Skip to main content

Posts

Showing posts from 2020

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್ -ರಘೋತ್ತಮ ಹೊ.ಬ

ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI ನ ಅರ್ಥಶಾಸ್ತ್ರಕ್ಕೂ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯ RBIಗೂ ಅಂಬೇಡ್ಕರ್ ಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೇಳುವುದಾದರೆ... ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ 1913ರಲ್ಲಿ ಅಂಬೇಡ್ಕರರು ಮುಂಬಯಿನ ಎಲ್ಫಿನ್ ಸ್ಟೋನ್ ಕಾಲೇಜ್ ನಲ್ಲಿ ಬಿ.ಎ ಪದವಿ ಪಡೆದರು. ವಿಷಯ: ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ. ಮುಂದುವರೆದು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಅದೇ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ತದನಂತರ 1917ರಲ್ಲಿ ಅಂಬೇಡ್ಕರರು ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದರಾದರೂ ಅರ್ಥಶಾಸ್ತ್ರದ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟು ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 1921ರಲ್ಲಿ "ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ" ಎಂಬ ಪ್ರೌಢ ಪ್ರಬಂಧ (thesis) ಮಂಡಿಸಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ  ಪದವಿ ಪಡೆದರು. ಗಮನಿಸಿ, ಅಂಬೇಡ್ಕರರ ಪ್ರಬಂಧದ ಈ ವಿಷಯವನ್ನು ಆ ಮೂಲಕ ಭಾರತೀಯ ಹಣಕಾಸು ವ್ಯವಸ್ಥೆಗೆ ಒಂದು ರೂಪ ಕೊಡುವಲ್ಲಿ ಅವರ ಮೆದುಳಿನಲ್ಲಿ ಹುಟ್ಟಿದ ಆ ವಿಷಯವ...