ್ನೇ ನಾಶಗೊಳಿಸಲಿದೆ. ಈ ನಿಟ್ಟಿನಲ್ಲಿ ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ"
ಆದ್ದರಿಂದ ಹಿಲ್ಟನ್ ಯಂಗ್ ಆಯೋಗದ ಮುಂದೆ ಅಂಬೇಡ್ಕರರು ಹೇಳುವುದು ಕರೆನ್ಸಿ ಪೂರೈಕೆ ಮತ್ತು ನಿಯಂತ್ರಣವನ್ನು ಸರ್ಕಾರಕ್ಕೆ ವಹಿಸುವ ಬದಲು ಕೇಂದ್ರೀಯ ಬ್ಯಾಂಕ್ ಒಂದನ್ನು ಸ್ಥಾಪಿಸಿ ಅದಕ್ಕೆ ವಹಿಸಬೇಕು ಎಂದು.

ಅಂದಹಾಗೆ ಇಂತಹ ಸಾಕ್ಷಿ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಹಿಲ್ಟನ್ ಯಂಗ್ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುತ್ತಲೇ ಕೇಂದ್ರೀಯ ಅಸೆಂಬ್ಲಿಯು 1934ರಲ್ಲಿ  RBI ಕಾಯಿದೆಯನ್ನು ಅಂಗೀಕರಿಸಿತು. ಪರಿಣಾಮ 1935 ಏಪ್ರಿಲ್ 1 ರಂದು RBI ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಕುರಿತು ಮಾಹಿತಿ ದಾಖಲಿಸುವ ವಿಕಿಪೀಡಿಯ RBI was conceptualized as per the guidelines, working style and outlook presented by Bhimrao Ramji Ambedkar ಎನ್ನುತ್ತದೆ. 

ಪ್ರಶ್ನೆ ಎಂದರೆ ಈ ಮಾಹಿತಿ ಭಾರತೀಯರಿಗೆ ಎಷ್ಟು ತಿಳಿದಿದೆ? ಎಂಬುದು. ಏಕೆಂದರೆ ಜನಸಾಮಾನ್ಯರು ಸುಮ್ಮನೆ ನೋಟು ಎಣಿಸಿಕೊಳ್ಳುತ್ತಾರೆ, ಅಲ್ಲಿ ಕಾಣುವ Reserve Bank of India ಎಂಬ ಮುದ್ರಣ ಕಣ್ತುಂಬಿಕೊಳ್ಳುತ್ತಾರೆ. ಆದರೆ ಅದರ ಸ್ಥಾಪನೆ ಹಿಂದಿರುವ ಚಿಂತನೆ? ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಓರ್ವ ವಿದ್ಯಾರ್ಥಿ ತನ್ನ ಬಿಎ ಪದವಿಯಿಂದ ಹಿಡಿದು ಡಿಎಸ್ಸಿ ಪದವಿವರೆಗೆ ಅದನ್ನು ಪ್ರತಿಪಾದಿಸಿದ ರೀತಿ? ಪ್ರತಿಪಾದಿಸಿ ಸ್ವತಃ ಅದರ ಸ್ಥಾಪನೆಗೆ ಸಾಕ್ಷಿ ನುಡಿದ ರೀತಿ? ನಿಜ, ಬಾಬಾಸಾಹೇಬ್ ಅಂಬೇಡ್ಕರರೇನು ತನ್ನನ್ನು RBI ಸ್ಥಾಪಕ ಎಂದು ಹೇಳಲಿ ಅಥವಾ ಜನಸಾಮಾನ್ಯರು ಹಾಗೆ ಗುರುತಿಸಲಿ ಎಂದು ಈ ಸಾಧನೆ ಮಾಡಿರಲಿಕ್ಕಿಲ್ಲ. ಅರ್ಥಶಾಸ್ತ್ರದ ಓರ್ವ ಸಂಶೋಧನಾರ್ಥಿಯಾಗಿ ತಮ್ಮ ಸಂಶೋಧನೆ ಮೂಲಕ ಆ ಕಾಲದಲ್ಲಿ ರೂಪಾಯಿ ಎದುರಿಸುತ್ತಿದ್ದ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಅವರು ಕಂಡುಹಿಡಿದರು. ಈ ನಿಟ್ಟಿನಲ್ಲಿ  ಅಂಬೇಡ್ಕರರ ಅಂತಹ RBI ಸ್ಥಾಪನೆಯ ಸಾಧನೆಯನ್ನು ನಾವು ಅಂದರೆ ಜನಸಾಮಾನ್ಯರು ಗುರುತಿಸಬೇಕು, ಇತಿಹಾಸದಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಬಳಸುವ ಹಣಕ್ಕೆ ಮೌಲ್ಯ ಇರುವುದಿಲ್ಲ. ಏಕೆಂದರೆ ಅಂಬೇಡ್ಕರರು ಅದಕ್ಕೊಂದು ರೂಪ ಕೊಟ್ಟು ಇಂದು ನಮ್ಮ ಕೈಗೆ ಅದು ಸಿಗುವಂತೆ ಮಾಡದಿದ್ದರೆ ಅದು ಅದ್ಯಾವ ಶ್ರೀಮಂತನ ತಿಜೋರಿ ಸೇರುತ್ತಿತ್ತೋ! ಹಣ ಎಂದರೆ ಹೆಣವಿರಲಿ ನಾವೇ ಬಾಯಿ ಬಾಯಿ ಬಿಡಬೇಕಿತ್ತಷ್ಟೆ!!

Comments

Post a Comment

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...