ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ. ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...